alex Certify ಮದುವೆಯಾಗಿ ವರ್ಷ ಕಳೆದರೂ ಗರ್ಭಿಣಿಯಾಗದ ಮಹಿಳೆ: ವೈದ್ಯರ ಬಳಿ ಹೋದಾಗ ಬಯಲಾಯ್ತು ಬೆಚ್ಚಿಬೀಳಿಸುವ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗಿ ವರ್ಷ ಕಳೆದರೂ ಗರ್ಭಿಣಿಯಾಗದ ಮಹಿಳೆ: ವೈದ್ಯರ ಬಳಿ ಹೋದಾಗ ಬಯಲಾಯ್ತು ಬೆಚ್ಚಿಬೀಳಿಸುವ ಸಂಗತಿ

ಬೀಜಿಂಗ್: ಪ್ರತಿ ಮಹಿಳೆಯೂ ತಾಯಿಯಾಗಲು ಬಯಸುತ್ತಾಳೆ. ಮದುವೆಯ ನಂತರದಲ್ಲಿ ತಾಯಿಯಾಗಬೇಕು ಎಂಬುದು ಬಹುತೇಕರ ಆಸೆಯಾಗಿರುತ್ತದೆ. ಆದರೆ ಕೆಲವರಿಗೆ ಅದು ಸುಲಭವಾಗಿರುವುದಿಲ್ಲ. ಆದರೂ ಕೂಡ ತಂತ್ರಜ್ಞಾನ ತುಂಬಾ ಅಭಿವೃದ್ಧಿ ಹೊಂದಿದ್ದು, ಮಹಿಳೆಯರಿಗೆ ತಾಯಿಯಾಗುವುದು ಬಹಳ ಕಷ್ಟವೇನೂ ಅಲ್ಲ.

ಚೀನಾದ ಮಹಿಳೆ ಕೂಡ ಮದುವೆಯ ನಂತರ ತಾಯಿಯಾಗಲು ಕಾಯುತ್ತಿದ್ದಳು. ಆದರೆ, ಒಂದು ವರ್ಷದ ಪ್ರಯತ್ನದ ನಂತರವೂ ಗರ್ಭಿಣಿಯಾಗಲು ವಿಫಲವಾದಾಗ ವೈದ್ಯರು ಆಕೆಗೆ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಮಾಧ್ಯಮಗಳ ವರದಿಯ ಪ್ರಕಾರ, 25 ವರ್ಷದ ವಿವಾಹಿತೆ ಪಿಂಗ್ಪಿಂಗ್ (ಹೆಸರು ಬದಲಾಯಿಸಲಾಗಿದೆ) ತಾಯಿಯಾಗಲು ಕುತೂಹಲದಿಂದ ಕಾಯುತ್ತಿದ್ದಳು. ಒಂದು ವರ್ಷ ಮಗುವಿಗಾಗಿ ಪ್ರಯತ್ನಿಸಿದರೂ ಆಕೆ ಗರ್ಭಿಣಿಯಾಗಲು ಸಾಧ್ಯವಾಗಿರಲಿಲ್ಲ.

ಈ ನಡುವೆ ಆಕೆ ಗಾಯಗೊಂಡಿದ್ದು ಪಾದದ ಎಕ್ಸ್ ರೇ ತೆಗೆಸಲು ವೈದ್ಯರ ಬಳಿಗೆ ಹೋಗಿದ್ದಾಳೆ. ವೈದ್ಯರನ್ನು ಭೇಟಿಯಾದ ನಂತರ ಅವರು ಹೇಳಿದ್ದನ್ನು ಕೇಳಿ ಆಕೆ ಕುಸಿದು ಹೋಗಿದ್ದಾಳೆ. ಆಕೆಯ ಕುಟುಂಬದವರು ಕೂಡ ಶಾಕ್ ಆಗಿದ್ದಾರೆ.

ಆಕೆಯನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದಂತೆ ಫಿಂಗ್ವಿಂಗ್ ಹುಟ್ಟಿನಿಂದಲೂ ಗಂಡು ಎಂದು ಗೊತ್ತಾಗಿದೆ. ಆಕೆಯ ಎಲಬುಗಳು ಅಭಿವೃದ್ಧಿ ಹೊಂದಿರಲಿಲ್ಲ. ಆಕೆ ಪುರುಷರ ವೈ ವರ್ಣತಂತುಗಳನ್ನು ಹೊಂದಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಜೀವನದುದ್ದಕ್ಕೂ ಆಕೆ ಮಹಿಳೆಯಾಗಿ ಬದುಕಬಹುದು. ಗರ್ಭಿಣಿಯಾಗಲು ಆಗಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಪಿಂಗ್ವಿಂಗ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಗರ್ಭಿಣಿಯಾಗಲು ಸಾಧ್ಯವಿಲ್ಲವೆಂಬ ಸತ್ಯವನ್ನು ವೈದ್ಯರು ತಿಳಿಸಿದ ನಂತರ ವೈದ್ಯರು ಸತ್ಯವನ್ನು ಒಪ್ಪಿಕೊಳ್ಳಲು ಆಕೆಗೆ ಸಾಧ್ಯವಾಗುತ್ತಿಲ್ಲ. ಒಂದು ರೀತಿಯ ಲೈಂಗಿಕ ಅಸ್ವಸ್ಥೆಯಿಂದ ಬಳಲುತ್ತಿದ್ದಾಳೆ. ಆಕೆಯ ಜನನಾಂಗವು ಅಸ್ಪಷ್ಟವಾಗಿದೆ. ಹೆಣ್ಣು ಜನನಾಂಗದೊಂದಿಗೆ ಜನಿಸಿದ ಆಕೆಗೆ ವೈ ವರ್ಣತಂತುಗಳಿವೆ. ಎಂದಿಗೂ ಈ ವಿಷಯದ ಬಗ್ಗೆ ಆಕೆ ಗಮನಹರಿಸಿರಲಿಲ್ಲ. ಈ ಮೊದಲೇ ಅವಳು ವೈದ್ಯರನ್ನು ಸಂಪರ್ಕಿಸಿದ್ದರೆ ಬೇಗನೆ ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದರು. ಆದರೆ, ಮದುವೆಯ ನಂತರ ಗರ್ಭಿಣಿಯಾಗಲು ಸಾಧ್ಯವಾಗದ ನಂತರ ಆಶ್ಚರ್ಯಕರ ಸಂಗತಿ ಗೊತ್ತಾಗಿದೆ. ಇದನ್ನು ಬಹಿರಂಗಪಡಿಸಿದರೆ ಅವಮಾನವಾಗುತ್ತದೆ ಎಂಬ ಕಾರಣಕ್ಕೆ ಎಂದಿಗೂ ಅದರ ಬಗ್ಗೆ ಮಾತನಾಡಲಿಲ್ಲ ಎಂದು ಪೆಂಗ್ವಿಂಗ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...