alex Certify ಮನುಷ್ಯನ ರಕ್ತದಲ್ಲಿ ಪತ್ತೆಯಾಗಿದೆ ಪ್ಲಾಸ್ಟಿಕ್‌….! ಈ ಅಪಾಯಕಾರಿ ಅಂಶ ದೇಹದೊಳಗೆ ಸೇರಿದ್ದು ಹೇಗೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಷ್ಯನ ರಕ್ತದಲ್ಲಿ ಪತ್ತೆಯಾಗಿದೆ ಪ್ಲಾಸ್ಟಿಕ್‌….! ಈ ಅಪಾಯಕಾರಿ ಅಂಶ ದೇಹದೊಳಗೆ ಸೇರಿದ್ದು ಹೇಗೆ ಗೊತ್ತಾ….?

ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ರಕ್ತದಲ್ಲಿ ಪ್ಲಾಸ್ಟಿಕ್ ಇದೆ ಅನ್ನೋ ಶಾಕಿಂಗ್‌ ಸುದ್ದಿ ಈಗ ಹೊರಬಿದ್ದಿದೆ. ಪ್ಲಾಸ್ಟಿಕ್ ನಿಧಾನಗತಿಯಲ್ಲಿ ಮನುಷ್ಯರ ರಕ್ತವನ್ನು ಸೇರುತ್ತದೆ ಎಂಬುದು ಸಂಶೋಧನೆಯೊಂದರಲ್ಲಿ ಬಹಿರಂಗವಾಗಿದೆ. ಸಂಶೋಧನೆಗೆ ಒಳಪಡಿಸಿದ ಶೇ.80 ರಷ್ಟು ಜನರ ರಕ್ತದಲ್ಲಿ ಪ್ಲಾಸ್ಟಿಕ್ ನ ಸಣ್ಣ ಕಣಗಳು ಪತ್ತೆಯಾಗಿವೆ.

ಈ ಮೈಕ್ರೋ ಪ್ಲಾಸ್ಟಿಕ್‌, ನೀರು, ಉಸಿರು ಮತ್ತು ಆಹಾರದ ಮೂಲಕ ಮಾನವನ ದೇಹವನ್ನು ಪ್ರವೇಶಿಸುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಂಶೋಧನೆಗೆ ಒಳಪಟ್ಟ ಶೇ.77 ಜನರ ರಕ್ತಪ್ರವಾಹದಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳು ಸಿಕ್ಕಿವೆ. ಡಚ್ ಸಂಶೋಧಕರು ನಡೆಸಿದ ಈ ಅಧ್ಯಯನವು ಪಾಲಿಥಿಲೀನ್ ಟೆರೆಫ್ತಾಲೇಟ್, ಮಾನವ ರಕ್ತದಲ್ಲಿ ಕಂಡುಬರುವ ಪ್ಲಾಸ್ಟಿಕ್‌ನ ಅತ್ಯಂತ ಪ್ರಚಲಿತ ರೂಪವಾಗಿದೆ ಎಂದು ಕಂಡುಹಿಡಿದಿದೆ.

PETಯನ್ನು ಸಾಮಾನ್ಯವಾಗಿ ನೀರು, ಆಹಾರ ಮತ್ತು ಬಟ್ಟೆಯ ಪ್ಯಾಕೇಜಿಂಗ್‌ಗೆ ಬಳಸಲಾಗುತ್ತದೆ. ಪ್ಲಾಸ್ಟಿಕ್‌, ಗಾಳಿ ಆಹಾರ ಮತ್ತು ಪಾನೀಯಗಳ ಮೂಲಕ ಮಾನವ ದೇಹವನ್ನು ಪ್ರವೇಶಿಸಬಹುದು ಅನ್ನೋದು ವಿಜ್ಞಾನಿಗಳ ಲೆಕ್ಕಾಚಾರ. ಇದು ತುಂಬಾ ಅಪಾಯಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಹದಲ್ಲಿ ಈ ಪ್ಲಾಸ್ಟಿಕ್ ಕಣಗಳಿಂದ ಉರಿಯೂತ ಹೆಚ್ಚಾಗುವ ಸಾಧ್ಯತೆಯಿದೆ.

ಮನುಷ್ಯದ ರಕ್ತದಲ್ಲಿ ಸುಮಾರು ವಿಧದ ಪ್ಲಾಸ್ಟಿಕ್ ಮಾದರಿಗಳು ಕಂಡುಬಂದಿವೆ. ಇದರಲ್ಲಿ ಪಾಲಿಪ್ರೊಪಿಲೀನ್, ಪಾಲಿಸ್ಟೈರೀನ್, ಪಾಲಿಮಿಥೈಲ್ ಮೆಥಾಕ್ರಿಲೇಟ್, ಪಾಲಿಥೀನ್ ಮತ್ತು ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ಪರೀಕ್ಷೆಗಾಗಿ 22 ಜನರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. 22 ಜನರಲ್ಲಿ 17 ಜನರ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳಿವೆ ಎಂದು ಸಂಶೋಧಕರು ಹೇಳಿದ್ದಾರೆ. ರಕ್ತದಲ್ಲಿ ವಿಜ್ಞಾನಿಗಳು ಕಂಡುಕೊಂಡ ಮೂರನೇ ವಿಧದ ಪ್ಲಾಸ್ಟಿಕ್ ಅಂದ್ರೆ ಪಾಲಿಥಿಲೀನ್. ಇದನ್ನು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...