alex Certify ಭ್ರಷ್ಟಾಚಾರದ ವಿರುದ್ಧ ಕೋರ್ಟ್ ಕಿಡಿ; ಇಂಥವರಿಂದಲೇ ದೇಶ ನಾಶ ಎಂದು ಅಭಿಪ್ರಾಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭ್ರಷ್ಟಾಚಾರದ ವಿರುದ್ಧ ಕೋರ್ಟ್ ಕಿಡಿ; ಇಂಥವರಿಂದಲೇ ದೇಶ ನಾಶ ಎಂದು ಅಭಿಪ್ರಾಯ….!

ನವದೆಹಲಿ: ಎಲ್ಗಾರ್ ಪರಿಷದ್-ಮಾವೊವಾದಿ ಸಂಪರ್ಕ ಪ್ರಕರಣ ಸಂಬಂಧ ಇಂದು ನ್ಯಾಯಮೂರ್ತಿಗಳಾದ ಕೆ.ಎಂ.‌ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಪೀಠ ವಿಚಾರಣೆ ನಡೆಸಿತು. ತಮ್ಮನ್ನು ನ್ಯಾಯಾಂಗ ಬಂಧನದಲ್ಲಿರಿಸುವ ಬದಲು ಗೃಹ ಬಂಧನದಲ್ಲಿರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಹಾಖಾ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ಮಾತು ಹೇಳಿದೆ.

ಈ ವೇಳೆ ಎನ್‌ಐಎ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಅವರು ನವ್ಹಾಖಾ ಅವರು ದೇಶ ನಾಶಪಡಿಸುವ ಯತ್ನ ಮಾಡಬಹುದು. ಅವರು ಸದ್ಯ ವಾರ್ ನಲ್ಲಿ ಒರುವ ವ್ಯಕ್ತಿ ಎಂದರು. ಈ ವೇಳೆ ಕೋರ್ಟ್ ಈ ದೇಶವನ್ನು ಯಾರು ನಾಶ ಮಾಡುವವರು ಎಂದು ತಿಳಿಯಲು ಬಯಸುವಿರಾ, ಭ್ರಷ್ಟರಾಗಿರುವ ಜನರು ಎಂದು ಹೇಳಿದೆ. ಜೊತೆಗೆ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು ಎಂದು ಪ್ರಶ್ನೆ ಮಾಡಿದೆ.

ಇದರ ಜೊತೆಗೆ ಚುನಾಯಿತ ಪ್ರತಿನಿಧಿಗಳನ್ನು ಖರೀದಿ ಮಾಡಲು ಕೋಟ್ಯಾಂತರ ರೂಪಾಯಿ ಸುರೀತ ಇದ್ದಾರಂತೆ. ಇಂಥಹದರ ಬಗ್ಗೆ ಮಾತನಾಡುವ ಅನೇಕ ವಿಡಿಯೊವನ್ನು ನೋಡಿದ್ದೇವೆ. ಇಂಥವರನ್ನು ತಡೆಯದಿದ್ದರೆ ದೇಶ ಏನಾದೀತು. ಅವರನ್ನು ತಡೆಯದೇ ಹೋದರೆ ಅವರು ಮುಂದೆಯೂ ಹಾಗೆ ಆರಾಮಾಗಿ ತಮ್ಮ ಕೆಲಸ ತಾವು ಮಾಡ್ತಾರೆ ಎಂದು ಆತಂಕ ವ್ಯಕ್ತಪಡಿಸಿತು ಕೋರ್ಟ್. ಈ ವೇಳೆ ಭ್ರಷ್ಟರನ್ನು ಸಮರ್ಥಿಸುತ್ತಿಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳಿದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...