alex Certify ‘ಬ್ರಿಟನ್’ ಪ್ರಧಾನಿಯಾಗಿ ಅಳಿಯ ಆಯ್ಕೆಯಾದ ನಂತರ ಇನ್ಫೋಸಿಸ್ ನಾರಾಯಣ ಮೂರ್ತಿ ಮೊದಲ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬ್ರಿಟನ್’ ಪ್ರಧಾನಿಯಾಗಿ ಅಳಿಯ ಆಯ್ಕೆಯಾದ ನಂತರ ಇನ್ಫೋಸಿಸ್ ನಾರಾಯಣ ಮೂರ್ತಿ ಮೊದಲ ಪ್ರತಿಕ್ರಿಯೆ

ಬ್ರಿಟನ್ ಪ್ರಧಾನಿಯಾಗಿ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿಯ ಅಳಿಯ ರಿಷಿ ಸುನಾಕ್ ಆಯ್ಕೆಯಾಗಿದ್ದಾರೆ. ರಿಷಿ ಸುನಾಕ್ ಆಯ್ಕೆ ನಂತರ ಮೊದಲ ಪ್ರತಿಕ್ರಿಯೆ ನೀಡಿರುವ ನಾರಾಯಣ ಮೂರ್ತಿ, ಅವರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದಿದ್ದಾರೆ.

ಪಿಟಿಐಗೆ ಇ-ಮೇಲ್ ಸಂದೇಶ ಕಳುಹಿಸಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ, ರಿಷಿ ಸುನಾಕ್ ಅವರನ್ನು ಅಭಿನಂದಿಸಿದ್ದು, ಅವರ ಕುರಿತು ನಾವು ಹೆಮ್ಮೆ ಪಡುತ್ತೇವೆ ಹಾಗೂ ಯಶಸ್ಸನ್ನು ಬಯಸುತ್ತೇವೆ ಎಂದು ಹೇಳಿದ್ದಾರೆ.

ಯುನೈಟೆಡ್ ಕಿಂಗ್ಡಮ್ ಜನತೆಗೆ ಅವರು ತಮ್ಮ ಕೈಲಾದಷ್ಟು ಸೇವೆ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿರುವ ನಾರಾಯಣ ಮೂರ್ತಿ, ಈ ಕಾರ್ಯದಲ್ಲಿ ಅವರು ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ.

ರಿಷಿ ಸುನಾಕ್, ನಾರಾಯಣ ಮೂರ್ತಿ ಸುಧಾ ಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಅವರನ್ನು 2009ರಲ್ಲಿ ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ವಿವಾಹವಾಗಿದ್ದು, ಅವರಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...