alex Certify ಭಾರತದಲ್ಲೇ ಅಗ್ಗದ 160cc ಬೈಕ್ ಇದು….! ಸಖತ್ತಾಗಿದೆ ಮೈಲೇಜ್‌ ಹಾಗೂ ಫೀಚರ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲೇ ಅಗ್ಗದ 160cc ಬೈಕ್ ಇದು….! ಸಖತ್ತಾಗಿದೆ ಮೈಲೇಜ್‌ ಹಾಗೂ ಫೀಚರ್ಸ್‌

Honda Unicorn Price, Images, Mileage & Reviews

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವುದು 100 ಸಿಸಿ ಬೈಕ್‌ಗಳು. ಇನ್ನೂ ಸ್ವಲ್ಪ ಸ್ಟೈಲಿಶ್ ಮತ್ತು ಹೆಚ್ಚು ಶಕ್ತಿಶಾಲಿ ಬೈಕ್‌ಗಳ ಹುಡುಕಾಟದಲ್ಲಿರುವವರು 150cc ಅಥವಾ 160cc ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ವಿಶೇಷವೆಂದರೆ 160CC ಬೈಕ್‌ಗಳಿಗಾಗಿ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ದೇಶದ ಅತ್ಯಂತ ಅಗ್ಗದ 160CC ಬೈಕ್‌ನ ವಿವರ ಇಲ್ಲಿದೆ.

ಹೋಂಡಾ ಯುನಿಕಾರ್ನ್ 160 ಸಿಸಿ ಬೈಕ್‌. ಇದರ ಬೆಲೆ 1,05,037 ರೂಪಾಯಿ. ಈ ಬೈಕ್ ಸ್ಟೈಲಿಶ್ ವಿನ್ಯಾಸ ಮತ್ತು ಅತ್ಯುತ್ತಮ ಫೀಚರ್‌ಗಳನ್ನು ಹೊಂದಿದೆ. ಬಂದಿದ್ದು ಇದರ ಮೈಲೇಜ್ ಕೂಡ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಹೋಂಡಾ ಯುನಿಕಾರ್ನ್‌ ಬೈಕ್‌ನ ಮುಂಭಾಗದಲ್ಲಿ ಪ್ರೀಮಿಯಂ ಫ್ರಂಟ್ ಕೌಲ್ ಇದೆ. ಇದು ಇಂಧನ ಟ್ಯಾಂಕ್‌ನಲ್ಲಿಯೇ 3D ಹೋಂಡಾ ಲೋಗೋವನ್ನು ಪಡೆಯುತ್ತದೆ ಮತ್ತು ಹಿಂಭಾಗದಲ್ಲಿ ಸಿಗ್ನೇಚರ್ ಟೈಲ್‌ಲ್ಯಾಪ್‌ಗಳನ್ನು ಹೊಂದಿದೆ.

ಇದು ಸ್ಟೈಲಿಶ್ ಇನ್‌ಸ್ಟ್ರುಮೆಂಟ್ ಪ್ಯಾನೆಲ್ ಪ್ರೀಮಿಯಂ, ಕ್ರೋಮ್ ಸೈಡ್ ಕವರ್‌ಗಳು, ಎಂಜಿನ್ ಸ್ಟಾಪ್ ಸ್ವಿಚ್, ಮೊನೊ ಶಾಕ್ ಸಸ್ಪೆನ್ಷನ್, ಉದ್ದ ಮತ್ತು ಆರಾಮದಾಯಕ ಸೀಟ್, ಲಾಂಗ್ ವೀಲ್‌ಬೇಸ್ ಮತ್ತು ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಈ ಬೈಕಿನ ವಿಶೇಷತೆ. ಹೋಂಡಾ ಯೂನಿಕಾರ್ನ್ 162.7cc, ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಅನ್ನು ಪಡೆಯುತ್ತದೆ. ಇದರೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಲಭ್ಯವಿದೆ.

ಇದು ಸರಳವಾದ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಮೊನೊಶಾಕ್ ಹ್ಯಾಂಡ್ಲಿಂಗ್ ಹೊಂದಿದೆ. 240mm ಫ್ರಂಟ್ ಡಿಸ್ಕ್ ಮತ್ತು 130mm ಹಿಂಭಾಗದ ಡ್ರಮ್ ಬ್ರೇಕ್ ಸೆಟಪ್‌ ಇದರ ಮತ್ತೊಂದು ವಿಶೇಷತೆ. ಬೈಕ್‌ನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಕೂಡ ನೀಡಲಾಗಿದೆ. ಇದರಲ್ಲಿ 60 ಕಿಮೀ ಮೈಲೇಜ್‌ ಕೂಡ ಪಡೆಯಬಹುದು.  ಹೋಂಡಾ ಯುನಿಕಾರ್ನ್‌ ಬೈಕ್‌, ಬಜಾಜ್ ಪಲ್ಸರ್ 150 ಮತ್ತು TVS ಅಪಾಚೆ RTR 160 2V ಯೊಂದಿಗೆ ಸ್ಪರ್ಧಿಸುತ್ತದೆ. ಅದೇ ಬೆಲೆಯಲ್ಲಿ ಬಜಾಜ್ ಅವೆಂಜರ್ 160 ಸ್ಟ್ರೀಟ್, ಎಪ್ರಿಲಿಯಾ SR 125 ಮತ್ತು ಸದ್ಯದಲ್ಲೇ ಬಿಡುಗಡೆಯಾಗಲಿರುವ ಬಜಾಜ್ ಪಲ್ಸರ್ N150 ಅನ್ನು ಸಹ ಖರೀದಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...