alex Certify ಬೊಂಬಾಟ್ ಸ್ಟೆಪ್ಸ್ ಹಾಕಿ ವೇದಿಕೆಯನ್ನು ಚಿಂದಿ ಚಿತ್ರಾನ್ನ ಮಾಡಿದ ವಧು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೊಂಬಾಟ್ ಸ್ಟೆಪ್ಸ್ ಹಾಕಿ ವೇದಿಕೆಯನ್ನು ಚಿಂದಿ ಚಿತ್ರಾನ್ನ ಮಾಡಿದ ವಧು..!

Viral Video: Happy Bride Sets Wedding Stage on Fire With Her Dance on Sukhbir's Taare Gin Gin | Watchಇತ್ತೀಚೆಗೆ ಮೋಜಿನ ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹವು ಅಪೂರ್ಣವಾಗಿರುತ್ತದೆ ಎಂದರೆ ತಪ್ಪಿಲ್ಲ. ವಧುಗಳು ತಮ್ಮ ಮದುವೆಯ ದಿನದಂದು ನಾಚಿಕೆಯ ನೋಟವನ್ನು ಧರಿಸುವ ಮತ್ತು ಒಂದು ಕಡೆ ಶಾಂತವಾಗಿ ಕುಳಿತುಕೊಳ್ಳುವ ಆ ದಿನಗಳು ಕಳೆದುಹೋಗಿವೆ. ಇದೀಗ ಏನಿದ್ರೂ ಭರ್ಜರಿ ಡಾನ್ಸ್ ಒಂದೇ…..

ಇದೀಗ ಅಂತಹ ಒಂದು ವಿಡಿಯೋ ವೈರಲ್ ಆಗಿದ್ದು, ವಧು ಬೊಂಬಾಟ್ ಆಗಿ ಡಾನ್ಸ್ ಮಾಡಿದ್ದಾಳೆ. ಸುಂದರವಾದ ಕೆಂಪು ಲೆಹೆಂಗಾವನ್ನು ಧರಿಸಿರುವ ವಧು, ಸುಖ್ಬೀರ್ ಅವರ ತಾರೆ ಗಿನ್ ಜಿನ್ ಗೆ ನೃತ್ಯ ಮಾಡಿದ್ದಾರೆ. ಈ ಮೂಲಕ ವೇದಿಕೆಯನ್ನು ಚಿಂದಿ ಚಿತ್ರಾನ್ನ ಮಾಡಿದ್ದಾರೆ.

ಹಾಡು ಪ್ಲೇ ಆಗುತ್ತಿದ್ದಂತೆ ರೋಮಾಂಚನಗೊಂಡ ವಧು ತನ್ನದೇ ಆದ ಸ್ಟೈಲ್ ನಲ್ಲಿ ಉತ್ಸಾಹಭರಿತರಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಮತ್ತೊಬ್ಬ ಅತಿಥಿಯು ಸಂಭ್ರಮದಲ್ಲಿ ಆಕೆಯೊಂದಿಗೆ ಸೇರಿ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರೂ ಅದ್ಭುತವಾಗಿ ಕುಣಿದಿದ್ದಾರೆ. ವಿಡಿಯೋದ ಉದ್ದಕ್ಕೂ, ವಧು ತನ್ನ ಮುಖದ ಮೇಲೆ ಮುದ್ದಾದ ನಗುವನ್ನು ಹೊಂದಿದ್ದಾಳೆ. ಇದು ಆಕೆ ನಿಜವಾಗಿಯೂ ಸಂತೋಷವಾಗಿದ್ದಾಳೆ ಎಂಬುದನ್ನು ಸೂಚಿಸುತ್ತದೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಬಹಳ ವೇಗವಾಗಿ ವೈರಲ್ ಆಗಿದೆ. ವಧುವಿನ ಮನೋಜ್ಞ ನೃತ್ಯ ಕಂಡು ನೆಟ್ಟಿಗರು ಮನಸೋತಿದ್ದಾರೆ. ತಾನು ಕೂಡ ತನ್ನ ಮದುವೆಯ ದಿನದಂದು ಆಕೆಯಂತೆ ನೃತ್ಯ ಮಾಡುವುದಾಗಿ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇತರರು ಕಾಮೆಂಟ್‌ ವಿಭಾಗವನ್ನು ಬೆಂಕಿ ಮತ್ತು ಪ್ರೀತಿಯ ಎಮೋಜಿಗಳೊಂದಿಗೆ ತುಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...