ಅತಿಯಾಗಿ ಸಿಹಿ ತಿಂಡಿಗಳ ಸೇವನೆ ಹಾಗೂ ಹಾಲು ಕುಡಿಯುವುದ್ರಿಂದ ಮಕ್ಕಳ ಹಲ್ಲುಗಳು ಕೀಟದ ಪಾಲಾಗುವುದು ಸಾಮಾನ್ಯ. ಮಕ್ಕಳ ಹಲ್ಲುಗಳಿಗೆ ಸರಿಯಾಗಿ ಬ್ರೆಷ್ ಮಾಡಲು ಬರುವುದಿಲ್ಲ. ಹಾಗೆ ಹಲ್ಲು ಉಜ್ಜುವುದ್ರಿಂದ ಮಾತ್ರ ಕೀಟಗಳ ನಾಶ ಸಾಧ್ಯವಿಲ್ಲ. ಮಕ್ಕಳ ಹಲ್ಲುಗಳನ್ನು ಕೀಟಗಳಿಂದ ರಕ್ಷಿಸಬೇಕಾದಲ್ಲಿ ಕೆಲ ಟಿಪ್ಸ್ ಅನುಸರಿಸಬೇಕು.
ಹಿಂಗನ್ನು ಸ್ವಲ್ಪ ಬಿಸಿ ಮಾಡಿ. ಅದನ್ನು ಹತ್ತಿ ಸಹಾಯದಿಂದ ಕೀಟಗಳು ದಾಳಿ ನಡೆಸಿರುವ ಹಲ್ಲಿನ ಮೇಲೆ ಇಡಿ. ಇದ್ರಿಂದ ಮಕ್ಕಳಿಗೆ ಕೀಟದಿಂದ ಆಗುವ ನೋವು ಕಡಿಮೆಯಾಗುತ್ತದೆ.
ಅರಿಶಿನ ಪುಡಿಯನ್ನು ಸಾಸಿವೆ ಎಣ್ಣೆಯಲ್ಲಿ ಮಿಕ್ಸ್ ಮಾಡಿ. ಅದರಿಂದ ಪ್ರತಿದಿನ ಮಕ್ಕಳ ಹಲ್ಲನ್ನು ಉಜ್ಜಿ. ದಿನಕ್ಕೆ ಎರಡು ಬಾರಿ ಇದ್ರಿಂದ ಹಲ್ಲುಜ್ಜಿದರೆ ಹಲ್ಲಿನ ಹುಳ ಸಾಯುತ್ತದೆ.
ಸಾಸಿವೆ ಎಣ್ಣೆಗೆ ದಾಲ್ಚಿನಿ ಪುಡಿಯನ್ನು ಹಾಕಿ ಕೆಟ್ಟ ಹಲ್ಲುಗಳ ಮೇಲೆ ಹತ್ತಿಯಿಂದ ಹಾಕಿ. ಇದ್ರಿಂದ ಹಲ್ಲಿನ ಹುಳು ಸಮಸ್ಯೆ ನಿವಾರಣೆಯಾಗುತ್ತದೆ.