alex Certify ಭಾರಿ ಸಾಮಗ್ರಿಗಳನ್ನು ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ಹಾಗಾದ್ರೆ ವೈರಲ್​ ಆಗಿರೋ ಈ ವಿಡಿಯೋ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರಿ ಸಾಮಗ್ರಿಗಳನ್ನು ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ಹಾಗಾದ್ರೆ ವೈರಲ್​ ಆಗಿರೋ ಈ ವಿಡಿಯೋ ನೋಡಿ

ಪ್ರವಾಸಗಳಿಗೆ ಹೋಗುವಾಗ ಲಗೇಜ್​ಗಳನ್ನು ಪ್ಯಾಕ್​ ಮಾಡಿಕೊಳ್ಳುವುದೇ ದೊಡ್ಡ ತಲೆನೋವು. ಅದರಲ್ಲಿಯೂ ಬಹಳ ದಿನಗಳ ಪ್ರವಾಸವಾಗಿದ್ದರೆ ಬ್ಯಾಗ್​ಗಳ ಸಂಖ್ಯೆ ಮಿತಿಮೀರುತ್ತವೆ. ಇದು ದೊಡ್ಡ ತಲೆನೋವು ತರುವುದು ವಿಮಾನಗಳಲ್ಲಿ ಪ್ರಯಾಣ ಮಾಡುವಾಗ. ಸೀಮಿತ ತೂಕದಷ್ಟೇ ಲಗೇಜ್​ಗಳನ್ನು ಅದರಲ್ಲಿ ಕೊಂಡೊಯ್ಯಬಹುದಾದ ಕಾರಣದಿಂದ ಎಷ್ಟೋ ಮಂದಿಗೆ ಪ್ಯಾಕ್​ ಹೇಗೆ ಮಾಡಿಕೊಳ್ಳಬೇಕು ಎನ್ನುವುದೇ ತಲೆಬಿಸಿಯಾಗುತ್ತದೆ.

ಆದರೆ ವೈರಲ್​ ಆಗಿರುವ ಈ ನೋಡಿದ ಮೇಲೆ ಲಗೇಜ್​ಗಳನ್ನು ಪ್ಯಾಕ್​ ಮಾಡುವುದು ಎಷ್ಟು ಸುಲಭ ಎಂದು ತಿಳಿದುಕೊಳ್ಳಬಹುದು. ಅಗತ್ಯ ಇರುವ ಎಲ್ಲಾ ಸಾಮಗ್ರಿಗಳು ಮತ್ತು ಕೆಲವು ಹೆಚ್ಚುವರಿ ಸಾಮಗ್ರಿಗಳನ್ನು ಹೊಂದಿಸುವುದು ಎಷ್ಟು ಸುಲಭ ಎಂದು ಈ ಮಹಿಳೆ ತೋರಿಸಿಕೊಟ್ಟಿದ್ದಾಳೆ.

ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಲು ಬಯಸಿದರೆ, ಅದಕ್ಕಿಂತಲೂ ಮುಖ್ಯವಾಗಿ ವಿಮಾನಯಾನ ಸಂಸ್ಥೆಗಳು ಸೂಚಿಸಿದ ತೂಕದ ಮಿತಿಯಲ್ಲಿ ಸಂಪೂರ್ಣ ಲಗೇಜ್ ನಿರ್ವಹಿಸಲು ಬಯಸಿದರೆ ಅಂಥವರಿಗೆ ಈ ವಿಡಿಯೋ ಬಹಳ ಸಹಕಾರಿಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆ ಕಪ್ಪು ಚೀಲದಲ್ಲಿ ಬೃಹತ್ ಹೊದಿಕೆಯನ್ನು ಪ್ಯಾಕ್ ಮಾಡುವುದನ್ನು ನೋಡಬಹುದಾಗಿದೆ. ಮಹಿಳೆ ಹೊದಿಕೆಯನ್ನು ಚೀಲದೊಳಗೆ ತುಂಬಿ ಅದರಲ್ಲಿ ವ್ಯಾಕ್ಯೂಮ್ ಕ್ಲೀನರ್ ನಳಿಕೆಯನ್ನು ಹಾಕುತ್ತಾಳೆ. ಕೆಲವೇ ಸೆಕೆಂಡುಗಳಲ್ಲಿ, ಹೊದಿಕೆಯು ಮ್ಯಾಜಿಕ್​ನಂತೆ ಅರ್ಧದಷ್ಟು ಗಾತ್ರಕ್ಕೆ ಕುಗ್ಗುತ್ತದೆ! ಹೀಗೆ ಮಾಡುವುದರಿಂದ ಎಷ್ಟು ಬೇಕೋ ಅಷ್ಟು ಲಗೇಜ್​ಗಳನ್ನು ಇದರಲ್ಲಿ ಪ್ಯಾಕ್​ ಮಾಡಬಹುದು ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...