alex Certify ಬ್ರೇಕಿಂಗ್: CISF ತರಬೇತಿ ವೇಳೆ ಬಾಲಕನ ತಲೆಗೆ ತಗುಲಿದ ಗುಂಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕಿಂಗ್: CISF ತರಬೇತಿ ವೇಳೆ ಬಾಲಕನ ತಲೆಗೆ ತಗುಲಿದ ಗುಂಡು

ಸಮೀಪದ ಫೈರಿಂಗ್​ ರೇಂಜ್​ನಿಂದ ಬಂದ ಗುಂಡೊಂದು ತಲೆಗೆ ತಗುಲಿದ ಪರಿಣಾಮ 11 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆಯು ತಮಿಳುನಾಡಿನ ಪುದುಕೋಟ್ಟೈ ಎಂಬಲ್ಲಿ ನಡೆದಿದೆ.ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಶೂಟಿಂಗ್​ ರೇಂಜ್​ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ ತರಬೇತಿಯಲ್ಲಿ ನಿರತರಾಗಿದ್ದ ವೇಳೆಯಲ್ಲಿ ತರಬೇತುದಾರನ ಬಂದೂಕಿನಿಂದ ಮಿಸ್​ ಆಗಿ ಬಂದ ಗುಂಡೊಂದು ಬಾಲಕನ ತಲೆಗೆ ತಾಕಿದೆ ಎಂದು ವರದಿಯಾಗಿದೆ. ಗಾಯಗೊಂಡಿದ್ದ ಬಾಲಕನನ್ನು ಕೂಡಲೇ ಪುದುಕೋಟೈ ಮೆಡಿಕಲ್​ ಕಾಲೇಜಿಗೆ ಕರೆದುಕೊಂಡು ಹೋಗಲಾಯಿತಾದರೂ ಬಳಿಕ ವೈದ್ಯರ ಸಲಹೆ ಮೇರೆಗೆ ತಂಜಾವೂರು ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡ ಬಾಲಕನನ್ನು ಕೆ. ಪುಘಝೇಂದಿ ಎಂದು ಗುರುತಿಸಲಾಗಿದೆ. ತರಬೇತಿ ನಡೆಯುತ್ತಿದ್ದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಬಾಲಕನ ಅಜ್ಜನ ಮನೆ ಇದೆ ಎನ್ನಲಾಗಿದೆ. ಈತ ತರಬೇತಿ ಕೇಂದ್ರದ ಸಮೀಪದಲ್ಲೇ ಆಟವಾಡುತ್ತಿದ್ದ ವೇಳೆ ಗುಂಡು ತಗುಲುತ್ತಿದ್ದಂತೆಯೇ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ತರಬೇತಿ ಕೇಂದ್ರವನ್ನು ಬಂದ್ ಮಾಡಿಸಲಾಗಿದೆ.‌ ಗಾಯಗೊಂಡಿರುವ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯರು ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...