alex Certify ಮನೆಯೊಳಗೆ ಹಾವು ಬರದಂತೆ ತಡೆಯಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯೊಳಗೆ ಹಾವು ಬರದಂತೆ ತಡೆಯಲು ಇಲ್ಲಿದೆ ಟಿಪ್ಸ್

ಹಾವುಗಳು ತುಂಬಾ ಭಯಾನಕ ಜೀವಿಗಳು. ಭಾರತದಲ್ಲಿ ಸಾಕಷ್ಟು ಬಗೆಯ ಹಾವುಗಳು ಕಂಡುಬರುತ್ತವೆ. ಭಾರತದಲ್ಲಿ ಪ್ರತಿವರ್ಷ ಸುಮಾರು 50 ಲಕ್ಷ ಹಾವು ಕಡಿತ ಪ್ರಕರಣಗಳು ವರದಿಯಾಗುತ್ತವೆ. ಇದರಲ್ಲಿ 27 ಲಕ್ಷ ಪ್ರಕರಣಗಳು ವಿಷಕಾರಿ ಹಾವುಗಳಿಂದಾದವುಗಳು. ಸುಮಾರು 81,000 ರಿಂದ 1,38,000 ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಾರೆ.

ಈ ಕಾರಣದಿಂದಲೇ ಹಾವುಗಳ ಹೆಸರು ಕೇಳಿದ್ರೆ ಉದ್ವೇಗ ಶುರುವಾಗುತ್ತದೆ. ಈ ಭಯವನ್ನು ಒಫಿಡಿಯೋಫೋಬಿಯಾ ಎಂದು ಕರೆಯಲಾಗುತ್ತದೆ. ಹಾವುಗಳು ಮನೆಗಳಿಗೆ, ತೋಟಕ್ಕೆ ಬರುವುದು ಹೊಸದೇನಲ್ಲ. ಅಕ್ಟೋಬರ್ 2 ರಂದು ಗುವಾಹಟಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಕ್ರಿಕೆಟ್ ಪಂದ್ಯದ ವೇಳೆ ಮೈದಾನದೊಳಕ್ಕೆ ಬೃಹತ್ ಹಾವೊಂದು ಏಕಾಏಕಿ ನುಗ್ಗಿತ್ತು. ಹಾವುಗಳು ಈ ರೀತಿ ಎಲ್ಲೆಂದರಲ್ಲಿ ಬರದಂತೆ ತಡೆಯುವುದು ಹೇಗೆ ನೋಡೋಣ.

ಬ್ಲೀಚಿಂಗ್ ಪೌಡರ್ : ನಿಮ್ಮ ತೋಟ ಮತ್ತು ಮನೆಯ ಸುತ್ತಲೂ ಬ್ಲೀಚಿಂಗ್ ಪೌಡರ್‌ನಿಂದ ರೇಖೆಯನ್ನು ಎಳೆಯಿರಿ. ವಾಸ್ತವವಾಗಿ ಬ್ಲೀಚ್‌ನ ವಾಸನೆಯು ಹಾವುಗಳನ್ನು ಹಿಮ್ಮೆಟ್ಟಿಸುತ್ತದೆ. ಅದನ್ನು ಮೂಸಿ ನೋಡಿದ್ರೆ ಹಾವುಗಳು ಸಾಯಲೂಬಹುದು. ಆದರೆ ಉದ್ಯಾನವನದ ಕೊಳ ಅಥವಾ ಕಾರಂಜಿ ನೀರಿನಲ್ಲಿ ಬ್ಲೀಚಿಂಗ್ ಪೌಡರ್ ಅನ್ನು ಬೆರೆಸಬಾರದು. ಹಾಗೆ ಮಾಡಿದರೆ ಅನೇಕ ಜೀವಿಗಳು ಸಾಯಬಹುದು. ಅದನ್ನು ಮಣ್ಣಿನ ಮೇಲೆ ಸಿಂಪಡಿಸಿದ್ರೆ ಫಲವತ್ತತೆ ಹಾಳಾಗುತ್ತದೆ.

ಇಲಿಗಳನ್ನು ಮನೆಯಿಂದ ಹೊರಗಿಡಿ: ಸಾಮಾನ್ಯವಾಗಿ ಇಲಿಗಳನ್ನು ಹುಡುಕಿಕೊಂಡು ಹಾವುಗಳು ಮನೆಗೆ ಬರುತ್ತವೆ. ಆದ್ದರಿಂದ ಮೊದಲು ಇಲಿಗಳನ್ನು ಓಡಿಸಿ. ಇದಕ್ಕಾಗಿ ಮನೆಯನ್ನು ಸ್ವಚ್ಛವಾಗಿಡಿ, ಸಣ್ಣ ರಂಧ್ರಗಳನ್ನು ಮುಚ್ಚಿ. ಮನೆಯ ಮೂಲೆಗಳಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಪುದೀನಾ, ಲವಂಗದ ಎಣ್ಣೆ ಮತ್ತು ಕೆಂಪು ಮೆಣಸಿನ ಪುಡಿಯನ್ನು ಇಟ್ಟರೆ ಇಲಿಗಳ ಪ್ರವೇಶವನ್ನು ತಡೆಯಬಹುದು.

ಗಾರ್ಡನ್ ಹುಲ್ಲನ್ನು ಆಗಾಗ ಟ್ರಿಮ್‌ ಮಾಡಿ: ಮನೆಯ ಸುತ್ತ ಮುತ್ತ ಗಾರ್ಡನ್‌ ಇದ್ದರೆ ಕಾಲಕಾಲಕ್ಕೆ ಆ ಹುಲ್ಲನ್ನು ಟ್ರಿಮ್‌ ಮಾಡುತ್ತಿರಿ. ಯಾಕಂದ್ರೆ ಹಾವುಗಳು ಹುಲ್ಲಿನಲ್ಲಿ ಮಲಗಿರುವ ಸಾಧ್ಯತೆ ಇರುತ್ತದೆ. ಹುಲ್ಲು ಚಿಕ್ಕದಾಗಿದ್ದರೆ, ಅದು ನಿಮಗೆ ಸುಲಭವಾಗಿ ಗೋಚರಿಸುತ್ತದೆ.

ಲೆಮನ್‌ ಗ್ರಾಸ್‌: ನಿಮ್ಮ ತೋಟದ ಬದಿಯಲ್ಲಿ ಮತ್ತು ಮನೆಯ ಪ್ರವೇಶ ದ್ವಾರದಲ್ಲಿ ಕುಂಡಗಳಲ್ಲಿ ನಿಂಬೆ ಹುಲ್ಲನ್ನು ಬೆಳೆಸಿ, ಅದರ ವಾಸನೆಯು ನಿಂಬೆಯಂತೆಯೇ ಇರುತ್ತದೆ, ಇದು ಹಾವುಗಳಿಗೆ ಇಷ್ಟವಾಗುವುದಿಲ್ಲ. ಹಾವುಗಳು ಸುತ್ತಮುತ್ತ ಓಡಾಡುವುದಿಲ್ಲ. ಸರೀಸೃಪಗಳ ಕಾಟ ತಪ್ಪಿಸಲು ಇದು ನೈಸರ್ಗಿಕ ಮಾರ್ಗವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...