alex Certify ಮಂಗಳವಾರ ಹುಟ್ಟಿದವರ ʼವ್ಯಕ್ತಿತ್ವʼ ಹೇಗಿರುತ್ತೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳವಾರ ಹುಟ್ಟಿದವರ ʼವ್ಯಕ್ತಿತ್ವʼ ಹೇಗಿರುತ್ತೆ ಗೊತ್ತಾ…?

ಮಂಗಳವಾರ ಈ ದಿನದ ಅಧಿಪತಿ ಮಂಗಳ. ಈ ವಾರ ಹುಟ್ಟಿದವರು ಉತ್ಸಾಹಿಗಳಾಗಿರುತ್ತಾರೆ. ಹಾಗೇ ಯಾವುದೇ ಕೆಲಸವನ್ನು ಕೂಡ ಮಾಡಬಲ್ಲ ತಾಕತ್ತು ಇವರಲ್ಲಿರುತ್ತದೆ. ಸವಾಲುಗಳು, ತೊಂದರೆಗಳು ಇವರನ್ನು ಮಾಡುವ ಕೆಲಸದಿಂದ ವಿಮುಖರನ್ನಾಗಿಸುವುದಿಲ್ಲ.

ಇನ್ನು ಇವರು ತಮ್ಮ ಸಿಟ್ಟು, ಧೈರ್ಯ ಎರಡನ್ನೂ ತಮ್ಮ ನಡವಳಿಕೆಯ ಮೂಲಕ ತೋರಿಸುತ್ತಾರೆ. ಟೀಕೆಗಳನ್ನು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ತಮ್ಮ ಬಗ್ಗೆ ಯಾರಾದರೂ ನಕರಾತ್ಮಕವಾಗಿ ಮಾತನಾಡಿದರೆ ಸಹಿಸಿಕೊಳ್ಳಲ್ಲ.

ಏನೇ ಕೆಲಸ ಮಾಡಿದರೂ ಅದನ್ನು ಶ್ರದ್ಧೆಯಿಂದ ಮಾಡುತ್ತಾರೆ. ತನ್ನಿಂದ ಆಗುವುದಿಲ್ಲ ಎಂದು ಅದನ್ನು ಬಿಟ್ಟುಬಿಡುವುದಿಲ್ಲ. ಸಾಧಿಸುವ ಛಲ ಇವರಲ್ಲಿ ಹೆಚ್ಚು. ಹಾಗೇ ತಾಳ್ಮೆ ಕೂಡ ಇವರಲ್ಲಿ ಸ್ವಲ್ಪ ಕಡಿಮೆ. ಇನ್ನೊಬ್ಬರಿಗೆ ತಮ್ಮ ಮಾತಿನ ಮೂಲಕವೇ ಬಿಸಿ ಮುಟ್ಟಿಸುತ್ತಾರೆ.

ಹಣಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಇವರು ಹೆಚ್ಚು ಉತ್ಸಾಹಿಗಳಾಗಿರುತ್ತಾರೆ. ಇನ್ನು ಸಂಗಾತಿಯ ವಿಷಯಕ್ಕೆ ಬಂದರೆ ಇವರು ನೇರ ನುಡಿಯವರು. ಹಾಗೇ ಸಂಗಾತಿಯ ಅಭಿಪ್ರಾಯಕ್ಕೆ ಮನ್ನಣೆ ನೀಡುವವರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...