ಪ್ರವಾಸಗಳಿಗೆ ಹೋಗುವಾಗ ಲಗೇಜ್ಗಳನ್ನು ಪ್ಯಾಕ್ ಮಾಡಿಕೊಳ್ಳುವುದೇ ದೊಡ್ಡ ತಲೆನೋವು. ಅದರಲ್ಲಿಯೂ ಬಹಳ ದಿನಗಳ ಪ್ರವಾಸವಾಗಿದ್ದರೆ ಬ್ಯಾಗ್ಗಳ ಸಂಖ್ಯೆ ಮಿತಿಮೀರುತ್ತವೆ. ಇದು ದೊಡ್ಡ ತಲೆನೋವು ತರುವುದು ವಿಮಾನಗಳಲ್ಲಿ ಪ್ರಯಾಣ ಮಾಡುವಾಗ. ಸೀಮಿತ ತೂಕದಷ್ಟೇ ಲಗೇಜ್ಗಳನ್ನು ಅದರಲ್ಲಿ ಕೊಂಡೊಯ್ಯಬಹುದಾದ ಕಾರಣದಿಂದ ಎಷ್ಟೋ ಮಂದಿಗೆ ಪ್ಯಾಕ್ ಹೇಗೆ ಮಾಡಿಕೊಳ್ಳಬೇಕು ಎನ್ನುವುದೇ ತಲೆಬಿಸಿಯಾಗುತ್ತದೆ.
ಆದರೆ ವೈರಲ್ ಆಗಿರುವ ಈ ನೋಡಿದ ಮೇಲೆ ಲಗೇಜ್ಗಳನ್ನು ಪ್ಯಾಕ್ ಮಾಡುವುದು ಎಷ್ಟು ಸುಲಭ ಎಂದು ತಿಳಿದುಕೊಳ್ಳಬಹುದು. ಅಗತ್ಯ ಇರುವ ಎಲ್ಲಾ ಸಾಮಗ್ರಿಗಳು ಮತ್ತು ಕೆಲವು ಹೆಚ್ಚುವರಿ ಸಾಮಗ್ರಿಗಳನ್ನು ಹೊಂದಿಸುವುದು ಎಷ್ಟು ಸುಲಭ ಎಂದು ಈ ಮಹಿಳೆ ತೋರಿಸಿಕೊಟ್ಟಿದ್ದಾಳೆ.
ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಲು ಬಯಸಿದರೆ, ಅದಕ್ಕಿಂತಲೂ ಮುಖ್ಯವಾಗಿ ವಿಮಾನಯಾನ ಸಂಸ್ಥೆಗಳು ಸೂಚಿಸಿದ ತೂಕದ ಮಿತಿಯಲ್ಲಿ ಸಂಪೂರ್ಣ ಲಗೇಜ್ ನಿರ್ವಹಿಸಲು ಬಯಸಿದರೆ ಅಂಥವರಿಗೆ ಈ ವಿಡಿಯೋ ಬಹಳ ಸಹಕಾರಿಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಕಪ್ಪು ಚೀಲದಲ್ಲಿ ಬೃಹತ್ ಹೊದಿಕೆಯನ್ನು ಪ್ಯಾಕ್ ಮಾಡುವುದನ್ನು ನೋಡಬಹುದಾಗಿದೆ. ಮಹಿಳೆ ಹೊದಿಕೆಯನ್ನು ಚೀಲದೊಳಗೆ ತುಂಬಿ ಅದರಲ್ಲಿ ವ್ಯಾಕ್ಯೂಮ್ ಕ್ಲೀನರ್ ನಳಿಕೆಯನ್ನು ಹಾಕುತ್ತಾಳೆ. ಕೆಲವೇ ಸೆಕೆಂಡುಗಳಲ್ಲಿ, ಹೊದಿಕೆಯು ಮ್ಯಾಜಿಕ್ನಂತೆ ಅರ್ಧದಷ್ಟು ಗಾತ್ರಕ್ಕೆ ಕುಗ್ಗುತ್ತದೆ! ಹೀಗೆ ಮಾಡುವುದರಿಂದ ಎಷ್ಟು ಬೇಕೋ ಅಷ್ಟು ಲಗೇಜ್ಗಳನ್ನು ಇದರಲ್ಲಿ ಪ್ಯಾಕ್ ಮಾಡಬಹುದು ಎನ್ನಲಾಗಿದೆ.