alex Certify ಮನೆಯಲ್ಲೇ ತಯಾರಿಸಬಹುದು ಮಕ್ಕಳ ಫೇವರಿಟ್ ಕಸ್ಟರ್ಡ್ ಐಸ್​ ಕ್ರೀಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ತಯಾರಿಸಬಹುದು ಮಕ್ಕಳ ಫೇವರಿಟ್ ಕಸ್ಟರ್ಡ್ ಐಸ್​ ಕ್ರೀಂ

ಬೇಕಾಗುವ ಸಾಮಗ್ರಿ : 2 ಕಪ್​ ಹಾಲು, ಕಸ್ಟರ್ಡ್​ ಪುಡಿ 2 ಟೇಬಲ್​ ಸ್ಪೂನ್​, ಸಕ್ಕರೆ 1/2 ಕಪ್​, ವಿಪ್ಪಿಂಗ್ ಕ್ರೀಂ – 200 ಎಂ.ಎಲ್​

ಮಾಡುವ ವಿಧಾನ : ಹಾಲನ್ನ ಕುದಿಯಲು ಇಡಿ. ಇನ್ನೊಂದು ಪಾತ್ರೆಯಲ್ಲಿ ನಿಮ್ಮಿಷ್ಟದ ಫ್ಲೇವರಿನ ಕಸ್ಟರ್ಡ್​ ಪೌಡರ್​ನ್ನು ತೆಗೆದುಕೊಂಡು ಇದನ್ನ 1/2 ಕಪ್​ ಹಾಲಿನೊಂದಿಗೆ ಮಿಶ್ರಣ ಮಾಡಿ. ಈಗ ಕುದಿಯುತ್ತಿರುವ ಹಾಲಿಗೆ ಕಸ್ಟರ್ಡ್​ ಪುಡಿಯ ಮಿಶ್ರಣವನ್ನ ಹಾಕಿ. ಈ ರೀತಿ ಮಾಡುವ ವೇಳೆ ಗಂಟು ಆಗದಂತೆ ನೋಡಿಕೊಳ್ಳಿ. ಹಾಗೂ ಮಧ್ಯಮ ಬಿಸಿಯಲ್ಲಿ ಹಾಲನ್ನ ಕಾಯಿಸಿ. ಈಗ ಇದಕ್ಕೆ ಸಕ್ಕರೆಯನ್ನ ಹಾಕಿ. ಚೆನ್ನಾಗಿ ಕಲಿಸಿ. ಈ ರೀತಿ ಹಾಲನ್ನ 7 ನಿಮಿಷ ಕುದಿಸಿ.

ಹಾಲನ್ನ ತಣ್ಣಗಾಗಲು ಬಿಟ್ಟು ಬಳಿಕ ಈ ಮಿಶ್ರಣವನ್ನ ಫ್ರೀಜರ್​ನಲ್ಲಿ ಅರ್ಧ ಗಂಟೆಗಳ ಕಾಲ ಇಡಿ. ಈಗ ಇನ್ನೊಂದು ಪಾತ್ರೆಯನ್ನ ಫ್ರೀಜರ್​ನಲ್ಲಿ ಇಟ್ಟು ತಣ್ಣ ಮಾಡಿಕೊಳ್ಳಿ. ಬಳಿಕ ಈ ಖಾಲಿ ಪಾತ್ರೆಯನ್ನ ಹೊರ ತೆಗೆದು ಅದಕ್ಕೆ ವಿಪ್ಪಿಂಗ್​ ಕ್ರೀಂನ್ನು ಹಾಕಿ. ಇದನ್ನ ಬ್ಲೆಂಡರ್​ನಿಂದ ಬ್ಲೆಂಡ್​ ಮಾಡಿ. ಇದಕ್ಕೆ ಫ್ರೀಜರ್​ನಲ್ಲಿದ್ದ ಕಸ್ಟರ್ಡ್ ಮಿಶ್ರಣವನ್ನ ಹಾಕಿ. ಮತ್ತೊಮ್ಮೆ ಬ್ಲೆಂಡ್​ ಮಾಡಿ. ಬ್ಲೆಂಡರ್​ ಮಷಿನ್​ ಇಲ್ಲದವರು ಮಿಕ್ಸಿಯನ್ನೂ ಬಳಕೆ ಮಾಡಬಹುದು. ಈಗ ಮಿಶ್ರಣದ ಪಾತ್ರೆಗೆ ಫಾಯಿಲ್​ ಶೀಟ್​ನಿಂದ ಮುಚ್ಚಿ. ಇದೀಗ ಮತ್ತೆ ಫ್ರೀಜರ್​ನಲ್ಲಿ ಮೂರು ಗಂಟೆಗಳ ಕಾಲ ಈ ಮಿಶ್ರಣವನ್ನ ಇಡಿ. ಇದನ್ನ ಮತ್ತೆ ಬ್ಲೆಂಡ್ ಮಾಡಿ.

ಈಗ ಈ ಮಿಶ್ರಣವನ್ನ ಇನ್ನೊಂದು ಪಾತ್ರೆಯಲ್ಲಿ ಹಾಕಿ ಅದರ ಮೇಲೆ ಫಾಯಿಲ್​ ಶೀಟ್​ ಹಾಕಿ ಬಳಿಕ ಮುಚ್ಚಳ ಹಾಕಿ 6 ಗಂಟೆಗಳ ಕಾಲ ಇಡಿ, ಇದೀಗ ನಿಮ್ಮ ಐಸ್​ಕ್ರೀಂ ಸವಿಯಲು ಸಿದ್ಧ, ಟೂಟಿ ಫ್ರೂಟಿಯನ್ನ ಹಾಕಿ ನೀವು ಐಸ್​ ಕ್ರೀಂನ್ನು ಅಲಂಕರಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...