ದಕ್ಷಿಣದ ಕಡೆ ಮುಖಮಾಡಿ ಇರುವ ಮನೆಯು ಅಷ್ಟು ಒಳ್ಳೆಯದಾಗೋಲ್ಲ ಎಂದು ವಾಸ್ತು ಶಾಸ್ತ್ರ ಹೇಳಿತ್ತು.
ಜ್ಯೋತಿಷ್ಯ ಶಾಸ್ತ್ರ ಕೂಡ ವಾಸ್ತು ಶಾಸ್ತ್ರದ ಈ ಮಾತನ್ನ ಒಪ್ಪಿಕೊಳ್ಳುತ್ತೆ. ದಕ್ಷಿಣದ ಕಡೆ ಮುಖ ಮಾಡಿರುವ ಮನೆಯನ್ನ ಶುಭದ ಸಂಕೇತ ಎಂದು ಪರಿಗಣಿಸಲಾಗೋದಿಲ್ಲ. ಇಂತಹ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುತ್ತೆ. ಆರ್ಥಿಕ ಸಂಕಷ್ಟ, ಆರೋಗ್ಯದ ಸಮಸ್ಯೆ ಸೇರಿದಂತೆ ಸಂಕಷ್ಟಗಳು ಬಾಧಿಸುತ್ತದೆ.
ಹೊಸದಾಗಿ ಮನೆಯನ್ನ ನಿರ್ಮಾಣ ಮಾಡುವವರು ಈ ತಪ್ಪನ್ನ ಮಾಡೋದಿಲ್ಲ. ಆದರೆ ಹಳೆಯ ಕಾಲದ ಮನೆಗಳಲ್ಲಿ ಇಂತಹ ವಾಸ್ತು ದೋಷ ಇರೋದು ಜಾಸ್ತಿ. ಹೀಗಾಗಿ ಇಂತಹ ಮನೆಯಲ್ಲಿ ಸೂಕ್ತ ಪೂಜಾ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆಯಿಂದ ಪಾರಾಗಬಹುದಾಗಿದೆ. ವಾಸ್ತು ಶಾಸ್ತ್ರದಲ್ಲಿ ಇಂತಹ ಮನೆಯಲ್ಲಿ ಕಷ್ಟಗಳು ಬಾರದಂತೆ ನೋಡಿಕೊಳ್ಳಲು ಸಾಕಷ್ಟು ಪೂಜೆಗಳನ್ನ ಮೀಸಲಿಡಲಾಗಿದೆ.
ಪೂಜೆಗಳ ಹೊರತಾಗಿ ಮನೆಯಲ್ಲಿ ಕೆಲ ಬದಲಾವಣೆ ಮೂಲಕವೂ ಈ ವಾಸ್ತು ದೋಷದ ಕಾಟದಿಂದ ಬಚಾವಾಗಬಹುದಾಗಿದೆ. ಮನೆಯ ಗೇಟನ್ನ ದಕ್ಷಿಣದಲ್ಲಿ ಎತ್ತರದ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಿ.
ಕೇವಲ ಗೇಟ್​ ಮಾತ್ರವಲ್ಲದೇ ದಕ್ಷಿಣ ದಿಕ್ಕಿನಲ್ಲಿ ಬರುವ ಕಾಂಪೌಂಡ್​ನ್ನೂ ಎತ್ತರಕ್ಕೆ ನಿರ್ಮಾಣ ಮಾಡಿ. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ಉಂಟಾಗುವ ವಾಸ್ತು ದೋಷದಿಂದ ಬಚಾವಾಗಬಹುದಾಗಿದೆ.