alex Certify ಮಕ್ಕಳಿಲ್ಲದವರಿಗೆ ಆಶಾಕಿರಣ IVF, ಈ ಪ್ರಕ್ರಿಯೆ ಎಷ್ಟು ಕಠಿಣ….? ಎಷ್ಟು ದುಬಾರಿ…..? ಇಲ್ಲಿದೆ ಪೂರ್ತಿ ಡಿಟೇಲ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಲ್ಲದವರಿಗೆ ಆಶಾಕಿರಣ IVF, ಈ ಪ್ರಕ್ರಿಯೆ ಎಷ್ಟು ಕಠಿಣ….? ಎಷ್ಟು ದುಬಾರಿ…..? ಇಲ್ಲಿದೆ ಪೂರ್ತಿ ಡಿಟೇಲ್ಸ್‌

ತಾಯಿಯಾಗಬೇಕು ಅನ್ನೋದು ಪ್ರತಿಯೊಬ್ಬ ಮಹಿಳೆಯ ಬಯಕೆ. ಆದರೆ ಈ ಸಂತೋಷವನ್ನು ಪಡೆಯಲು ಸಾಧ್ಯವಾಗದ ಕೆಲವು ಮಹಿಳೆಯರ ಪಾಲಿಗೆ ಐವಿಎಫ್ ಭರವಸೆಯ ಆಶಾಕಿರಣವಾಗಿದೆ. ಇದನ್ನು ಇನ್ ವಿಟ್ರೊ ಫರ್ಟಿಲೈಸೇಶನ್‌ (IVF) ಎಂದು ಕರೆಯಲಾಗುತ್ತದೆ. ಮಹಿಳೆಯರಲ್ಲಿ ಕೃತಕ ಗರ್ಭಧಾರಣೆಯ ವಿಧಾನ ಇದು. ಫಾಲೋಪಿಯನ್ ಟ್ಯೂಬ್‌ಗಳು ಸಂಪೂರ್ಣವಾಗಿ ನಿರ್ಬಂಧಿಸಲ್ಪಟ್ಟಿರುವ ಮಹಿಳೆಯರು ಐವಿಎಫ್ ಮೂಲಕ ಗರ್ಭಧರಿಸಬಹುದು.

ಇದಲ್ಲದೆ ಪುರುಷರಲ್ಲಿ ವೀರ್ಯದ ಕೊರತೆಯಿದ್ದರೆ ಕೂಡ ಐವಿಎಫ್ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಪಿಸಿಓಡಿ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚುತ್ತಿದೆ. ಇದರಿಂದಾಗಿ ಅಂಡೋತ್ಪತ್ತಿ ಸಮಸ್ಯೆಗಳಾಗುತ್ತವೆ. ಎಂಡೊಮೆಟ್ರಿಯೊಸಿಸ್ ಅಥವಾ ಇತರ ಫಲವತ್ತತೆ ಚಿಕಿತ್ಸೆಗಳು ವಿಫಲಗೊಳ್ಳುವುದರಿಂದ ವೈದ್ಯರು ಐವಿಎಫ್ ಅನ್ನು ಶಿಫಾರಸು ಮಾಡುತ್ತಾರೆ. ಅನೇಕ ಬಾರಿ ಯಾವುದೇ ಸಮಸ್ಯೆಗಳೇ ಇಲ್ಲದಿದ್ದರೂ ಗರ್ಭಧರಿಸಲು ಸಾಧ್ಯವಾಗುವುದಿಲ್ಲ.

ಅಂತಹ ಸಂದರ್ಭಗಳಲ್ಲಿಯೂ ಐವಿಎಫ್‌ ಮೊರೆಹೋಗುತ್ತಾರೆ. ಕೆಲವೊಮ್ಮೆ IVF ಸಹ ವಿಫಲಗೊಳ್ಳುತ್ತದೆ. 60 ರಿಂದ 70 ಪ್ರತಿಶತದಷ್ಟು ಪ್ರಕರಣಗಳಲ್ಲಿ ದಂಪತಿಗಳು ಮೊದಲ ಪ್ರಯತ್ನದಲ್ಲಿ IVF ಮೂಲಕ ಗರ್ಭಧರಿಸುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಈ ಸಂಪೂರ್ಣ ಪ್ರಕ್ರಿಯೆಯನ್ನು 2-3 ಬಾರಿ ಮಾಡಬೇಕಾಗಿ ಬರಬಹುದು.

IVFನ ಸಂಪೂರ್ಣ ಪ್ರಕ್ರಿಯೆ

IVF ಅನ್ನು ಮೊದಲು ಟೆಸ್ಟ್ ಟ್ಯೂಬ್ ಬೇಬಿ ಎಂದೂ ಕರೆಯಲಾಗುತ್ತಿತ್ತು. ಸರಳ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದಾದರೆ ಇದರಲ್ಲಿ ಮಹಿಳೆಯ ಅಂಡಾಣುಗಳು ಪುರುಷನ ವೀರ್ಯದೊಂದಿಗೆ ಬೆರೆತಿರುತ್ತವೆ.ಎರಡರ ಸಮ್ಮಿಳನದಿಂದ ಭ್ರೂಣವು ರೂಪುಗೊಂಡಾಗ, ಅದನ್ನು ಮತ್ತೆ ಮಹಿಳೆಯ ಗರ್ಭದಲ್ಲಿ ಇಡಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಗೆ ಬಹಳಷ್ಟು ಸಮಯ ಮತ್ತು ಹಣ ಬೇಕು. ಆದರೆ ಮಗುವಿಗಾಗಿ ಹಂಬಲಿಸುವ ದಂಪತಿಗೆ ಇದು ವರದಾನವಾಗಿದೆ.

ಈ ಸಂಪೂರ್ಣ ಪ್ರಕ್ರಿಯೆಯ ನೋವುರಹಿತವಾಗಿರುತ್ತದೆ. ಇದರಲ್ಲಿ ಮೊದಲ ಹಂತವೆಂದರೆ ಅಂಡಾಶಯದ ಪ್ರಚೋದನೆ. ಮಹಿಳೆಯ ಅಂಡಾಶಯದಿಂದ ಎಗ್‌ ಹೊರತೆಗೆಯಲಾಗುತ್ತದೆ. ಮಹಿಳೆಯ ಅಂಡೋತ್ಪತ್ತಿ ಪ್ರಕ್ರಿಯೆಯ ನಂತರ ನಿಖರವಾಗಿ 34 ರಿಂದ 36 ಗಂಟೆಗಳ ನಂತರ ಈ ಎಗ್‌ ಹೊರತೆಗೆಯುವ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಸೂಜಿಯ ಎಗ್‌ ಹೊರತೆಗೆಯಲಾಗುತ್ತದೆ. 3-5 ದಿನಗಳ ನಂತರ ಭ್ರೂಣವನ್ನು ಮಹಿಳೆಯ ಗರ್ಭದಲ್ಲಿ ಇರಿಸಲಾಗುತ್ತದೆ.

ಈ ಸಂಪೂರ್ಣ ಪ್ರಕ್ರಿಯೆಯು ನೋವು ರಹಿತವಾಗಿರುತ್ತದೆ. ಭಾರತದಲ್ಲಿ IVF ವೆಚ್ಚವು 1 ಲಕ್ಷದಿಂದ 2, 50,000 ಲಕ್ಷದವರೆಗಿದೆ. ದಂಪತಿಗಳ ಆರೋಗ್ಯದ ಸ್ಥಿತಿಯನ್ನು ಅವಲಂಬಿಸಿ, ಈ ವೆಚ್ಚವು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ದಂಪತಿಗಳ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ವಿವಿಧ ಆಸ್ಪತ್ರೆಗಳು ಫಲವತ್ತತೆ ಚಿಕಿತ್ಸೆಯ ವಿವಿಧ ಪ್ಯಾಕೇಜ್‌ಗಳನ್ನೂ ಹೊಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...