alex Certify ಮನೆಯಲ್ಲಿರುವ ವಾಸ್ತುದೋಷ ನಿವಾರಣೆಯಾಗಬೇಕೆ..? ಇಲ್ಲಿದೆ ಸರಳ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿರುವ ವಾಸ್ತುದೋಷ ನಿವಾರಣೆಯಾಗಬೇಕೆ..? ಇಲ್ಲಿದೆ ಸರಳ ಉಪಾಯ

ಮನೆಯ ಸದಸ್ಯರೆಲ್ಲ ಸಂತೋಷದಿಂದ, ಯಶಸ್ಸಿನ ಜೀವನವನ್ನು ನಡೆಸಬೇಕು ಎಂಬ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಪ್ರತಿಯೊಬ್ಬರೂ ಸಹ ತಮ್ಮ ಮನೆಯವರೆಲ್ಲ ಚೆನ್ನಾಗಿ ಇರಬೇಕೆಂದು ಇನ್ನಿಲ್ಲದ ಪೂಜಾ, ಪ್ರಾರ್ಥನೆ ಹಾಗೂ ಹರಕೆಗಳನ್ನು ಹೊತ್ತುಕೊಳ್ತಾರೆ. ಆದರೆ ಮನೆಯಲ್ಲಿ ವಾಸ್ತುದೋಷವೊಂದಿದ್ದರೆ ಸಾಕು ನೀವೆಷ್ಟೇ ಪ್ರಯತ್ನಪಟ್ಟರೂ ಸಹ ಯಶಸ್ಸು ಎನ್ನುವುದು ನಿಮಗೆ ದಕ್ಕೋದೇ ಇಲ್ಲ. ಇಂತಹ ಸಂದರ್ಭಗಳಲ್ಲಿ ನೀವು ವಾಸ್ತುದೋಷವನ್ನು ಪರಿಹಾರ ಮಾಡಲು ಗಣೇಶನ ಮೊರೆ ಹೋಗಬಹುದು.

ಹೌದು..! ನಿಮ್ಮ ಮನೆಯಲ್ಲಿ ಸರಿಪಡಿಸಲಾಗದಂತಹ ವಾಸ್ತುದೋಷವಿದ್ದಲ್ಲಿ ನೀವು ದೇವತೆಗಳಲ್ಲಿ ಮೊದಲ ಪೂಜ್ಯ ದೇವರಾದ ಗಣೇಶನನ್ನು ಪೂಜಿಸುವ ಮೂಲಕ ವಾಸ್ತು ದೋಷವನ್ನು ತೊಡೆದು ಹಾಕಬಹುದಾಗಿದೆ.

ಹಾಗಾದರೆ ಯಾವೆಲ್ಲ ರೀತಿಯ ಗಣಪತಿಯ ಮೂರ್ತಿ ನಿಮಗೆ ವಾಸ್ತುದೋಷ ನಿವಾರಣೆಗೆ ಸಹಕಾರಿ ಎಂಬುದನ್ನು ತಿಳಿದುಕೊಳ್ಳೋಣ :

1. ವಾಸ್ತು ಶಾಸ್ತ್ರದ ಪ್ರಕಾರ ಬಿಳಿ ಬಣ್ಣದ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ.

2. ವಾಸ್ತು ಪ್ರಕಾರ ಸಿಂಧೂರ ಬಣ್ಣದ ಗಣಪತಿಯನ್ನು ಪೂಜಿಸುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.

3. ಮನೆಯ ಮುಖ್ಯ ದ್ವಾರದ ಹಿಂಬದಿಯಲ್ಲಿ ಗಣೇಶನ ಮೂರ್ತಿಯನ್ನು ಇಡುವುದರಿಂದ ವಾಸ್ತು ದೋಷವು ಕೊನೆಗೊಳ್ಳುತ್ತದೆ.

4. ವಾಸ್ತುದೋಷದಿಂದ ಪ್ರಭಾವಿತವಾಗಿರುವ ಮನೆಯ ಆ ನಿರ್ದಿಷ್ಟ ಭಾಗದಲ್ಲಿ ತುಪ್ಪವನ್ನು ಸಿಂಪಡಿಸಿ ಗೋಡೆಯ ಮೇಲೆ ಸ್ವಸ್ತಿಕವನ್ನು ಬರೆಯುವ ಮೂಲಕವೂ ನೀವು ವಾಸ್ತುದೋಷದಿಂದ ಪಾರಾಗಬಹುದು.

5. ವಾಸ್ತು ಶಾಸ್ತ್ರದ ಪ್ರಕಾರ ವಕ್ರತುಂಡ ಅಂದರೆ ಗಣೇಶನ ವಿಗ್ರಹವನ್ನು ಮನೆ ಅಥವಾ ಕಚೇರಿಯಲ್ಲಿ ಯಾವುದೇ ಸ್ಥಳದಲ್ಲಿ ಇಡುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ. ದೇವರ ವಿಗ್ರಹವನ್ನು ಇರಿಸುವಾಗ, ಅವರ ಮುಖವನ್ನು ದಕ್ಷಿಣ ದಿಕ್ಕಿನಲ್ಲಿ ಅಥವಾ ಆಗ್ನೇಯ ಕೋನದಲ್ಲಿ ಇಡಬೇಡಿ, ಇಲ್ಲದಿದ್ದರೆ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...