alex Certify ಮದುವೆ ಕಾರ್ಡ್​ ಸೋರಿಕೆಯಾಗುತ್ತಿದ್ದಂತೆ ಭದ್ರತೆ ಹೆಚ್ಚಿಸಿಕೊಂಡ ಕ್ರಿಕೆಟರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಕಾರ್ಡ್​ ಸೋರಿಕೆಯಾಗುತ್ತಿದ್ದಂತೆ ಭದ್ರತೆ ಹೆಚ್ಚಿಸಿಕೊಂಡ ಕ್ರಿಕೆಟರ್…!

ಗ್ಲೆನ್​ ಮ್ಯಾಕ್ಸ್​ವೆಲ್​ ಮುಂದಿನ ತಿಂಗಳು ಮೆಲ್ಬೋರ್ನ್​ನಲ್ಲಿ ತಮ್ಮ ಭಾರತೀಯ ಮೂಲದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಆಸ್ಟ್ರೇಲಿಯಾದ ಆಲ್​ರೌಂಡರ್​ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ಮದುವೆ ಕಾರ್ಯಕ್ಕೆಂದು ಮುಂದಿನ ತಿಂಗಳು ಕ್ರಿಕೆಟ್​​ಗೆ ಗೈರಾಗಲಿದ್ದಾರೆ.

ಗ್ಲೆನ್​ ಮ್ಯಾಕ್ಸ್​ವೆಲ್​ ಮದುವೆ ಆಮಂತ್ರಣ ಪತ್ರಿಕೆಯು ಸೋಶಿಯಲ್​ ಮೀಡಿಯಾದಲ್ಲಿ ಲೀಕ್​ ಆದ ಬಳಿಕ ಭಾರತೀಯ ನೆಟ್ಟಿಗರು ಮ್ಯಾಕ್ಸ್​ವೆಲ್​ ಮದುವೆಯತ್ತ ಹೆಚ್ಚು ಆಸಕ್ತಿಯನ್ನು ತೋರಿಸುವಂತಾಯ್ತು. ಏಕೆಂದರೆ ಮದುವೆ ಕಾರ್ಡ್​ನ್ನು ತಮಿಳು ಭಾಷೆಯಲ್ಲಿ ಮುದ್ರಿಸಲಾಗಿತ್ತು. ಇದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗಿತ್ತು.

ಆದರೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಆಮಂತ್ರಣ ಪತ್ರಿಕೆ ಲೀಕ್​ ಆಗಿದ್ದು ಮ್ಯಾಕ್ಸ್​ವೆಲ್​ ಮನಸ್ಸಿಗೆ ತುಂಬಾನೆ ಘಾಸಿ ಮಾಡಿದೆ ಎನ್ನಲಾಗಿದೆ. ಇಂತಹ ಪ್ರಮಾದ ಇನ್ಯಾವ ವಿಚಾರದಲ್ಲಿಯೂ ಸಂಭವಿಸಬಾರದು ಎಂಬ ಕಾರಣಕ್ಕೆ ತಮ್ಮ ಮದುವೆಗೆ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿರುವ ಮ್ಯಾಕ್ಸ್​ವೆಲ್​​ ಇದೊಂದು ಖಾಸಗಿ ಕಾರ್ಯಕ್ರಮವಾಗಬೇಕಿತ್ತು. ಆದರೆ ಇದೀಗ ಆಮಂತ್ರಣ ಪತ್ರಿಕೆ ಲೀಕ್​ ಆಗಿದೆ. ಸ್ವಲ್ಪ ಹೆಚ್ಚು ಉತ್ಸಾಹ ತೋರಿಸಿದ ಭಾರತೀಯ ಸಂಬಂಧಿಗಳು ಅವರ ಸ್ನೇಹಿತರಿಗೆ ಮದುವೆ ಕಾರ್ಡ್​ ತೋರಿಸಲು ನಿರ್ಧರಿಸಿದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ನಮಗೆ ಇದು ನಿಜಕ್ಕೂ ಆಘಾತ ತಂದಿತ್ತು. ನಾವೀಗ ಮದುವೆಗೆ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಮ್ಯಾಕ್ಸ್​ವೆಲ್​ ಹಾಗೂ ವಿನಿ 2020ರ ಮಾರ್ಚ್​ ತಿಂಗಳಲ್ಲಿ ಎಂಗೇಜ್​ ಆಗಿದ್ದರು. ನಿಶ್ಚಿತಾರ್ಥಕ್ಕೂ ಮುನ್ನ ಕೆಲವು ಸಮಯಗಳಿಂದ ಈ ಜೋಡಿ ಡೇಟಿಂಗ್​ ಮಾಡುತ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...