alex Certify ಮನ ಸೆಳೆಯುವ ಪ್ರಮುಖ ಪ್ರವಾಸಿ ತಾಣ ʼಭದ್ರಾ ಜಲಾಶಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಸೆಳೆಯುವ ಪ್ರಮುಖ ಪ್ರವಾಸಿ ತಾಣ ʼಭದ್ರಾ ಜಲಾಶಯʼ

ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿರುವ ಭದ್ರಾ ಜಲಾಶಯ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಇದನ್ನು ಲಕ್ಕವಳ್ಳಿ ಡ್ಯಾಂ ಎಂದೂ ಕರೆಯಲಾಗುತ್ತದೆ.

ಜಲಾಶಯದ ನೋಟ, ಸುತ್ತಲಿನ ಹಸಿರು ಪರಿಸರ, ಬೆಟ್ಟ, ಗುಡ್ಡಗಳು ನಿಮ್ಮನ್ನು ಸೆಳೆಯುತ್ತವೆ. ಭದ್ರಾ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಿಗೆ ಇದು ನೀರಾವರಿ ಸೌಲಭ್ಯ ಒದಗಿಸಿದೆ.

ಅಲ್ಲದೇ, ಹಲವು ಊರುಗಳಿಗೆ ಕುಡಿಯುವ ನೀರಿಗೂ ಭದ್ರಾ ಜಲಾಶಯವನ್ನು ಅವಲಂಬಿಸಲಾಗಿದೆ. ಮಳೆಗಾಲದಲ್ಲಿ ಡ್ಯಾಂಗೆ ಹೆಚ್ಚು ನೀರು ಹರಿದುಬರುತ್ತದೆ. ಜಲಾಶಯ ತುಂಬಿದ ಸಂದರ್ಭದಲ್ಲಿ ನೀರು ಹೊರಬಿಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ.

ಭದ್ರಾ ಜಲಾಶಯಕ್ಕೆ ಸಮೀಪದಲ್ಲಿ ಕುವೆಂಪು ವಿಶ್ವವಿದ್ಯಾಲಯ ಇದೆ. ಇಲ್ಲಿನ ಕ್ಯಾಂಪಸ್ ಮನಸೆಳೆಯುವಂತಿದೆ. ಭದ್ರಾ ಅಭಯಾರಣ್ಯ, ಜಂಗಲ್ ರೆಸಾರ್ಟ್ ಕೂಡ ಇದ್ದು, ನೋಡಬಹುದಾದ ಸ್ಥಳಗಳಾಗಿವೆ. ಭದ್ರಾವತಿ, ತರೀಕೆರೆ, ಶಿವಮೊಗ್ಗದವರೆಗೆ ರೈಲಿನಲ್ಲಿ ಬಂದು ಅಲ್ಲಿಂದ ಬಸ್ ಗಳಲ್ಲಿ ಹೋಗಬಹುದು. ಇಲ್ಲವೇ ವಾಹನಗಳಲ್ಲಿಯೂ ಹೋಗಬಹುದಾಗಿದೆ. ಭದ್ರಾವತಿಯಿಂದ 20, ಶಿವಮೊಗ್ಗದಿಂದ 28 ಹಾಗೂ ತರೀಕೆರೆಯಿಂದ 22 ಕಿಲೋ ಮೀಟರ್ ದೂರದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...