alex Certify ಬೈಕ್‌ನಿಂದ ಬಿದ್ದ ವ್ಯಕ್ತಿಯ ಪ್ರಾಣ ಕಾಪಾಡಿದ ಆಪಲ್ ವಾಚ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್‌ನಿಂದ ಬಿದ್ದ ವ್ಯಕ್ತಿಯ ಪ್ರಾಣ ಕಾಪಾಡಿದ ಆಪಲ್ ವಾಚ್…..!

ತಂತ್ರಜ್ಞಾನವು ಅನೇಕ ಸಂದರ್ಭಗಳಲ್ಲಿ ಜೀವರಕ್ಷಕವಾಗಿ ಹೊರಹೊಮ್ಮುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಯುಎಸ್ ನ ವ್ಯಕ್ತಿಯೊಬ್ಬರು ಎಲೆಕ್ಟ್ರಿಕ್ ಬೈಕ್‌ನಿಂದ ಬಿದ್ದ ಕೂಡಲೇ ಅವರ ಕೈಯಲ್ಲಿದ್ದ ಆಪಲ್ ವಾಚ್ ಸ್ವಯಂಚಾಲಿತವಾಗಿ 911 ಅನ್ನು ಡಯಲ್ ಮಾಡಿದೆ. ಹೀಗಾಗಿ ಅವರು ಸಕಾಲಿಕ ವೈದ್ಯಕೀಯ ಆರೈಕೆ ಪಡೆದಿದ್ದಾರೆ.

ವ್ಯಕ್ತಿಯೊಬ್ಬರು ಬಿದ್ದಿರುವುದಾಗಿ ಕ್ಯಾಲಿಫೋರ್ನಿಯಾದ ಹರ್ಮೋಸಾ ಬೀಚ್ ಪೊಲೀಸರಿಗೆ ವಾಚ್ ಸಂದೇಶ ರವಾನಿಸಿದೆ. ಸ್ಥಳದ ಆಧಾರದ ಮೇಲೆ ಇಲಾಖೆಯು ಕೂಡಲೇ ತುರ್ತು ಸೇವೆಗಳನ್ನು ಆದೇಶಿಸಿದೆ. ಜನವರಿ 22 ರಂದು ಈ ಘಟನೆಯು ಸಂಭವಿಸಿದೆ.

ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದಾಗ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಹಾಗೂ ಆತನ ತಲೆಯಿಂದ ತೀವ್ರವಾಗಿ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲವು ದಿನಗಳ ಚಿಕಿತ್ಸೆಯ ನಂತರ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ವ್ಯಕ್ತಿಯು ಬಿದ್ದ ಕೂಡಲೇ ಆಪಲ್ ವಾಚ್ ತುರ್ತಾಗಿ ಸಂದೇಶ ರವಾನಿಸಿದ್ದರಿಂದ ವ್ಯಕ್ತಿಯ ಜೀವ ಉಳಿಯುವಲ್ಲಿ ಯಶಸ್ವಿಯಾಗಿದೆ. ಇಲ್ಲದಿದ್ದಲ್ಲಿ ಬಹುಶಃ ವಿಪರೀತ ರಕ್ತಸ್ರಾವದಿಂದ ವ್ಯಕ್ತಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ದಟ್ಟವಾಗಿತ್ತು.

— AppleInsider (@appleinsider) February 2, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...