alex Certify ಮಗನ ಬೆಡ್ ಕೆಳಗಿದ್ದ ವಸ್ತು ನೋಡಿ ದಂಗಾದ ತಾಯಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನ ಬೆಡ್ ಕೆಳಗಿದ್ದ ವಸ್ತು ನೋಡಿ ದಂಗಾದ ತಾಯಿ….!

ಮನೆಯಲ್ಲಿ ಮಕ್ಕಳಿದ್ಮೇಲೆ ಸ್ವಚ್ಛತೆಯ ಪ್ರಶ್ನೆಯೇ ಇಲ್ಲ. ಮನೆಯ ಮೂಲೆ-ಮೂಲೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿರುತ್ತವೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಫೋಟೋ ಒಂದನ್ನು ಹಂಚಿಕೊಂಡಿದ್ದಾಳೆ. ಮಗನ ಮಂಚದ ಕೆಳಗಿರುವ ವಸ್ತುಗಳನ್ನು ನೋಡಿ ಆಕೆ ದಂಗಾಗಿದ್ದಾಳೆ.

ಯುಎಸ್ ನ ಲೆಕ್ಸಿಂಗ್ಟನ್ ನಲ್ಲಿ ವಾಸಿಸುವ ಅಮಂಡಾ ನೈಬರ್ಟ್, ಮಗನ ರೂಮ್ ಸ್ವಚ್ಛಗೊಳಿಸಲು ಹೋಗಿದ್ದಾಳೆ. ಬೆಡ್ ಕೆಳಗಿನ ವಸ್ತು ನೋಡಿ ದಂಗಾಗಿದ್ದಾಳೆ. ಬೆಡ್ ಕೆಳಗೆ ಚಿಪ್ಸ್ ಪಾಕೆಟ್, ಹಾಳಾದ ಪೆನ್ ಸೇರಿದಂತೆ ಬಾಟಲ್ ಕೂಡ ಇತ್ತಂತೆ.

ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಮಹಿಳೆ, ಕೊನೆಯಲ್ಲಿ ನೀವು ನಿಮ್ಮ ಮಗನ ರೂಮ್ ಯಾವಾಗ ಕ್ಲೀನ್ ಮಾಡಿದ್ರಿ ಎಂದು ಶೀರ್ಷಿಕೆ ಹಾಕಿದ್ದಾಳೆ. ಈ ವಿಡಿಯೋ ಜನರಿಗೆ ಇಷ್ಟವಾಗಿದೆ. ಮಹಿಳೆ ಪೋಸ್ಟ್ ಮಾಡಿರುವ ಈ ವಿಡಿಯೋವನ್ನು 17 ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅನೇಕರು ಲೈಕ್ ಒತ್ತಿದ್ದಾರೆ. ನಾನು ಹೀಗೆ ಮಾಡಿದ್ರೆ ನನ್ನಮ್ಮ, ನನ್ನನ್ನು ಕೊಂದು ಬಿಡ್ತಿದ್ದಳು ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾನೆ. ಇನ್ನೊಬ್ಬರು, ನಾನು ಅಂದ್ಕೊಂಡಷ್ಟು ಕೊಳಕಾಗಿಲ್ಲ ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...