alex Certify ಮಕ್ಕಳಿಗೆ ಮಾಡಿಕೊಡಿ ಈ ವಾಲ್ ನಟ್ ಬರ್ಫಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಮಾಡಿಕೊಡಿ ಈ ವಾಲ್ ನಟ್ ಬರ್ಫಿ

ಮಕ್ಕಳು ಎಲ್ಲಾ ರೀತಿಯ ಡ್ರೈ ಫ್ರೂಟ್ಸ್ ತಿನ್ನಲ್ಲ. ಹಾಗಾಗಿ ಅವರಿಗೆ ಡ್ರೈ ಫ್ರೂಟ್ಸ್ ಬಳಸಿ ಯಾವುದಾದರೂ ಸಿಹಿತಿಂಡಿ ಮಾಡಿಕೊಡಿ. ಇದರಿಂದ ಮಕ್ಕಳು ಖುಷಿಯಾಗುತ್ತಾರೆ.

ಬೇಕಾಗುವ ಸಾಮಗ್ರಿಗಳು:

ವಾಲ್ ನಟ್-1 ಕಪ್, ಸಕ್ಕರೆ-1/2 ಕಪ್, ಏಲಕ್ಕಿ ಪುಡಿ-1/4 ಟೀ ಸ್ಪೂನ್, ನೀರು-4 ಟೇಬಲ್ ಸ್ಪೂನ್.

ಮಾಡುವ ವಿಧಾನ:

ವಾಲ್ ನಟ್ ಅನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಪ್ಯಾನ್ ಗೆ ಸಕ್ಕರೆ ಹಾಗೂ ನೀರು ಸೇರಿಸಿ ಒಂದೆಳೆ ಪಾಕ ಬರುವವರೆಗೆ ಕುದಿಸಿಕೊಳ್ಳಿ. ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ವಾಲ್ ನಟ್ ಪುಡಿ ಸೇರಿಸಿ ಮಿಕ್ಸ್ ಮಾಡಿ. ಇದು ತಳ ಬಿಡುವವರೆಗೆ ಚೆನ್ನಾಗಿ ತಿರುಗಿಸಿ. ನಂತರ ಇದನ್ನು ತುಪ್ಪ ಸವರಿದ ಒಂದು ತಟ್ಟೆಗೆ ಹಾಕಿ ಚೆನ್ನಾಗಿ ಸಮತಟ್ಟು ಮಾಡಿಕೊಳ್ಳಿ. ಸ್ವಲ್ಪ ಗಟ್ಟಿಯಾದ ಮೇಲೆ ಇದನ್ನು ಕತ್ತರಿಸಿಕೊಂಡು ಸವಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...