alex Certify ಬೇಸಿಗೆಯಲ್ಲಿ ಮುಖದ ಅಂದ ಹೆಚ್ಚಿಸಲು ಇಲ್ಲಿದೆ ಕೆಲವೊಂದು ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಮುಖದ ಅಂದ ಹೆಚ್ಚಿಸಲು ಇಲ್ಲಿದೆ ಕೆಲವೊಂದು ಟಿಪ್ಸ್

ಬೇಸಿಗೆಯಲ್ಲಿನ ಉಷ್ಣ ವಾತಾವರಣದಿಂದ ದೇಹ ಬಲು ಬೇಗ ಬಳಲುತ್ತದೆ. ಬಿಸಿಲಿನ ತೀವ್ರವಾದ ಝಳ, ಧೂಳು, ಚರ್ಮ ಮತ್ತು ಕೂದಲಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಸನ್ ಸ್ಕ್ರೀನ್ ಬಳಸುವುದು ಉತ್ತಮ.

ಹಾಗೆಯೇ ಬಾಯಾರಿಕೆ ನೀಗಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಬಣ್ಣ ಬಣ್ಣದ ರಾಸಾಯನಿಕ ಮಿಶ್ರಿತ ಪಾನೀಯಕ್ಕಿಂತ ತಾಜಾ ಹಣ್ಣಿನ ರಸ ಸೇವಿಸಿದರೆ ಒಳ್ಳೆಯದು.

ಕಾಟನ್ ವಸ್ತ್ರಗಳನ್ನು ಧರಿಸುವುದರಿಂದ ಸ್ವಲ್ಪ ಮಟ್ಟಿನ ಸೆಕೆ ಕಡಿಮೆ ಮಾಡಿಕೊಳ್ಳಬಹುದು, ಸೌತೆಕಾಯಿ, ಕಲ್ಲಂಗಡಿ, ಟೊಮಾಟೊ ಹೀಗೆ ಯಾವುದಾದರೂ ಸುಲಭದಲ್ಲಿ ದೊರೆಯುವ ಹಣ್ಣಿನ ಸಿಪ್ಪೆಯಿಂದ ಸಿಗುವ ರಸವನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡಬೇಕು. ನಂತರ ಟಾಲ್ಕಂ ಪೌಡರ್ ಹಾಕಿಕೊಳ್ಳುವುದರಿಂದ ಬೆವರಿನ ವಾಸನೆ ಇರುವುದಿಲ್ಲ. ತ್ವಚೆಯೂ ಮೃದುವಾಗಿರುತ್ತದೆ.

ಮೆಂತೆ ನೆನೆಸಿ ಮೊಸರಿನ ಜೊತೆಯಲ್ಲಿ ರುಬ್ಬಿ ಕೂದಲಿಗೆ ಪ್ಯಾಕ್ ಹಾಕಿ ತಲೆ ಸ್ನಾನ ಮಾಡಿದರೆ ದೇಹ ತಂಪಾಗಿ ಬೇಸಿಗೆಯಲ್ಲೂ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...