alex Certify ಮನೆಯ ಅಲಂಕಾರವೂ ಬೀರುತ್ತೆ ವಾಸ್ತು ಪ್ರಭಾವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಅಲಂಕಾರವೂ ಬೀರುತ್ತೆ ವಾಸ್ತು ಪ್ರಭಾವ

खास मौकों-त्‍योहारों पर Home Decorate करने के पीछे है विशेष कारण, जानिए Vastu में क्‍या है इसका महत्‍व | importance and reason behind decorating the house on special occasions festivals ...

ಮನೆಯ ವಾಸ್ತು ಮನೆಯ ಸದಸ್ಯರ ಸಂತೋಷ, ಆರೋಗ್ಯ ಮತ್ತು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯ ವಾಸ್ತು ಸರಿಯಾಗಿದ್ದಲ್ಲಿ ಮಾತ್ರ ನೆಮ್ಮದಿ ಸಿಗಲು ಸಾಧ್ಯ. ಹೂವು, ದೀಪ, ರಂಗೋಲಿ ಇತ್ಯಾದಿಗಳಿಂದ ಅಲಂಕಾರಗೊಳ್ಳುವ ಮನೆ ಕೂಡ ವಾಸ್ತು ಮೇಲೆ ಪರಿಣಾಮ ಬೀರುತ್ತದೆ.

ಮನೆಯ ಮುಖ್ಯ ಬಾಗಿಲು ವಾಸ್ತುವಿನ ಮೇಲೆ ಪ್ರಮುಖ ಪಾತ್ರ ವಹಿಸುತ್ತದೆ. ಹಬ್ಬದ ಸಂದರ್ಭದಲ್ಲಿ ಮುಖ್ಯ ದ್ವಾರದಲ್ಲಿ ರಂಗೋಲಿ ಹಾಕಿ, ದೀಪಗಳನ್ನು ಬೆಳಗಲಾಗುತ್ತದೆ. ಮನೆಯ ಬಾಗಿಲಿಗೆ ಹಾಕುವ ತೋರಣ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಕಾರಣವಾಗುತ್ತದೆ. ಬಾಗಿಲಿನ ಮುಂದೆ ಸುಂದರವಾದ ರಂಗೋಲಿ ಹಾಕಿದಾಗ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ. ಮನೆಗೆ ದೇವಾನುದೇವತೆಗಳ ಪ್ರವೇಶವಾಗುತ್ತದೆ.

ಮನೆಯ ಮುಖ್ಯ ಬಾಗಿಲಿಗೆ ರಂಧ್ರವಿರಬಾರದು. ಬಿರುಕು ಬಿಟ್ಟ ಬಾಗಿಲನ್ನು ಬಳಸಬೇಡಿ. ಬಾಗಿಲು ತೆರೆಯುವಾಗ ಶಬ್ಧವಾಗದಂತೆ ನೋಡಿಕೊಳ್ಳಿ. ಮನೆ ಬಾಗಿಲಿನ ಅಲಂಕಾರದ ಜೊತೆ ಧೂಪದ್ರವ್ಯ ವಾತಾವರಣವನ್ನು ಹಿತವಾಗಿಡುತ್ತದೆ. ಮನೆಯಿಂದ ದುರ್ವಾಸನೆ ಬರ್ತಿದ್ದರೆ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ. ಹಾಗಾಗಿ ಮನೆಯಲ್ಲಿ ಸದಾ ಸುಹಾಸನೆ ಬರುವಂತೆ ನೋಡಿಕೊಳ್ಳಿ.

ಮನೆಯಲ್ಲಿರುವ ಹಳೆಯ ಮತ್ತು ಉಪಯೋಗಕ್ಕೆ ಬರದ ಸರಕುಗಳನ್ನು ಮನೆಯಿಂದ ಹೊರಹಾಕಿ. ಮನೆಯಲ್ಲಿರುವ ಹಾಳಾದ ವಸ್ತು ವಾಸ್ತುದೋಷಕ್ಕೆ ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...