alex Certify ಮನೆಯೊಂದಿಗೆ ಮಾಜಿ ಪತಿಯನ್ನೂ ಮಾರಾಟಕ್ಕಿಟ್ಟಿದ್ದಾಳೆ ಈ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯೊಂದಿಗೆ ಮಾಜಿ ಪತಿಯನ್ನೂ ಮಾರಾಟಕ್ಕಿಟ್ಟಿದ್ದಾಳೆ ಈ ಮಹಿಳೆ….!

ಹಳೆ ಮನೆಯಿಂದ ಹೊಸ ಮನೆಗೆ ಪ್ರವೇಶಿಸುವಾಗ ಜನರು ಸಾಮಾನ್ಯವಾಗಿ ಪೀಠೋಪಕರಣಗಳು, ಹಳೆಯ ವಸ್ತುಗಳನ್ನು ಮಾರಾಟ ಮಾಡೋದು ಮಾಮೂಲಿ. ಆದರೆ, ಫ್ಲೋರಿಡಾದಲ್ಲಿ ಮಹಿಳೆಯೊಬ್ಬರು ಮಾಜಿ ಪತಿಯೊಂದಿಗೆ ತನ್ನ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದಾಳೆ.

43 ವರ್ಷದ ಕ್ರಿಸ್ಟಲ್ ಬಾಲ್ ಎಂಬಾಕೆ ಫ್ಲೋರಿಡಾದ ಪನಾಮ ಸಿಟಿ ಬೀಚ್ ಪ್ರದೇಶದಲ್ಲಿ ತನ್ನ ಮನೆಯೊಂದನ್ನು $ 699,000 (ಅಂದಾಜು ರೂ. 5.3 ಕೋಟಿ) ಗೆ ಮಾರಾಟಕ್ಕಿಟ್ಟಿದ್ದಾಳೆ. ಮನೆಯು ಪೂಲ್, ಹಾಟ್ ಟಬ್, ಮೂರು ಮಲಗುವ ಕೋಣೆಗಳು ಮತ್ತು ಆಕೆಯ ಮಾಜಿ ಪತಿ 54 ವರ್ಷದ ರಿಚರ್ಡ್ ಚೈಲೊ ಸೇರಿದಂತೆ ಇತರ ಸೌಕರ್ಯಗಳನ್ನು ಹೊಂದಿರುವುದಾಗಿ ತಿಳಿಸಿದ್ದಾಳೆ. ಕ್ರಿಸ್ಟಲ್ ಮತ್ತು ರಿಚರ್ಡ್ ಇತ್ತೀಚೆಗೆ ಬೇರ್ಪಡುವ ಮೊದಲು ಏಳು ವರ್ಷಗಳ ಕಾಲ ಜೊತೆಯಲ್ಲೇ ಇದ್ದರು.

ತನ್ನ ಮನೆಯನ್ನು ಪಟ್ಟಿ ಮಾಡುವಾಗ, ಕ್ರಿಸ್ಟಲ್ ಖರೀದಿದಾರರಿಗೆ ವಿಶಿಷ್ಟವಾದ ಒಪ್ಪಂದವನ್ನು ನೀಡಿದ್ದಾಳೆ. ರಿಚರ್ಡ್‌ನನ್ನು ಇರಿಸಿಕೊಳ್ಳಲು ಒಪ್ಪಿಕೊಂಡರೆ, ಬೆಲೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾಳೆ. ಜೊತೆಗೆ ತನ್ನ ಪತಿಯ ಫೋಟೋವನ್ನು ಕೂಡ ಹಂಚಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಈತ ಬಹಳ ಚೆನ್ನಾಗಿ ಅಡುಗೆ ಮಾಡುತ್ತಾನೆ ಎಂದು ಹೇಳಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...