alex Certify ಮದುವೆ ಊಟದಲ್ಲಿ ಗಾಂಜಾ ಬೆರೆಸಿದ್ಲು ವಧು, ಮುಂದೆ ಅಲ್ಲೇನು ನಡೀತು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಊಟದಲ್ಲಿ ಗಾಂಜಾ ಬೆರೆಸಿದ್ಲು ವಧು, ಮುಂದೆ ಅಲ್ಲೇನು ನಡೀತು ಗೊತ್ತಾ…?

ಮದುವೆ ಅಂದತಕ್ಷಣ ಎಲ್ಲರಿಗೂ ಇಷ್ಟವಾಗೋದು ವಿಶೇಷ ಊಟ. ಅತಿಥಿಗಳಿಗೆ ರುಚಿಕರವಾದ ಭಕ್ಷ್ಯ ಭೋಜನಗಳನ್ನು ಮಾಡಿ ಬಡಿಸೋದು ಕಾಮನ್.‌ ಅಷ್ಟೇ ಅಲ್ಲ ಮದುವೆಗಳಲ್ಲಿ ಕೆಲವೊಂದು ತಮಾಷೆಯ ಘಟನೆಗಳು ಕೂಡ ನಡೆಯುತ್ತವೆ.

ವಧು ಮತ್ತು ವರನ ಕಡೆಯ ಸಂಬಂಧಿಕರಿಂದ ಹಾಸ್ಯ ಚಟಾಕಿಗಳನ್ನು ಕೇಳಿರ್ತೀರಾ. ಅಷ್ಟೇ ಅಲ್ಲ ವಧು-ವರರು ತಮ್ಮ ವಿವಾಹವನ್ನು ಸ್ಮರಣೀಯವಾಗಿಸಲು ವಿಭಿನ್ನವಾದದ್ದನ್ನು ಮಾಡಲು ಪ್ರಯತ್ನಿಸುತ್ತಾರೆ.

ಫ್ಲೋರಿಡಾ ನಿವಾಸಿ ಡಾನ್ಯಾ ಎಂಬಾಕೆ ತನ್ನ ಮದುವೆಗೆ ಬಂದಿದ್ದ ಅತಿಥಿಗಳೆಲ್ಲ ಆಸ್ಪತ್ರೆಗೆ ಅಲೆಯುವಂತೆ ಮಾಡಿದ್ದಾಳೆ. ಮದುವೆ ಬೋರಿಂಗ್‌ ಆಗಿರಬಾರದು ಅನ್ನೋದು ಈ ಯುವತಿಯ ಆಸೆ. ಅದಕ್ಕಾಗಿ ಮದುವೆಯ ಊಟಕ್ಕೆ ಗಾಂಜಾ ಬೆರೆಸಿಬಿಟ್ಟಿದ್ದಾಳೆ. ಊಟದಲ್ಲಿ ಗಾಂಜಾ ಬೆರೆಸಿರೋದು ಗೊತ್ತಿಲ್ಲದ ಅತಿಥಿಗಳು, ಹೊಟ್ಟೆ ತುಂಬ ಉಂಡಿದ್ದಾರೆ.

ಊಟವಾಗ್ತಿದ್ದಂತೆ ಕೆಲವರಿಗೆ ಹೊಟ್ಟೆನೋವು, ವಾಂತಿ ಶುರುವಾಗಿದೆ. ಇನ್ನು ಕೆಲವರಿಗೆ ಹೃದಯ ಬಡಿತವೇ ಹೆಚ್ಚಾದಂತೆ ಅನಿಸಿತ್ತು. ಒಂದಷ್ಟು ಮಂದಿ ಕಾರಿನಲ್ಲಿ ತೆರಳುವಾಗ್ಲೇ ಪ್ರಜ್ಞೆ ತಪ್ಪಿದ್ದಾರೆ. ಅಸ್ವಸ್ಥರಾದವರೆಲ್ಲ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಂಡಾಗ ಊಟದಲ್ಲಿ ಗಾಂಜಾ ಬೆರೆತಿರೋದು ಗೊತ್ತಾಗಿದೆ.

ಕೂಡಲೇ ಪೊಲೀಸರಿಗೂ ವಿಷಯ ಮುಟ್ಟಿದೆ. ಮದುವೆಯ ಕೇಟರಿಂಗ್‌ ಮಾಡಿದ್ದ ಮಹಿಳೆ ಹಾಗೂ ವಧು ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಅತಿಥಿಗಳು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬಹುತೇಕ ಅಷ್ಟೂ ಮಂದಿ ಗಾಂಜಾ ಬೆರೆಸಿದ್ದ ಊಟ ತಿಂದು ಅಸ್ವಸ್ಥರಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...