alex Certify ಈ ಮಣಿಸರ ಧರಿಸಿದ್ರೆ ಸಿಗುತ್ತೆ ಮನಸ್ಸಿಗೆ ಶಾಂತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಣಿಸರ ಧರಿಸಿದ್ರೆ ಸಿಗುತ್ತೆ ಮನಸ್ಸಿಗೆ ಶಾಂತಿ

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯಲು ಬಯಸುತ್ತಾನೆ. ಅದಕ್ಕಾಗಿ ಅವನು ಅನೇಕ ಪ್ರಯತ್ನಗಳನ್ನು ಮಾಡ್ತಾನೆ. ಆದ್ರೆ ಸಂತೋಷ, ಶಾಂತಿ ಮತ್ತು ಸಮೃದ್ಧಿ ಸಿಗುವುದಿಲ್ಲ. ನೀವು ಅವರಲ್ಲಿ ಒಬ್ಬರಾಗಿದ್ದರೆ, ಫೆಂಗ್ ಶೂಯಿ ನೀತಿ ಅನುಸರಿಸಿ.

ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಗಾಗಿ ವಿಂಡ್‌ಚೈನ್, ಚೀನೀ ಕಪ್ಪೆಗಳನ್ನು ಮನೆಯಲ್ಲಿ ಇಡಬಹುದು. ಹಾಗೆ ಮರದಿಂದ ಮಾಡಿದ ಮಣಿಯ ಹೂಮಾಲೆ ಮತ್ತು ಫೆಂಗ್ ಶೂಯಿ ನಾಣ್ಯಗಳನ್ನು ಬಳಸಬಹುದು.

ಟಿಬೆಟ್ ಸನ್ಯಾಸಿಗಳು ಪೂಜಿಸುವ ಮರದಿಂದ ಮಣಿಗಳನ್ನು ಸಿದ್ಧಪಡಿಸಿ ಮಾಲೆ ಮಾಡಲಾಗುತ್ತದೆ. ಈ ಸರದಲ್ಲಿ ಮಣಿಗಳ ಸಂಖ್ಯೆ ಎಂಟಿರುತ್ತದೆಯಂತೆ. ಮಂತ್ರ ಪಠಿಸಲೂ ಇದನ್ನು ನೀವು ಬಳಸಬಹುದು. ಇದು ಬ್ರೇಸ್ಲೈಟ್ ರೂಪದಲ್ಲಿರುತ್ತದೆ. ಫೆಂಗ್ ಶೂಯಿ ಪ್ರಕಾರ, ಸಕಾರಾತ್ಮಕ ಶಕ್ತಿಯು ಅದರಿಂದ ಹೊರಬರುತ್ತದೆ. ಇದನ್ನು ಧರಿಸಿದವರ ಹೃದಯ ಮತ್ತು ಮನಸ್ಸು ಶಾಂತವಾಗಿರುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ.

ನೀವು ಬಯಸಿದ್ರೆ ಇದ್ರಲ್ಲಿ ಹೊಳಪಿರುವ ಮಣಿಯ ಮಾಲೆಯನ್ನೂ ಧರಿಸಬಹುದು. ಇದನ್ನು ಧರಿಸುವುದ್ರಿಂದ ರಕ್ತದ ಹರಿವು ಸರಿಯಾಗಿರುತ್ತದೆಯಂತೆ. ಫೆಂಗ್ ಶೂಯಿ ಪ್ರಕಾರ ಇದನ್ನು ಯಾವಾಗ್ಲೂ ಬಲಗೈಗೆ ಧರಿಸಬೇಕಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...