alex Certify ಭೋರ್ಗರೆಯುತ್ತಿರುವ ಜಲಪಾತದ ಬಂಡೆ ಬಳಿ ಸಿಲುಕಿಕೊಂಡ ತಾಯಿ – ಮಗು: ರಕ್ಷಣಾ ಕಾರ್ಯಾಚರಣೆಯ ರೋಚಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೋರ್ಗರೆಯುತ್ತಿರುವ ಜಲಪಾತದ ಬಂಡೆ ಬಳಿ ಸಿಲುಕಿಕೊಂಡ ತಾಯಿ – ಮಗು: ರಕ್ಷಣಾ ಕಾರ್ಯಾಚರಣೆಯ ರೋಚಕ ವಿಡಿಯೋ ವೈರಲ್

ತಮಿಳುನಾಡಿನಲ್ಲಿ ಭೋರ್ಗರೆಯುತ್ತಿರುವ ಜಲಪಾತದಿಂದ ತಾಯಿ ಮತ್ತು ಮಗುವನ್ನು ರಕ್ಷಿಸಿರುವ ಧೈರ್ಯಶಾಲಿ ಕಾರ್ಯಾಚರಣೆಗೆ ಸಿಎಂ ಸ್ಟಾಲಿನ್ ಸೇರಿದಂತೆ ಹಲವಾರು ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ತಾಯಿ ಹಾಗೂ ಮಗು ಭೋರ್ಗರೆಯುತ್ತಿರುವ ಅನೈವಾರಿ ಮುಟ್ಟಲ್ ಜಲಪಾತದ ನಡುವೆ ಬಂಡೆಯ ಬಳಿ ಸಿಲುಕಿಕೊಂಡಿದ್ದಾರೆ. ಭಾರಿ ಮಳೆಯಿಂದ ಹಠಾತ್ ಪ್ರವಾಹವುಂಟಾಗಿದ್ದರಿಂದ ಇವರಿಬ್ಬರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

ನವಜಾತ ಶಿಶುಗಳ ಪೋಷಕರಿಗೆ ಭರ್ಜರಿ ಗುಡ್‌ ನ್ಯೂಸ್: ಅನುಕೂಲಕರವಾಗಲಿದೆ ʼಆರೋಗ್ಯʼ ವಿಮೆಯಲ್ಲಾಗ್ತಿರುವ ಈ ಬದಲಾವಣೆ

ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು, ಹಗ್ಗವನ್ನು ಬಳಸಿ ಮಹಿಳೆ ಮತ್ತು ಆಕೆಯ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರಿಗಳು ಎಚ್ಚರಿಕೆಯಿಂದ ಮಗುವನ್ನು ಮೇಲಕ್ಕೆತ್ತಿ ನಂತರ ಹಗ್ಗದ ಸಹಾಯದಿಂದ ತಾಯಿಯನ್ನು ಸುರಕ್ಷಿತವಾಗಿ ಹತ್ತಲು ಸಹಾಯ ಮಾಡಿದ್ದಾರೆ. ಜಲಪಾತದ ಇನ್ನೊಂದು ಬದಿಯಲ್ಲಿ ನಿಂತಿದ್ದ ಜನರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.

ತಾಯಿ ಹಾಗೂ ಮಗುವನ್ನು ರಕ್ಷಿಸಿದ್ದಕ್ಕೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಶ್ಲಾಘನೆ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.

ಪಡಿತರ ಚೀಟಿದಾರರಿಗೆ ರಾಜ್ಯೋತ್ಸವ, ದೀಪಾವಳಿ ಗಿಫ್ಟ್: ಮನೆ ಬಾಗಿಲಿಗೆ ರೇಷನ್…?

ತಾಯಿ ಮತ್ತು ಮಗು ಸುರಕ್ಷಿತವಾಗಿ ಸ್ಥಳಾಂತರಗೊಂಡಾಗ, ರಕ್ಷಣೆಯಲ್ಲಿ ತೊಡಗಿದ್ದ ಇಬ್ಬರು ಅಧಿಕಾರಿಗಳು ಸಮತೋಲನವನ್ನು ಕಳೆದುಕೊಂಡು ನೀರಿನಲ್ಲಿ ಬಿದ್ದಿದ್ದಾರೆ. ವರದಿಗಳ ಪ್ರಕಾರ, ಅವರು ಸುರಕ್ಷಿತವಾಗಿ ನದಿಯ ಇನ್ನೊಂದು ಬದಿಗೆ ಈಜಿ ದಡ ಸೇರಿದ್ದಾರೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸೇಲಂ ಜಿಲ್ಲಾ ಅರಣ್ಯಾಧಿಕಾರಿ ಕೆ. ಗೌತಮ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...