alex Certify ಮದುವೆ ದಿನವೇ ನೀ ಮೊದಲಾ…..ನಾ ಮೊದಲಾ…..ಅಂದ್ರು ವಧು-ವರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನವೇ ನೀ ಮೊದಲಾ…..ನಾ ಮೊದಲಾ…..ಅಂದ್ರು ವಧು-ವರ..!

ಇತ್ತೀಚೆಗೆ ಭಾರತೀಯ ವಿವಾಹದ ವಿಡಿಯೋಗಳು ಅಂತರ್ಜಾಲದಲ್ಲಿ ಹಿಟ್ ಆಗಿವೆ. ವಧು-ವರರ ಅನೇಕ ತಮಾಷೆಯ ಮತ್ತು ಆಸಕ್ತಿದಾಯಕ ಕ್ಲಿಪ್‌ಗಳು ವೈರಲ್ ಆಗುತ್ತಿವೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಭಾರತೀಯ ವಿವಾಹ ಅಂದ್ರೆ ಇಲ್ಲಿ ಹಲವಾರು ಆಚಾರ, ಸಂಪ್ರದಾಯಗಳಿವೆ. ಅಷ್ಟೇ ಅಲ್ಲ, ಜೊತೆಗೆ ಮೋಜು-ಮಸ್ತಿಯೂ ಇದೆ.

ಹೌದು, ಭಾರತೀಯ ವಿವಾಹ ಕಾರ್ಯಕ್ರಮಗಳಲ್ಲಿ ವಧು-ವರರಿಗೆ, ನೀರಿನಲ್ಲಿ ಉಂಗುರ ಹುಡುಕುವುದು, ಹೂ ಚೆಂಡಿನ ಆಟ ಆಡಿಸುವುದು ಮುಂತಾದವುಗಳ ಬಗ್ಗೆ ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ. ಆದರೆ, ಇಲ್ಲೊಂದೆಡೆ ವಧು-ವರನಿಗೆ ವಿಭಿನ್ನವಾದ ಮೋಜಿವ ಆಟ ಆಡಿಸಲಾಗಿದ್ದು, ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ವಿಡಿಯೋದಲ್ಲಿ, ವಧು-ವರ ಮದುವೆಯ ಮಂಟಪದಲ್ಲಿ ಕುಳಿತಿರುವುದನ್ನು ನೋಡಬಹುದು. ಮದುವೆಗೆ ಸಂಬಂಧಿಸಿದ ಎಲ್ಲಾ ಆಚರಣೆಗಳು ಪೂರ್ಣಗೊಂಡಿವೆ. ಈ ಮಧ್ಯೆ, ಪುರೋಹಿತರು ಅವರಿಬ್ಬರನ್ನೂ ಆಟವಾಡುವಂತೆ ಹೇಳಿದ್ದಾರೆ. ಅದೇನೆಂದರೆ, ಯಾರು ಮೊದಲು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೋ ಅವರ ಕೈಯಲ್ಲಿ ಮನೆಯನ್ನು ನಡೆಸುವ ಕೀಲಿಕೈ ಇರುತ್ತದೆ ಎಂಬುದಾಗಿ ಆಟದ ಬಗ್ಗೆ ಅವರು ವಿವರಿಸಿದ್ದಾರೆ.

ಪುರೋಹಿತರು ತಮ್ಮ ಕೈಗಳನ್ನು ಕೆಳಗಿಳಿಸಿದಾಗ, ನವಜೋಡಿ ನಾಮುಂದು ತಾಮುಂದು ಎಂಬಂತೆ ಬೇಗನೆ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ. ಈ ವೇಳೆ ನೆರೆದಿದ್ದವರು ವಧು-ವರನನ್ನು ಹುರಿದುಂಬಿಸಿದ್ದಾರೆ. ವಿಡಿಯೋವನ್ನು ಎಚ್ಚರಿಕೆಯಿಂದ ಗಮನಿಸಿದ್ರೆ, ವಧು ಗೆದ್ದಿದ್ದಾಳೆ ಎಂಬುದು ಸ್ಪಷ್ಟವಾಗುತ್ತದೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ವಿಟ್ಟಿ ವೆಡ್ಡಿಂಗ್ ಎಂಬ ಪುಟ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಖುಷಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...