alex Certify ಭಾರತದ ರೈಲುಗಳಲ್ಲಿ ಕೆಂಪು ಮತ್ತು ನೀಲಿ ಎರಡು ಬಣ್ಣಗಳ ಬೋಗಿಗಳೇಕೆ….? ಇವೆರಡಕ್ಕೂ ಇದೆ ಬಹಳ ವ್ಯತ್ಯಾಸ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ರೈಲುಗಳಲ್ಲಿ ಕೆಂಪು ಮತ್ತು ನೀಲಿ ಎರಡು ಬಣ್ಣಗಳ ಬೋಗಿಗಳೇಕೆ….? ಇವೆರಡಕ್ಕೂ ಇದೆ ಬಹಳ ವ್ಯತ್ಯಾಸ…..!

ರೈಲುಗಳನ್ನು ಭಾರತದ ಜೀವನಾಡಿ ಎಂದು ಪರಿಗಣಿಸಲಾಗಿದೆ. ಯಾಕಂದ್ರೆ ದೇಶದ ಬಹುತೇಕ ಪ್ರದೇಶಗಳಲ್ಲಿ ರೈಲು ಪ್ರಮುಖ ಸಂಚಾರಿ ಸಾಧನವಾಗಿದೆ. ರೈಲು ಪ್ರಯಾಣದ ಸಂದರ್ಭದಲ್ಲಿ ಎರಡು ವಿಭಿನ್ನ ಬಗೆಯ ಕೋಚ್‌ಗಳನ್ನು ನೀವು ಗಮನಿಸಿರಬಹುದು. ರೈಲು ನಿಲ್ದಾಣದಲ್ಲಿ ಕೆಂಪು ಮತ್ತು ನೀಲಿ ಬಣ್ಣದ ಬೋಗಿಗಳಿರುತ್ತವೆ. ಬೋಗಿಗಳ ಬಣ್ಣದಲ್ಲಿ ಏಕೆ ವ್ಯತ್ಯಾಸವಿದೆ ಅನ್ನೋದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಈ ಎರಡು ಕೋಚ್‌ಗಳಲ್ಲಿ ಯಾವುದು ಹೆಚ್ಚು ಸುರಕ್ಷಿತ? ಇವುಗಳ ಬಣ್ಣವೇಕೆ ವಿಭಿನ್ನ ಅನ್ನೋದನ್ನು ನೋಡೋಣ.

ನೀಲಿ ಬಣ್ಣದ ವಿಭಾಗವನ್ನು ಇಂಟೆಗ್ರಲ್ ಕೋಚ್ (ICF) ಎಂದು ಕರೆಯಲಾಗುತ್ತದೆ. ಇದು ಸಾಂಪ್ರದಾಯಿಕ ರೈಲ್ವೇ ಬೋಗಿಯಾಗಿದೆ. ಇಂಟಿಗ್ರಲ್ ಕೋಚ್‌ಗಳ ತಯಾರಿಕೆಯು 1952ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಪ್ರಾರಂಭವಾಯಿತು.

ಕೆಂಪು ಬಣ್ಣದ ಬೋಗಿಗಳನ್ನು LHB ಕೋಚ್ ಎಂದು ಕರೆಯಲಾಗುತ್ತದೆ. ಇವುಗಳ ತಯಾರಿಕೆ 2000ನೇ ಇಸ್ವಿಯಲ್ಲಿ ಪ್ರಾರಂಭವಾಯಿತು. ಇದನ್ನು ಜರ್ಮನ್ ಕಂಪನಿ ಲಿಂಕ್-ಹಾಫ್ಮನ್-ಬುಶ್ ವಿನ್ಯಾಸಗೊಳಿಸಿದ್ದಾರೆ. ಅಪಘಾತದ ಸಮಯದಲ್ಲಿ ಐಸಿಎಫ್ ಕೋಚ್‌ಗಳು ಅಂದರೆ ಕೆಂಪು ಬಣ್ಣದ ಬೋಗಿಗಳು ಒಂದರ ಮೇಲೊಂದು ಏರುತ್ತವೆ. ಡ್ಯುಯಲ್ ಬಫರ್ ಸಿಸ್ಟಮ್‌ನಿಂದಾಗಿ ಇದು ಸಂಭವಿಸುತ್ತದೆ.

ಆದರೆ ನೀಲಿ ಬಣ್ಣದ ಕೋಚ್‌ಗಳು ಸೆಂಟರ್ ಬಫರ್ ವ್ಯವಸ್ಥೆಯನ್ನು ಹೊಂದಿರುವುದರಿಂದ ಒಂದರ ಮೇಲೊಂದು ಏರುವುದಿಲ್ಲ. ಇವುಗಳಲ್ಲಿ ಪ್ರಾಣಹಾನಿ, ಆಸ್ತಿ-ಪಾಸ್ತಿ ನಷ್ಟ ಕಡಿಮೆ. ಕೆಂಪು ಬಣ್ಣದ ಬೋಗಿಗಳು ಉಕ್ಕಿನಿಂದ ಮಾಡಲ್ಪಟ್ಟಿದೆ. ಅದರ ತೂಕ ಕೂಡ ಹೆಚ್ಚು. ಆದರೆ ನೀಲಿ ಬಣ್ಣದ ಬೋಗಿಗಳನ್ನು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾಗಿದೆ. ಅವು ತೂಕದಲ್ಲಿ ಹಗುರವಾಗಿರುತ್ತವೆ. ಕೆಂಪು ಬೋಗಿಗಿಂತ ತೂಕ ಸುಮಾರು ಶೇ.10ರಷ್ಟು ಕಡಿಮೆ ಇರುತ್ತದೆ.

ವಿದ್ಯುತ್ ಉತ್ಪಾದಿಸಲು ಕೆಂಪು ಬೋಗಿಯಲ್ಲಿ ಡೈನಮೋವನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ರೈಲಿನ ವೇಗ ಕಡಿಮೆಯಾಗುತ್ತದೆ. ಈ ಕೋಚ್‌ಗಳು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸಬಲ್ಲವು. ಆದಾಗ್ಯೂ ಇದರ ಗರಿಷ್ಠ ವೇಗವನ್ನು ಗಂಟೆಗೆ 120 ಕಿ.ಮೀಗೆ ಮಿತಿಗೊಳಿಸಲಾಗಿದೆ. ಆದರೆ ನೀಲಿ ಬೋಗಿಗಳು ಇನ್ನೂ ವೇಗವಾಗಿ ಚಲಿಸಬಹುದು. ಗಂಟೆಗೆ 200 ಕಿಮೀ ವೇಗದಲ್ಲಿ ಈ ರೈಲು ಓಡಬಹುದು. ಆದರೂ ವೇಗದ ಮಿತಿಯನ್ನು ಗಂಟೆಗೆ 160 ಕಿಮೀಗೆ ಮಿತಿಗೊಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...