alex Certify ಭಾರತದಲ್ಲಿ ಸಂಪೂರ್ಣ ರೈಲು ಬುಕ್ ಮಾಡಲು ಎಷ್ಟು ವೆಚ್ಚವಾಗುತ್ತದೆ ? ಇಲ್ಲಿದೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಸಂಪೂರ್ಣ ರೈಲು ಬುಕ್ ಮಾಡಲು ಎಷ್ಟು ವೆಚ್ಚವಾಗುತ್ತದೆ ? ಇಲ್ಲಿದೆ ಸಂಪೂರ್ಣ ವಿವರ

ರೈಲು ಭಾರತೀಯ ಪ್ರಯಾಣಿಕರ ಜೀವನಾಡಿ. ಅನೇಕರು ಮದುವೆ ಮೆರವಣಿಗೆಯನ್ನು ರೈಲಿನಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಕರೆದೊಯ್ಯುತ್ತಾರೆ. ವರನ ಕುಟುಂಬವು ಮದುವೆಯ ಮೆರವಣಿಗೆಯನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆಗೆದುಕೊಂಡು ಹೋಗಬೇಕಾದರೆ ಕೆಲವರು ಸಂಪೂರ್ಣ ರೈಲನ್ನು ಬುಕ್ ಮಾಡುತ್ತಾರೆ. ಇಡೀ ರೈಲನ್ನು ಅಲಂಕರಿಸುತ್ತಾರೆ ಮತ್ತು ಮದುವೆಯ ಮೆರವಣಿಗೆಯೊಂದಿಗೆ ಹೊರಡುತ್ತಾರೆ.

ಇಡೀ ಕೋಚ್‌ ಅಥವಾ ಸಂಪೂರ್ಣ ರೈಲನ್ನು ಬುಕ್ಕಿಂಗ್‌ ಮಾಡುವುದು ಹೇಗೆ ? ಇದಕ್ಕಾಗಿ ಎಷ್ಟು ಹಣ ಪಾವತಿಸಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಚಾರ್ಟರ್ ರೈಲು ಅಥವಾ ಕೋಚ್‌ನ ಆನ್‌ಲೈನ್ ಬುಕಿಂಗ್ ಅನ್ನು IRCTC FTR ವೆಬ್‌ಸೈಟ್‌ನಲ್ಲಿ ಮಾಡಬಹುದು. ಎಲ್ಲಾ ರೈಲು ನಿಲ್ದಾಣಗಳಿಂದ ಚಾರ್ಟರ್ ರೈಲುಗಳ ಪ್ರಯಾಣವನ್ನು  ಅನುಮತಿಸಲಾಗಿದೆ. ಆದರೆ ರೈಲಿನ ನಿಲುಗಡೆ 10 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಇರುವ ನಿಲ್ದಾಣಗಳಲ್ಲಿ ಮಾತ್ರ ಚಾರ್ಟರ್ಡ್ ಕೋಚ್‌ಗಳನ್ನು ಲಗತ್ತಿಸಬಹುದು ಅಥವಾ ಬೇರ್ಪಡಿಸಬಹುದು. ಆದ್ದರಿಂದ ಎಲ್ಲಾ ರೈಲುಗಳಲ್ಲಿ ಬೋಗಿಗಳನ್ನು ಅಳವಡಿಸಲಾಗಿಲ್ಲ.

ಬುಕಿಂಗ್ ಸಮಯ

ಎಫ್‌ಟಿಆರ್ ನೋಂದಣಿಯನ್ನು ಗರಿಷ್ಠ 6 ತಿಂಗಳ ಮುಂಚಿತವಾಗಿ ಅಥವಾ ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ 30 ದಿನಗಳ ಮೊದಲು ಮಾಡಬೇಕು.

ಕೋಚ್ ಬುಕಿಂಗ್

ನೀವು ರೈಲಿನಲ್ಲಿ ಬೋಗಿಗಳನ್ನು ಮಾತ್ರ ಕಾಯ್ದಿರಿಸಲು ಬಯಸಿದರೆ, ತಾಂತ್ರಿಕ ಕಾರ್ಯಸಾಧ್ಯತೆಯನ್ನು ಅವಲಂಬಿಸಿ, ರೈಲಿನಲ್ಲಿ ಎಫ್‌ಟಿಆರ್‌ ಮೂಲಕ ಗರಿಷ್ಠ 2 ಕೋಚ್‌ಗಳನ್ನು ಮಾತ್ರ ಬುಕ್ ಮಾಡಬಹುದು.

ಹೆಚ್ಚುವರಿಯಾಗಿ, ನೀವು ಸಂಪೂರ್ಣ ರೈಲನ್ನು ಕಾಯ್ದಿರಿಸಲು ಬಯಸಿದರೆ, 2 SLR ಕೋಚ್‌ಗಳು/ಜನರೇಟರ್ ಕಾರುಗಳನ್ನು ಒಳಗೊಂಡಂತೆ FTR ರೈಲಿನಲ್ಲಿ ಗರಿಷ್ಠ 24 ಕೋಚ್‌ಗಳನ್ನು ಬುಕ್ ಮಾಡಬಹುದು.

ಭದ್ರತಾ ಠೇವಣಿ

ಬುಕಿಂಗ್ ನಿಯಮದ ಪ್ರಕಾರ ಕೋಚ್‌ಗಳ ಪ್ರಯಾಣದ ವಿವರಗಳು, ಸಾಗುವ ಮಾರ್ಗ ಮತ್ತು ಇತರ ವಿವರಗಳನ್ನು ಆನ್‌ಲೈನ್ ಫಾರ್ಮ್‌ನಲ್ಲಿ ನೋಂದಣಿ ಮಾಡಬೇಕು. ಪ್ರತಿ ಕೋಚ್‌ಗೆ 50,000 ರೂಪಾಯಿ ಭದ್ರತಾ ಠೇವಣಿ ಪಾವತಿ ಮಾಡಬೇಕು. 18 ಕೋಚ್‌ಗಳಿಗಿಂತ ಕಡಿಮೆ ಇರುವ ರೈಲನ್ನು ಬುಕ್ ಮಾಡಲು ಸಹ ನೋಂದಣಿ ಮೊತ್ತ 9 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ.

 IRCTC ನಲ್ಲಿ ಸಂಪೂರ್ಣ ರೈಲು ಅಥವಾ ಕೋಚ್ ಅನ್ನು ಬುಕ್ ಮಾಡುವುದು ಹೇಗೆ ?

  1. IRCTC ಯ ಅಧಿಕೃತ FTR ವೆಬ್‌ಸೈಟ್‌ಗೆ ಭೇಟಿ ನೀಡಿ – www.ftr.irctc.co.in.
  2. ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ. ಈಗಾಗ್ಲೇ ಅವೆರಡೂ ಇಲ್ಲದಿದ್ದರೆ ಮೊದಲು ಯೂಸರ್‌ ID ಮತ್ತು ಪಾಸ್‌ವರ್ಡ್ ಅನ್ನು ರಚಿಸಿ.
  3. ಈಗ ಸಂಪೂರ್ಣ ಕೋಚ್ ಅನ್ನು ಕಾಯ್ದಿರಿಸಲು ಬಯಸಿದರೆ FTR ಸೇವಾ ಆಯ್ಕೆಯನ್ನು ಆರಿಸಿ.
  4. ಇಲ್ಲಿ ಪಾವತಿ ಮಾಡಲು ನೀವು ವಿನಂತಿಸಿದ ಮಾಹಿತಿಯನ್ನು ಪೂರ್ಣಗೊಳಿಸಬೇಕು.
  5. ಅದರ ನಂತರ ಪಾವತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...