alex Certify ಭಾರತದಲ್ಲಿ ಬಿಡುಗಡೆಯಾಗಿದೆ BMWನ ಅಗ್ಗದ ಕಾರು, ಬೆಲೆ, ಫೀಚರ್‌ಗಳ ವಿವರ ನೋಡಿದ್ರೆ ದಂಗಾಗ್ತಾರೆ ವಾಹನ ಪ್ರಿಯರು! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಬಿಡುಗಡೆಯಾಗಿದೆ BMWನ ಅಗ್ಗದ ಕಾರು, ಬೆಲೆ, ಫೀಚರ್‌ಗಳ ವಿವರ ನೋಡಿದ್ರೆ ದಂಗಾಗ್ತಾರೆ ವಾಹನ ಪ್ರಿಯರು!

ಜರ್ಮನಿಯ ಪ್ರಸಿದ್ಧ ಕಂಪನಿ BMW ಈಗ ಹೊಸ 3 ಸಿರೀಸ್‌ ಗ್ರ್ಯಾನ್ ಲಿಮೋಸಿನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಪೆಟ್ರೋಲ್‌ ಎಂಜಿನ್‌ನ ಆರಂಭಿಕ ಬೆಲೆ 57.90 ಲಕ್ಷ ರೂಪಾಯಿ. ಡೀಸೆಲ್ ಆವೃತ್ತಿಯನ್ನು 59.50 ಲಕ್ಷ ರೂಪಾಯಿಗೆ  ಪರಿಚಯಿಸಲಾಗಿದೆ. ಇವು ಎಕ್ಸ್ ಶೋ ರೂಂ ಬೆಲೆಗಳು. ಚೆನ್ನೈನಲ್ಲಿರುವ BMW ಕಂಪನಿಯ ಘಟಕದಲ್ಲಿ ಇದನ್ನು ತಯಾರಿಸಲಾಗುವುದು. ಈ ಕಾರನ್ನು ಎರಡು ಮಾಡೆಲ್‌ಗಳಲ್ಲಿ ಲಾಂಚ್‌ ಮಾಡಲಾಗಿದೆ – 330Li M ಸ್ಪೋರ್ಟ್ ಮತ್ತು 320Ld M ಸ್ಪೋರ್ಟ್. ಪೆಟ್ರೋಲ್ ಆವೃತ್ತಿಯು 4-ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಇದು 258hp ಪವರ್‌ ಮತ್ತು 400Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೇವಲ 6.2 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಸಾಧಿಸಬಲ್ಲ ವಾಹನ ಇದು. ಡೀಸೆಲ್ ರೂಪಾಂತರವು 4-ಸಿಲಿಂಡರ್ ಎಂಜಿನ್ ಅನ್ನು ಪಡೆಯುತ್ತದೆ ಆದರೆ ಇದು 190 ಎಚ್‌ಪಿ ಪವರ್ ಉತ್ಪಾದಿಸಲಿದೆ. ಟಾರ್ಕ್ ಉತ್ಪಾದನೆಯು ಪೆಟ್ರೋಲ್ ಆವೃತ್ತಿಯಂತೆಯೇ ಇರುತ್ತದೆ. ಎರಡೂ ಎಂಜಿನ್‌ಗಳು ಎಂಟು-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಸ್ವಯಂಚಾಲಿತ ಗೇರ್‌ಬಾಕ್ಸ್ ಅನ್ನು ಪಡೆಯುತ್ತವೆ. ಕಾರಿನಲ್ಲಿ ಎರಡು ಪರದೆಗಳಿವೆ. 14.9-ಇಂಚಿನ ಡಿಸ್‌ಪ್ಲೇ ಮತ್ತು 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಈ ಕಾರಿನಲ್ಲಿದೆ.

ವೈರ್‌ಲೆಸ್ ಚಾರ್ಜಿಂಗ್, Apple CarPlay ಮತ್ತು Android Auto ಸಂಪರ್ಕ, ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳು ಕಾರಿನಲ್ಲಿ ಲಭ್ಯವಿದೆ. ‘ಡಿಜಿಟಲ್ ಕೀ ಪ್ಲಸ್’ ಅನ್ನು BMW ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ. ಇದು ಲೈಟ್‌ ಎಫೆಕ್ಟ್‌ನೊಂದಿಗೆ ಸಿಂಕ್ರೊನೈಸ್ ಮಾಡಲಾದ ಸೊಗಸಾದ ವೆಲ್ಕಮ್‌ ನೋಟ್‌ನೊಂದಿಗೆ ಬಾಗಿಲುಗಳನ್ನು ಸ್ವಯಂಚಾಲಿತವಾಗಿ ಅನ್ಲಾಕ್ ಮಾಡಲು ಸಹಾಯ ಮಾಡುತ್ತದೆ.

ಸುರಕ್ಷತೆಯ ದೃಷ್ಟಿಯಿಂದ ಹೊಸ 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಆಟೋ ಸ್ಟಾರ್ಟ್-ಸ್ಟಾಪ್, ಬ್ರೇಕ್-ಎನರ್ಜಿ ರೀಜನರೇಶನ್, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್, ಆರು ಏರ್‌ಬ್ಯಾಗ್‌ಗಳು, ಅಟೆನ್ಷನ್‌ ಅಸಿಸ್ಟ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ), ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಜೊತೆಗೆ ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬಿಲೈಜರ್ ಮತ್ತು ಕ್ರ್ಯಾಶ್ ಸೆನ್ಸರ್‌ನಂತಹ ಸ್ವಯಂ ಹಿಡಿತದ ಫೀಚರ್‌ಗಳನ್ನು ಈ ಕಾರುಗಳಲ್ಲಿ ಅಳವಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...