alex Certify ಮತ್ತೊಮ್ಮೆ ದಿಗ್ಗಜರ ಕ್ರಿಕೆಟ್ ನಲ್ಲಿ ಕಣಕ್ಕೆ ಇಳಿಯಲಿರುವ ಮಾಜಿ ಆಟಗಾರರ ದಂಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ದಿಗ್ಗಜರ ಕ್ರಿಕೆಟ್ ನಲ್ಲಿ ಕಣಕ್ಕೆ ಇಳಿಯಲಿರುವ ಮಾಜಿ ಆಟಗಾರರ ದಂಡು

ನವದೆಹಲಿ : ಭಾರತ ಹಾಗೂ ಯುಎಇನಲ್ಲಿ ನಡೆಯಲಿರುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ನ ಎರಡನೇ ಆವೃತ್ತಿಯ ಟೂರ್ನಿ ಮಾರ್ಚ್ 1ರಿಂದ ಆರಂಭವಾಗಲಿದ್ದು, ಭಾರತ ಹಾಗೂ ಪಾಕ್ ನ ದಿಗ್ಗಜ ಕ್ರಿಕೆಟಿಗರು ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ.

ರಸ್ತೆ ಸುರಕ್ಷತಾ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಟೂರ್ನಿ ಆರಂಭಿಸಲಾಗಿದ್ದು, ಈ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ ನಿವೃತ್ತಿ ಹೊಂದಿರುವ ಆಟಗಾರರು ಭಾಗವಹಿಸುತ್ತಾರೆ. ಮೊದಲ ಟ್ರೋಫಿಯನ್ನು ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ ಲೆಜೆಂಡ್ ತಂಡ ಗೆದ್ದುಕೊಂಡಿದೆ.

ಈ ಟೂರ್ನಿಯಲ್ಲಿ ಭಾರತ ಲೆಜೆಂಡ್ಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ್ ಲೆಜೆಂಡ್ಸ್ ತಂಡಗಳು ಭಾಗವಹಿಸಲಿವೆ. ಈ ಬಾರಿಯ ಮೊದಲ ಪಂದ್ಯದಲ್ಲಿ ಭಾರತ ಲೆಜೆಂಡ್ಸ್ ಹಾಗೂ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡಗಳು ಮುಖಾಮುಖಿಯಾಗಲಿವೆ.

Shocking News: ಜನವರಿ 1 ರಿಂದ ಅಂಚೆ ಕಚೇರಿ ಖಾತೆದಾರರ ಜೇಬಿಗೆ ಬೀಳಲಿದೆ ಕತ್ತರಿ

ಈ ಟೂರ್ನಿಯಲ್ಲಿ ಒಟ್ಟು 38 ಪಂದ್ಯಗಳು ನಡೆಯಲಿದ್ದು, ಲೀಗ್ ಹಂತದಲ್ಲಿ 35 ಪಂದ್ಯಗಳು ನಡೆಯಲಿವೆ. 160ಕ್ಕೂ ಹೆಚ್ಚು ನಿವೃತ್ತಿ ಪಡೆದ ವಿವಿಧ ದೇಶಗಳ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಮಾ. 16 ಹಾಗೂ 17ರಂದು ಸೆಮಿಫೈನಲ್ ಪಂದ್ಯ ನಡೆಯಲಿದ್ದು, 19ರಂದು ಫೈನಲ್ ಪಂದ್ಯ ನಡೆಯಲಿದೆ.

ಇದುವರೆಗೂ ಯಾವ ದೇಶಗಳು ತಮ್ಮ ತಂಡವನ್ನು ಪ್ರಕಟಿಸಿಲ್ಲ. ಆದರೆ, ಕಳೆದ ಬಾರಿಯ ಭಾರತ ಲೆಜೆಂಡ್ ತಂಡದಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಮೊಹಮ್ಮದ್ ಕೈಫ್ ಸೇರಿದಂತೆ ಹಲವು ದಿಗ್ಗಜರು ಭಾರತದ ಪರ ಆಡಿದ್ದರು.
ಮಾ. 12ರಂದು ಯುಎಇನಲ್ಲಿ ಭಾರತ ಹಾಗೂ ಪಾಕ್ ತಂಡಗಳು ಕಾದಾಟ ನಡೆಸಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...