alex Certify ಭಾರತೀಯ ಆಹಾರ ಸವಿದ ವಿದೇಶಿ ಬಾಲಕಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಆಹಾರ ಸವಿದ ವಿದೇಶಿ ಬಾಲಕಿ: ವಿಡಿಯೋ ವೈರಲ್

ನೀವು ವಿದೇಶದಲ್ಲಿ ನೆಲೆಸಿರುವ ಭಾರತೀಯರಾಗಿದ್ದರೆ, ಭಾರತದ ಆಹಾರ ಶೈಲಿಯು ಪ್ರಪಂಚದ ಬಹುತೇಕ ಕಡೆಗಳಲ್ಲಿ ಜನಪ್ರಿಯವಾಗಿದೆ ಎಂಬುದು ನಿಮಗೆ ತಿಳಿಯುತ್ತದೆ. ಆರೊಮ್ಯಾಟಿಕ್ ಮಸಾಲೆಗಳು ಮತ್ತು ಅವುಗಳ ಸುವಾಸನೆಗೆ ಇಷ್ಟಪಡದವರು ಯಾರು ಹೇಳಿ..?

ವಿದೇಶಿಯರು ಹೆಚ್ಚು ಇಷ್ಟಪಡುವ ಭಾರತೀಯ ಆಹಾರಗಳಲ್ಲಿ ಚಿಕನ್ ಟಿಕ್ಕಾ ಮಸಾಲಾ ಆಗಿದೆ. ಇದೀಗ, ಪುಟ್ಟ ಬಾಲಕಿಯೊಬ್ಬಳು ಆಸ್ಟ್ರೇಲಿಯಾದ ಭಾರತೀಯ ರೆಸ್ಟೋರೆಂಟ್‌ನಲ್ಲಿ ಮೊದಲ ಬಾರಿಗೆ ಭಾರತೀಯ ಆಹಾರವನ್ನು ಪ್ರಯತ್ನಿಸಿದ್ದಾಳೆ. ಅನ್ನದೊಂದಿಗೆ ಕಡಾಯಿ ಚಿಕನ್ ಅನ್ನು ಸೇವಿಸಿದ್ದಾಳೆ. ಬಳಿಕ ಮಾವಿನ ಕುಲ್ಫಿಯನ್ನು ಸಹ ಸವಿದಿದ್ದಾಳೆ. ಈ ವಿಡಿಯೋವನ್ನು ರಾಚೆಲ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಬಾಲಕಿಯು ಭಾರತೀಯ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದಾಳೆ. ಅನ್ನದ ಜೊತೆಗೆ ಕಡಾಯಿ ಚಿಕನ್ ಸವಿದ ಅವಳು ನಂತರ ಮಾವಿನ ಹಣ್ಣಿನ ಐಸ್ ಕ್ರೀಂ ಸವಿದಿದ್ದಾಳೆ. ಸಾಮಾನ್ಯವಾಗಿ ಊಟದ ಬಳಿಕ ಮೌತ್ ಫ್ರೆಶ್ನರ್ ಫೆನ್ನೆಲ್ ಸೀಡ್ಸ್ ನೀಡಲಾಗುತ್ತದೆ. ಆದರೆ, ಇದನ್ನು ಸವಿದ ಬಳಿಕ ಆಕೆ ನೀಡಿರೋ ಪ್ರತಿಕ್ರಿಯೆ ಮಾತ್ರ ನೆಟ್ಟಿಗರನ್ನು ನಗಿಸಿದೆ. ಮೊದಲ ಬಾರಿಗೆ ಭಾರತೀಯ ಆಹಾರವನ್ನು ಪ್ರಯತ್ನಿಸುವುದು ಒಂದು ಅನುಭವವಾಗಿದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಸದ್ಯ, ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಬಾಲಕಿ ಭಾರತೀಯ ಆಹಾರವನ್ನು ಇಷ್ಟಪಟ್ಟಿದ್ದಾಳೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಒಮ್ಮೆ ನೀವು ಭಾರತೀಯ ಆಹಾರದ ರುಚಿಯನ್ನು ನೋಡಿದ್ರೆ ಮತ್ತೆ ಹಿಂತಿರುಗಿ ಹೋಗುವುದಿಲ್ಲ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

https://youtu.be/gnTb54s_MgA

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...