alex Certify ಮಕ್ಕಳಿಗೆ ಪೋಷಕರು ಹಾಗೂ ಅಜ್ಜಿ – ತಾತನ ಪ್ರೀತಿ, ವಾತ್ಸಲ್ಯ ಪಡೆಯುವ ಹಕ್ಕಿದೆ: ಬಾಂಬೆ ಹೈಕೋರ್ಟ್‌ ಮಹತ್ವದ ಅಭಿಪ್ರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಪೋಷಕರು ಹಾಗೂ ಅಜ್ಜಿ – ತಾತನ ಪ್ರೀತಿ, ವಾತ್ಸಲ್ಯ ಪಡೆಯುವ ಹಕ್ಕಿದೆ: ಬಾಂಬೆ ಹೈಕೋರ್ಟ್‌ ಮಹತ್ವದ ಅಭಿಪ್ರಾಯ

ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ತಂದೆ – ತಾಯಿಯ ಡೈವೋರ್ಸ್‌ ಆದ್ಮೇಲೆ ಮಕ್ಕಳು ಇಬ್ಬರಲ್ಲಿ ಒಬ್ಬರ ಜೊತೆ ಇರಬೇಕು. ಆಗ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರ ಪ್ರೀತಿ ಆರೈಕೆ ಮಕ್ಕಳಿಗೆ ಸಿಗೋದಿಲ್ಲ.

ಹಾಗಾಗಿ ವಿಚ್ಛೇದಿತ ಪತಿ, ಅತ್ತೆ-ಮಾವನಿಗೆ ಮಕ್ಕಳನ್ನು ನೋಡಲು ಅವಕಾಶ ನೀಡುವಂತೆ ಬಾಂಬೆ ಹೈಕೋರ್ಟ್‌ ಮಹಿಳೆಯೊಬ್ಬಳಿಗೆ ಸೂಚನೆ ನೀಡಿದೆ. ನಾಲ್ಕು ದಿನ ಉಳಿದುಕೊಳ್ಳಲು ಅವರಿಗೆ ಅವಕಾಶ ನೀಡಬೇಕೆಂದು ಕೂಡ ಆದೇಶಿಸಿದೆ. ಮಕ್ಕಳಿಗೆ ಅವರ ಪೋಷಕರು ಹಾಗೂ ಅಜ್ಜಿ – ತಾತನ ಪ್ರೀತಿ, ವಾತ್ಸಲ್ಯವನ್ನು ಪಡೆಯುವ ಹಕ್ಕಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಕಳೆದ 22 ತಿಂಗಳುಗಳಿಂದ ಮಕ್ಕಳನ್ನು ನೋಡಲು ಪತ್ನಿ ಅವಕಾಶ ನೀಡಿಲ್ಲ ಎಂದು 38 ವರ್ಷದ ವ್ಯಕ್ತಿ ಕೋರ್ಟ್‌ ಮೆಟ್ಟಿಲೇರಿದ್ದ. ಈ ಮೊದಲು ಸಹ ಇದೇ ವಿಚಾರಕ್ಕೆ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ನ್ಯಾಯಪೀಠ ಮಕ್ಕಳನ್ನು ಭೇಟಿ ಮಾಡಲು ತಂದೆಗೆ ಅವಕಾಶ ನೀಡುವಂತೆ ಸೂಚಿಸಿದ್ದರೂ ಮಹಿಳೆ ಅದರಂತೆ ನಡೆದುಕೊಂಡಿರಲಿಲ್ಲ.

ತನ್ನ ಪೋಷಕರಿಗೆ ಆರೋಗ್ಯ ಸಮಸ್ಯೆ ಇದ್ದು, ಮೊಮ್ಮಕ್ಕಳನ್ನು ನೋಡಬೇಕೆಂದು ಆಸೆಪಡುತ್ತಿದ್ದಾರೆ. ಹಾಗಾಗಿ ಮಕ್ಕಳ ತಾತ್ಕಾಲಿಕ ಕಸ್ಟಡಿಗೆ ಅವಕಾಶ ಕೊಡಿ ಎಂದು ಆತ ಮನವಿ ಮಾಡಿಕೊಂಡಿದ್ದ. ಜಸ್ಟಿಸ್‌ ಅನುಜಾ ಪ್ರಭುದೇಸಾಯಿ ಅವರಿದ್ದ ಏಕಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿದೆ.

2018ರಲ್ಲಿ ದಂಪತಿ ಬೇರೆಯಾಗಿದ್ದರು. ಇವರಿಗೆ 10 ವರ್ಷ ಪ್ರಾಯದ ಅವಳಿ ಗಂಡುಮಕ್ಕಳಿದ್ದಾರೆ. ಮಕ್ಕಳ ಹುಟ್ಟುಹಬ್ಬದ ದಿನ ಕೂಡ ತಂದೆಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಕೋರ್ಟ್‌ ಆದೇಶಿಸಿತ್ತು. ಆದ್ರೆ ಮಹಿಳೆ ಅದನ್ನೂ ಧಿಕ್ಕರಿಸಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ.

ತಂದೆ ಹಾಗೂ ಅಜ್ಜ, ಅಜ್ಜಿಯ ಪ್ರೀತಿ, ವಾತ್ಸಲ್ಯ ಸಿಕ್ಕರೆ ಮಕ್ಕಳ ವೈಯಕ್ತಿಕ ಅಭಿವೃದ್ಧಿ ಮತ್ತು ಒಟ್ಟಾರೆ ಯೋಗಕ್ಷೇಮ ಸಾಧ್ಯ. ಹಾಗಾಗಿ ಅವರನ್ನು ಭೇಟಿಯಾಗಲು ಅವಕಾಶ ಕೊಡಿ ಅಂತ ಕೋರ್ಟ್‌ ಆದೇಶಿಸಿದೆ. ಎಪ್ರಿಲ್‌ 14 ರಿಂದ 16ರವರೆಗೆ ಮಹಿಳೆ ಮಕ್ಕಳನ್ನು ಪುಣೆಯ ಮಾಲ್‌ ಒಂದಕ್ಕೆ ಕರೆತರಬೇಕು. ಅಲ್ಲಿ ತಂದೆ ಮಕ್ಕಳನ್ನು ಭೇಟಿ ಮಾಡಬಹುದು, ಮಕ್ಕಳೊಂದಿಗೆ ಸಮಯ ಕಳೆಯಬಹುದೆಂಬ ತೀರ್ಮಾನಕ್ಕೆ ಬರಲಾಗಿದೆ. ಎಪ್ರಿಲ್‌ 17ರಂದು ಮಧ್ಯಾಹ್ನ 3 ಗಂಟೆಗೆ ತಂದೆ, ಮಕ್ಕಳನ್ನು ತಾಯಿಯ ಕಸ್ಟಡಿಗೆ ಒಪ್ಪಿಸಬೇಕಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...