alex Certify ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗ್ತಿರೋ SUV ಇದು; ಬೆಲೆ ಕೇವಲ 7.7 ಲಕ್ಷದಿಂದ ಶುರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗ್ತಿರೋ SUV ಇದು; ಬೆಲೆ ಕೇವಲ 7.7 ಲಕ್ಷದಿಂದ ಶುರು..!

ಭಾರತದಲ್ಲಿ SUVಗಳಿಗೆ ಸಾಕಷ್ಟು ಬೇಡಿಕೆಯಿದೆ. ಅಕ್ಟೋಬರ್‌ನಲ್ಲಿ ಟಾಟಾ ನೆಕ್ಸಾನ್‌ SUV ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗಿತ್ತು. ಮತ್ತೊಮ್ಮೆ SUV ವಿಭಾಗದಲ್ಲಿ ಟಾಟಾ ನೆಕ್ಸಾನ್‌ ಮುಂಚೂಣಿಯಲ್ಲಿದೆ. ಟಾಟಾ ಮೋಟಾರ್ಸ್ ಕಳೆದ ತಿಂಗಳು ನೆಕ್ಸಾನ್‌ನ ಒಟ್ಟು 13,767 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಇತ್ತೀಚೆಗೆ ಟಾಟಾ ನೆಕ್ಸಾನ್ ಬೆಲೆ ಕೂಡ ಏರಿಕೆಯಾಗಿದೆ. ನೆಕ್ಸಾನ್‌ ಎಸ್‌ಯುವಿ ಬೆಲೆ ಈಗ 7.70 ಲಕ್ಷದಿಂದ ಆರಂಭವಾಗಿ 14.18 ಲಕ್ಷ ರೂಪಾಯಿವರೆಗೂ ಇದೆ. ಇದರ ಬೆಲೆಯಲ್ಲಿ ಸುಮಾರು 18,000 ರೂಪಾಯಿವರೆಗೂ ಏರಿಕೆ ಮಾಡಲಾಗಿದೆ. ಟಾಟಾ ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಯ ಕಾರುಗಳು ಲಭ್ಯವಿವೆ. 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಟಾಟಾ ನೆಕ್ಸಾನ್ ಡೀಸೆಲ್ ಎಸ್‌ಯುವಿ 21.5 ಕಿಮೀ ಮೈಲೇಜ್ ನೀಡಬಹುದು ಮತ್ತು Tata Nexon ಪೆಟ್ರೋಲ್ ಕಾರು 17.2 ಕಿಮೀ ಮೈಲೇಜ್ ನೀಡುತ್ತದೆ. 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ), ಸನ್‌ರೂಫ್, ರೈನ್-ಸೆನ್ಸಿಂಗ್ ವೈಪರ್‌ಗಳು, ಹಿಂದಿನ ಎಸಿ ವೆಂಟ್‌ಗಳು, ಆಟೋ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳು ಈ ಕಾರಿನಲ್ಲಿವೆ.

ಪ್ರಯಾಣಿಕರ ಸುರಕ್ಷತೆಗೂ ಕಾರಿನಲ್ಲಿ ಸಾಕಷ್ಟು ವೈಶಿಷ್ಟ್ಯಗಳಿವೆ. ಗ್ಲೋಬಲ್ NCAP ಇದಕ್ಕೆ 5 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ಹ್ಯುಂಡೈ ವೆನ್ಯೂನಂತಹ ಕಾರುಗಳೊಂದಿಗೆ ಟಾಟಾ ನೆಕ್ಸಾನ್‌ ಪೈಪೋಟಿಗಿಳಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...