alex Certify ಮಣಿಪುರ ಸಿಎಂ ಅಳಿಯನ ಬಳಿಯಿದೆ ಮಾವನಿಗಿಂತ ಐದು ಪಟ್ಟು ಅಧಿಕ ಆಸ್ತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಣಿಪುರ ಸಿಎಂ ಅಳಿಯನ ಬಳಿಯಿದೆ ಮಾವನಿಗಿಂತ ಐದು ಪಟ್ಟು ಅಧಿಕ ಆಸ್ತಿ….!

ಮಣಿಪುರ ಸಿಎಂ ಎನ್​. ಬಿರೇನ್​ ಸಿಂಗ್​​ರ ಅಳಿಯ ಆರ್​​.ಕೆ ಇಮೋ ಸಿಂಗ್​​ ಚುನಾವಣಾ ಅಫಿಡವಿಟ್​ ಸಲ್ಲಿಸಿದ್ದು ಇದರಲ್ಲಿ ತಮ್ಮ ಬಳಿ 5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂಬುದನ್ನು ಘೋಷಣೆ ಮಾಡಿದ್ದಾರೆ. ತಮ್ಮ ಮಾವ ಸಿಎಂ ಎನ್​ ಬಿರೇನ್​ ಸಿಂಗ್​​ಗಿಂತ ಇಮೋ ಸಿಂಗ್​ ಐದು ಪಟ್ಟು ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.

ಆರ್​.ಕೆ ಇಮೋ ಸಿಂಗ್​ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಸಗೋಲ್​ ಬಂದ್​ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ಮಣಿಪುರ ಸಿಎಂ ಬಿರೇನ್​​ ಸಿಂಗ್​​ 1,08,46,392 ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಆದರೆ ಅವರ ಅಳಿಯ ಆರ್​.ಕೆ ಇಮೋ ಸಿಂಗ್​ 5,10,94,917.93 ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಆರ್​ಕೆ ಇಮೋ ಬಳಿ 1,14,37,779.93 ರೂಪಾಯಿ ಮೌಲ್ಯದ ಚರಾಸ್ಥಿ ಇದರಲ್ಲಿ 2,16,400 ರೂಪಾಯಿ ನಗದು, ಒಟ್ಟು 7 ಬ್ಯಾಂಕ್​ ಖಾತೆಗಳಲ್ಲಿ 37 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಹೊಂದಿದ್ದಾರೆ. ಇವರ ಬಳಿಯಲ್ಲಿ ಎರಡು ಕಾರುಗಳು ಇವೆ. 6.5 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಜಿಪ್ಸಿ ಹಾಗೂ 16,68,905 ರೂಪಾಯಿ ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೋ ,18,38,688 ರೂಪಾಯಿ ಮೌಲ್ಯದ ಹಾರ್ಲೆ ಡೆವಿಡ್ಸನ್​ ಬೈಕ್​​ನ್ನು ಹೊಂದಿದ್ದಾರೆ. ಇವರ ಬಳಿ ಶಾಟ್​ ಗನ್​ ಹಾಗೂ 38 ಪಿಸ್ತೂಲ್​ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...