alex Certify ಬೇಸಿಗೆ ದಾಹ ತಣಿಸೋ ಮಾವಿನ ಹಣ್ಣಿನ ಕುಲ್ಫಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆ ದಾಹ ತಣಿಸೋ ಮಾವಿನ ಹಣ್ಣಿನ ಕುಲ್ಫಿ

ಬೇಸಿಗೆಯಲ್ಲಿ ದಾಹ, ದಣಿವು ಸರ್ವೇ ಸಾಮಾನ್ಯ. ಬಾಯರಿಕೆ ತಣಿಸಲು ಕೋಲ್ಡ್ ವಾಟರ್ ಬದಲಿಗೆ ತಂಪಾದ ಮಾವಿನ ಹಣ್ಣಿನ ಕುಲ್ಫಿ ತಿಂದ್ರೆ ಆ ತೃಪ್ತಿಯೇ ಬೇರೆ. ಇದಕ್ಕಾಗಿ ಐಸ್​ಕ್ರೀಂ ಅಂಗಡಿ ಮೊರೆ ಹೋಗುವ ಬದಲಿಗೆ ನೀವೇ ಮನೆಯಲ್ಲೇ ಮಾವಿನ ಹಣ್ಣಿನ ಕುಲ್ಫಿ ಮಾಡಬಹುದು. ಅದು ಹೇಗೆ ಅನ್ನೋದು ಇಲ್ಲಿದೆ ಗಮನಿಸಿ.

ಮಾವಿನ ಹಣ್ಣಿನ ಕುಲ್ಫಿ ಮಾಡಲು ಬೇಕಾಗುವ ಸಾಮಗ್ರಿಗಳು

ಒಂದು ಕಪ್ ಹಾಲು

2 ಮಾವಿನ ಹಣ್ಣಿನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಪ್ಯೂರಿ ಮಾಡಿಕೊಳ್ಳಬೇಕು

ಒಂದು ಕಪ್ ಕಂಡೆನ್ಸ್ಡ್​​ ಮಿಲ್ಕ್

ಒಂದು ಕಪ್ ಫ್ರೆಶ್ ಕ್ರೀಂ

2 ಟೇಬಲ್ ಸ್ಪೂನ್ ಸ್ಪೂನ್ ಕೇಸರಿ ಮಿಶ್ರಿತ ಹಾಲು

ಸಕ್ಕರೆ 2 ಸ್ಪೂನ್

ಮಾಡುವ ವಿಧಾನ

ಒಂದು ಬೌಲ್​ಗೆ ಫ್ರೆಶ್ ಕ್ರೀಂ ಗೆ ಹಾಕಿಕೊಳ್ಳಬೇಕು. ನಂತರ ಕಂಡೆನ್ಸ್ಡ್​ ಮಿಲ್ಕ್, ಸಕ್ಕರೆ ಪುಡಿ ಸೇರಿಸಿ ಮಿಕ್ಸಿ ಅಥವಾ ಬ್ಲೆಂಡರ್​ನಲ್ಲಿ ಬ್ಲೆಂಡ್ ಮಾಡಿಕೊಳ್ಳಬೇಕು. ಸ್ವಲ್ಪ ಗಟ್ಟಿ ಹದಕ್ಕೆ ಬರುವ ತನಕ ಬ್ಲೆಂಡ್ ಮಾಡಿಕೊಳ್ಳಬೇಕು.

ಈಗ ಇದಕ್ಕೆ ಹಾಲು ಮತ್ತು ಮಾವಿನ ಪ್ಯೂರಿ, ಕೇಸರಿ ಹಾಲು, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ. 5 ರಿಂದ 10 ನಿಮಿಷ ಬ್ಲೆಂಡ್ ಆದ ಮೇಲೆ ಇದನ್ನು ಕುಲ್ಫಿ ಮೌಲ್ಡ್ ಗೆ ಹಾಕಿಕೊಳ್ಳಬೇಕು.

ಮೌಲ್ಡ್ ಇಲ್ಲವೇ ಲೋಟಕ್ಕೆ ಐಸ್​​ ಕ್ರೀಂ ಸ್ಟಿಕ್ ಹಾಕಿಕೊಂಡು ಕುಲ್ಫಿ ಮಿಶ್ರಣ ಫಿಲ್ ಮಾಡಬೇಕು. ಈ ಕುಲ್ಫಿಗಳನ್ನು 12 ಗಂಟೆಗಳ ಕಾಲ ಫ್ರೀಜರ್​ನಲ್ಲಿಡಬೇಕು.

ನಂತರ ಒಂದು ಬೌಲ್​ಗೆ ನೀರು ಹಾಕಿ ಕುಲ್ಫಿ ಮೌಲ್ಡ್​ ಇಟ್ಟು ಕುಲ್ಫಿಯನ್ನು ತೆಗೆಯಬಹುದು. ಇಷ್ಟಾದ್ರೆ ಕೂಲ್ ಕೂಲ್ ಮಾವಿನ ಹಣ್ಣಿನ ಕುಲ್ಫಿ ಸವಿಯಲು ಸಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...