alex Certify ಮದುವೆಯಾದ 10 ಗಂಟೆಯೊಳಗೆ ವಧು ವಿಧಿವಶ…! ಶೋಕ ಸಾಗರದಲ್ಲಿ ಮುಳುಗಿದ ಉಭಯ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ 10 ಗಂಟೆಯೊಳಗೆ ವಧು ವಿಧಿವಶ…! ಶೋಕ ಸಾಗರದಲ್ಲಿ ಮುಳುಗಿದ ಉಭಯ ಕುಟುಂಬ

ಹೊಸ ಬದುಕಿಗೆ ಕಾಲಿಟ್ಟಿದ್ದ ನವ ವಧುವೊಬ್ಬಳು ವಿವಾಹವಾದ ಕೇವಲ 10 ಗಂಟೆ ಅವಧಿಯಲ್ಲೇ ಸಾವನ್ನಪ್ಪಿದ್ದಾಳೆ. ಇದರಿಂದ ಸಂಭ್ರಮ ಮನೆ ಮಾಡಿದ್ದ ಮದುವೆ ಮನೆಯಲ್ಲಿ ಶೋಕ ಮಡುಗಟ್ಟಿದೆ. ಆದರೆ ವಧು ಸಾವನ್ನಪ್ಪಿರುವ ಹಿಂದಿನ ಕಾರಣ ಮಾತ್ರ ಆಘಾತಕಾರಿಯಾಗಿದೆ.

ರಾಜಸ್ಥಾದನ ಜೋಧ್‌ಪುರದಲ್ಲಿ ಈ ಘಟನೆ ನಡೆದಿದ್ದು, ಜಿಲ್ಲೆಯ ಕುಯಿಜೋಡಾ ಗ್ರಾಮದಲ್ಲಿ ವಧು ರೇಖಾ ಜೊತೆ ವರ ಸುಭಾಷ್‌ ಮೆರವಣಿಗೆಯಲ್ಲಿ ಬಂದಿದ್ದಾರೆ. ವಧು ಸಹ ಖುಷಿ ಖುಷಿಯಾಗಿ ಮದುವೆಯಲ್ಲಿ ಪಾಲ್ಗೊಂಡಿದ್ದಾಳೆ. ಅಲ್ಲದೇ ವಧು – ವರರಿಬ್ಬರು ಸಪ್ತಪದಿಯನ್ನು ತುಳಿದಿದ್ದಾರೆ.

ಆದರೆ ಇದಾದ 10 ಗಂಟೆ ಬಳಿಕ ವಧು ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಇದರಿಂದ ಮದುವೆಗೆ ಆಗಮಿಸಿದ್ದ ವಧು – ವರನ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಬಳಿಕ ತಿಳಿದುಬಂದ ಅಂಶವೆಂದರೆ ಮದುವೆ ಸಂಭ್ರಮದಲ್ಲಿ ತೀವ್ರವಾಗಿ ದಣಿದಿದ್ದ ವಧು ರೇಖಾ ಬಿಸಿಲಿನ ಧಗೆಯಿಂದ ಬಸವಳಿದು ಹೋಗಿದ್ದಳು ಎನ್ನಲಾಗಿದೆ.

ಈ ಎಲ್ಲ ಕಾರಣದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆಕೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆ. ಇದರಿಂದ ಸಂಭ್ರಮ ಮನೆ ಮಾಡಬೇಕಿದ್ದ ಮದುವೆ ಮನೆಯಲ್ಲಿ ಈಗ ಶೋಕ ಆವರಿಸಿದೆ. ತೀವ್ರ ದುಃಖತಪ್ತರಾಗಿರುವ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...