alex Certify ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿನ್ನುವುದರಿಂದ ಇದೆ ಇಷ್ಟೆಲ್ಲಾ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿನ್ನುವುದರಿಂದ ಇದೆ ಇಷ್ಟೆಲ್ಲಾ ಲಾಭ

ಬಿರು ಬೇಸಿಗೆಯಲ್ಲಿ ತಣ್ಣನೆಯ ವಸ್ತುಗಳನ್ನು ತಿನ್ನಬೇಕು ಎನಿಸುತ್ತದೆ. ಅದರಲ್ಲೂ ದೇಹವನ್ನು ತಂಪಾಗಿಡುವ ಆಹಾರ ಪದಾರ್ಥಗಳ ಸೇವನೆ ಉತ್ತಮ. ಹಾಗಾಗಿ ಬೇಸಿಗೆಯಲ್ಲಿ ನಿಯಮಿತವಾಗಿ ಮೊಸರನ್ನು ಸೇವಿಸಿದರೆ ದೇಹವು ತಂಪಾಗಿರುವುದಲ್ಲದೆ ನೀವು ಆರೋಗ್ಯವಾಗಿರುತ್ತೀರಿ. ಮೊಸರು ಯಾವ್ಯಾವ ರೋಗಗಳಿಂದ ನಿಮ್ಮನ್ನು ದೂರವಿಡುತ್ತದೆ ಎಂಬುದನ್ನೂ ತಿಳಿದುಕೊಳ್ಳೋಣ.

ಮೊಸರಿನಲ್ಲಿ ಕಾರ್ಬೋಹೈಡ್ರೇಟ್‌, ಸಕ್ಕರೆ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ಸತು, ತಾಮ್ರ, ಸೆಲೆನಿಯಮ್, ವಿಟಮಿನ್ ಸಿ, ವಿಟಮಿನ್ ಬಿ -6, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಕೆ, ಕೊಬ್ಬಿನಾಮ್ಲಗಳು ಹೀಗೆ ಹಲವು ಪೋಷಕಾಂಶಗಳಿವೆ. ಬೇಸಿಗೆಯಲ್ಲಿ ಮೊಸರು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪ್ರತಿದಿನ ಮೊಸರು ಸೇವಿಸಿದರೆ ನಿಮ್ಮ ರೋಗನಿರೋಧಕ ಶಕ್ತಿ ಮತ್ತಷ್ಟು ಬಲವಾಗುತ್ತದೆ.

ಮೊಸರು ದೇಹದ ಮೂಳೆಗಳನ್ನು ಬಲಪಡಿಸುತ್ತದೆ. ವಾಸ್ತವವಾಗಿ, ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ರಂಜಕವು ಹೇರಳವಾಗಿ ಕಂಡುಬರುತ್ತದೆ. ಎಲುಬುಗಳು ಹಾಗೂ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ಮೊಸರು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಬಯಸುವವರು ನಿಯಮಿತವಾಗಿ ಮೊಸರು ಸೇವಿಸಿ. ಮೊಸರಿನಲ್ಲಿ ಪ್ರೋಟೀನ್ ಹಾಗೂ ಆರೋಗ್ಯಕರ ಕೊಬ್ಬು ಇದೆ. ಬೇಸಿಗೆಯಲ್ಲಿ ಪ್ರತಿನಿತ್ಯ ಮೊಸರು ಸೇವಿಸಿದರೆ ತೂಕ ಕಡಿಮೆಯಾಗುವುದರ ಜೊತೆಗೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನೂ ನಿವಾರಿಸಿಕೊಳ್ಳಬಹುದು.

ಮೊಸರು ತಿನ್ನುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಅಜೀರ್ಣ ಸಮಸ್ಯೆ ಇರುವವರು ಪ್ರತಿನಿತ್ಯ ಮೊಸರನ್ನು ಸೇವನೆ ಮಾಡಬೇಕು. ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ನಿಮ್ಮ ಆರೋಗ್ಯಕ್ಕೆ ಪೂರಕವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...