alex Certify ‘ಬೇಕಿಂಗ್ ಸೋಡಾ’ ಬಳಸಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೇಕಿಂಗ್ ಸೋಡಾ’ ಬಳಸಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ

ಬೇಕಿಂಗ್ ಸೋಡಾವನ್ನು ಅಡುಗೆಗೆ ನಾವೆಲ್ಲಾ ಉಪಯೋಗಿಸುತ್ತ ಇರುತ್ತೇವೆ. ಕೇಕ್ ಮಾಡುವಾಗ, ಬಿಸ್ಕೇಟ್ ಮಾಡುವಾಗ ಕೆಲವೊಮ್ಮೆ ಅಡುಗೆ ಮನೆಯ ವಸ್ತುಗಳ ಕ್ಲಿನಿಂಗ್ ಗೆ ಕೂಡ ಈ ಬೇಕಿಂಗ್ ಸೋಡಾ ಸಹಾಯಕಾರಿಯಾಗಿದೆ.

ಈ ಬೇಕಿಂಗ್ ಸೋಡಾ ಉಪಯೋಗಿಸಿಕೊಂಡು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.

ಆಫೀಸ್ ಕೆಲಸಕ್ಕೆ ಹೋಗುವವರು ಅಥವಾ ಬೆವರಿನ ದುರ್ಗಂಧವನ್ನು ನಿವಾರಿಸಿಕೊಳ್ಳಲು ಡಿಯೋಡರೆಂಟ್ ಅನ್ನು ಉಪಯೋಗಿಸುತ್ತಿರುತ್ತೇವೆ. ಇದರ ಅತೀಯಾದ ಬಳಕೆಯಿಂದ ಕಂಕುಳ ಬಳಿ ಕಪ್ಪಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು 1 ಟೀ ಸ್ಪೂನ್ ಬೇಕಿಂಗ್ ಸೋಡಾಕ್ಕೆ 1 ಟೇಬಲ್ ಸ್ಪೂನ್ ನೀರು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಇದರಿಂದ ನಿಮ್ಮ ಕಂಕುಳ ಬಳಿ ನಿಧಾನಕ್ಕೆ ಮಸಾಜ್ ಮಾಡಿಕೊಳ್ಳಿ. 5 ನಿಮಿಷ ಬಿಟ್ಟು ಚೆನ್ನಾಗಿ ತೊಳೆಯಿರಿ ಇದರಿಂದ ಕಪ್ಪು ಕಲೆ, ವಾಸನೆ ಹೋಗುತ್ತದೆ.

ಇನ್ನು ಮೊಡವೆ ಸಮಸ್ಯೆ ಇರುವವರು ಬೇಕಿಂಗ್ ಸೋಡಾಕ್ಕೆ ಸ್ವಲ್ಪ ನೀರು ಸೇರಿಸಿ ಈ ಮಿಶ್ರಣವನ್ನು ಮೊಡವೆ ಇದ್ದ ಜಾಗಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ ನೀರಿನಿಂದ ಮುಖ ತೊಳೆಯಿರಿ.

ಬೇಕಿಂಗ್ ಸೋಡಾಕ್ಕೆ ಸ್ವಲ್ಪ ತೆಂಗಿನೆಣ್ಣೆ ಸೇರಿಸಿಕೊಂಡು ನಿಧಾನಕ್ಕೆ ನಿಮ್ಮ ಮುಖಕ್ಕೆ ಮಸಾಜ್ ಮಾಡಿದರೆ ಒಳ್ಳೆಯ ಫೇಸ್ ವಾಶ್ ರೀತಿ ಕೆಲಸ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...