alex Certify ಮಂಗಳೂರಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳೂರಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭೇಟಿ

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರದಂದು ಮಂಗಳೂರಿಗೆ ಅಲ್ಪಕಾಲದ ಭೇಟಿ ನೀಡಿದ್ದರು. ಈ ವೇಳೆ ಅಭಿಮಾನಿಗಳು ಅವರ ಭೇಟಿಗೆ ಹಾತೊರೆದರೂ ಅವಕಾಶ ಲಭ್ಯವಾಗಿಲ್ಲ.

ಸೌದಿ ಅರೇಬಿಯಾದಲ್ಲಿ ಆಸ್ಪತ್ರೆ ಹೊಂದಿರುವ ಕಾಸರಗೋಡಿನ ಬೇಕಲದ ಡಾ. ಶಾಜೀರ್ ಗಫರ್, ತಮ್ಮ ತಂದೆ ಪ್ರೊ. ಕೆ.ಕೆ. ಅಬ್ದುಲ್ ಗಫರ್ ಅವರ ಆತ್ಮಚರಿತ್ರೆ ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಧೋನಿ ಅವರನ್ನು ಆಹ್ವಾನಿಸಿದ್ದು, ಇದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಬಂದಿದ್ದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಶಾಸಕ ಯು.ಟಿ. ಖಾದರ್ ಅವರ ಸಹೋದರ ಡಾ. ಯು.ಟಿ. ಇಫ್ತಿಕಾರ್ ಸ್ವಾಗತಿಸಿದ್ದು, ಬಳಿಕ ಮಹೇಂದ್ರ ಸಿಂಗ್ ಧೋನಿ ವಿಮಾನ ನಿಲ್ದಾಣದಿಂದ ಕಾಸರಗೋಡಿಗೆ ಐಷಾರಾಮಿ ಕಾರಿನಲ್ಲಿ ತೆರಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...