alex Certify ಮರಾಠಿಯಲ್ಲಿಯೂ ನಾಮಫಲಕ ಅಳವಡಿಸಬೇಕು ಎಂದ ಶಾಸಕಿ; ಎಲ್ಲೆಡೆ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಾಠಿಯಲ್ಲಿಯೂ ನಾಮಫಲಕ ಅಳವಡಿಸಬೇಕು ಎಂದ ಶಾಸಕಿ; ಎಲ್ಲೆಡೆ ಆಕ್ರೋಶ

ಬೆಳಗಾವಿ: ರಾಜ್ಯದ ಶಾಸಕಿಯಾಗಿದ್ದರೂ ಕನ್ನಡ ಮಾತನಾಡಲು ಬಾರದ ಜನರಿಗಾಗಿ ಮರಾಠಿಯಲ್ಲಿ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವ ವಿಡಿಯೋ ವೈರಲ್ ಆಗಿದ್ದು, ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ವಿರುದ್ಧವೇ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿರುವುದು. ಜಿಲ್ಲೆಯ ಖಾನಾಪುರ ತಾಲೂಕಿನ ಗ್ರಾಮ ಒನ್ ಕೇಂದ್ರದ ಉದ್ಘಾಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್, ಕನ್ನಡ ಬಾರದವರಿಗಾಗಿ ಮರಾಠಿಯಲ್ಲಿ ಮಾಹಿತಿ ಹಾಗೂ ನಾಮಫಲಕ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವಿಡಿಯೋವನ್ನು ಸ್ವತಃ ಅವರೇ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಾವು ಜನ ಸೇವೆ ಮಾಡುವವರು ಎಲ್ಲರಿಗೂ ಒಳ್ಳೆಯದಾಗುವುದನ್ನು ಮಾಡಬೇಕು. ಇಲ್ಲಿ ಕನ್ನಡ ಹಾಗೂ ಮರಾಠಿ ಗೊತ್ತಿದ್ದವರು ವಾಸಿಸುತ್ತಿದ್ದಾರೆ. ಹಲವರಿಗೆ ಕನ್ನಡ ಬರುವುದಿಲ್ಲ. ಹೀಗಾಗಿ ಅವರಿಗೂ ಅರ್ಥವಾಗುವಂತೆ ಮಾಹಿತಿ ಬರೆಯಬೇಕು ಎಂದು ಶಾಸಕಿ ಹೇಳಿದ್ದಾರೆ.

ಇದಕ್ಕೆ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮರಾಠಿಗರು ಕನ್ನಡದವರ ಮೇಲೆ ದರ್ಪ ತೋರುತ್ತಿದ್ದರೆ, ನೀವು ಜನ ಪ್ರತಿನಿಧಿಯಾಗಿ ಮರಾಠಿಗರ ಓಲೈಕೆ ಮಾಡುತ್ತಿದ್ದಿರಿ ಎಂದು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...