alex Certify ಬೇಸಿಗೆಯಲ್ಲಿ ಬೆಳ್ಳುಳ್ಳಿ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ನಿಮ್ಮ ಅನುಮಾನಗಳಿಗೆ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಬೆಳ್ಳುಳ್ಳಿ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ನಿಮ್ಮ ಅನುಮಾನಗಳಿಗೆ ಉತ್ತರ

ಬೆಳ್ಳುಳ್ಳಿ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಬೇಸಿಗೆಯಲ್ಲಿ ಇದನ್ನು ತಿನ್ನುವುದು ಸೂಕ್ತವೇ ಅನ್ನೋ ಅನುಮಾನ ಹಲವರಲ್ಲಿದೆ. ಬೇಸಿಗೆಯಲ್ಲಿ ನೀವು ಬೆಳ್ಳುಳ್ಳಿ ಸೇವನೆ ಮಾಡಬಹುದು, ಆದರೆ ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಸೂಕ್ತ. ಎಣ್ಣೆ ಮತ್ತು ಮಸಾಲೆಗಳೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ನಿಮ್ಮ ಆರೋಗ್ಯ ಹದಗೆಡಬಹುದು.

ವಿಶೇಷ ಅಂದ್ರೆ ಬೇಸಿಗೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ ಹಲವಾರು ರೋಗಗಳಿಂದ ಮುಕ್ತಿ ಸಿಗುತ್ತದೆ. ಮಲಬದ್ಧತೆ ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಬೆಳ್ಳುಳ್ಳಿ ತುಂಬಾ ಪ್ರಯೋಜನಕಾರಿಯಾಗಿದೆ.

ಬೇಸಿಗೆಯಲ್ಲಿ ಮಲಬದ್ಧತೆ ಉಂಟಾಗುವ ಸಾಧ್ಯತೆ ಹೆಚ್ಚು. ನಿಯಮಿತವಾಗಿ ನೀವು ಹಸಿ ಬೆಳ್ಳುಳ್ಳಿ ಸೇವನೆ ಮಾಡಿದರೆ ಮಲ ವಿಸರ್ಜನೆ ಸುಲಲಿತವಾಗುತ್ತದೆ. ರಕ್ತದಲ್ಲಿರುವ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಕೂಡ ಹಸಿ ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಇದನ್ನು ಸೇವನೆ ಮಾಡಬೇಕು.

ಹೃದಯದ ಆರೋಗ್ಯಕ್ಕೂ ಹಸಿ ಬೆಳ್ಳುಳ್ಳಿ ತಿನ್ನುವುದು ಉತ್ತಮ. ಹೃದಯವನ್ನು ಸದೃಢವಾಗಿಡಲು ಇದು ತುಂಬಾ ಪ್ರಯೋಜನಕಾರಿ. ಬೇಸಿಗೆಯಲ್ಲಿ ನಿತ್ಯ 1-2 ಹಸಿ ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟ  ನಿಯಂತ್ರಣದಲ್ಲಿರುತ್ತದೆ. ಇದರಿಂದ ಹೃದಯಾಘಾತದಂತಹ ಅಪಾಯಗಳು ಸಂಭವಿಸುವುದಿಲ್ಲ.

ವೈರಸ್‌ ಹಾಗೂ ಬ್ಯಾಕ್ಟೀರಿಯಾಗಳಿಂದಾಗುವ ಸೋಂಕನ್ನು ತಡೆಗಟ್ಟುವಲ್ಲಿ ಸಹ ಬೆಳ್ಳುಳ್ಳಿ ಉಪಯುಕ್ತವಾಗಿದೆ. ವಾಸ್ತವವಾಗಿ ಇದು ಆಂಟಿವೈರಲ್, ಆಂಟಿಫಂಗಲ್ ಮತ್ತು ಆಂಟಿಒಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ. ಬೇಸಿಗೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಬರುವ ಸೋಂಕು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...