alex Certify ಬೆವರಿನ ವಾಸನೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಅದು ಗಂಭೀರ ಕಾಯಿಲೆಗಳ ಲಕ್ಷಣವೂ ಇರಬಹುದು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆವರಿನ ವಾಸನೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಅದು ಗಂಭೀರ ಕಾಯಿಲೆಗಳ ಲಕ್ಷಣವೂ ಇರಬಹುದು…..!

ಬೆವರುವುದು ದೇಹದ ಸಾಮಾನ್ಯ ಪ್ರಕ್ರಿಯೆ. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಬೆವರುವುದು ಅವಶ್ಯಕ. ಬೆವರು ಎಲ್ಲರಿಗೂ ಬರುತ್ತದೆ, ಆದರೆ ಬೆವರಿನ ವಾಸನೆ ಒಂದೇ ತೆರನಾಗಿ ಇರುವುದಿಲ್ಲ. ಬೆವರಿನ ದುರ್ನಾತದ ಹಿಂದೆ ಅನೇಕ ಕಾರಣಗಳಿವೆ. ಕೆಲವರು ಸುಗಂಧ ದ್ರವ್ಯವನ್ನು ಪೂಸಿಕೊಂಡರು ವಿಪರೀತ ಬೆವರು ವಾಸನೆ ಬರುತ್ತದೆ. ಬೆವರಿನ ದುರ್ವಾಸನೆಗೆ ಕೆಲವು ಬ್ಯಾಕ್ಟೀರಿಯಾಗಳು ಕಾರಣ ಎಂದು ಹೆಚ್ಚಿನ ಜನರು ನಂಬುತ್ತಾರೆ. ಆದರೆ ಬೆವರುವಿಕೆಯ ಹಿಂದೆ ಬೇರೆ ಬೇರೆ  ಕಾರಣಗಳಿರುತ್ತವೆ. ಅದು ಕೆಲವೊಂದು ರೋಗಗಳ ಸಂಕೇತವೂ ಆಗಿರುತ್ತದೆ.

ಸಕ್ಕರೆ ಕಾಯಿಲೆ: ಬೆವರಿನ ವಾಸನೆಯು ಮಧುಮೇಹದ ಲಕ್ಷಣವಾಗಿರಬಹುದು. ಮಧುಮೇಹದಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿ ಬದಲಾವಣೆಗಳಾಗುತ್ತವೆ ಮತ್ತು ಬೆವರು ವಾಸನೆ ಬರಲಾರಂಭಿಸುತ್ತದೆ. ಸಕ್ಕರೆ ಕಾಯಿಲೆ ಇದ್ದಾಗ ಬೆವರಿನ ವಾಸನೆ ಬೇರೆ ತೆರನಾಗಿ ಇರುತ್ತದೆ.

ಥೈರಾಯ್ಡ್: ಬೆವರುವುದು ಥೈರಾಯ್ಡ್ ಗ್ರಂಥಿಯ ಅತಿಯಾದ ಚಟುವಟಿಕೆಯ ಸಂಕೇತವಾಗಿರಬಹುದು. ಥೈರಾಯ್ಡ್ ಗ್ರಂಥಿಯು ಹೆಚ್ಚು ಕೆಲಸ ಮಾಡಿದಾಗ, ಹೆಚ್ಚು ಬೆವರುವಿಕೆ ಇರುತ್ತದೆ. ಈ ಬೆವರು ದುರ್ವಾಸನೆಯಿಂದ ಕೂಡಿರಬಹುದು. ಒತ್ತಡ: ಒತ್ತಡದಿಂದಾಗಿ ಬೆವರು ವಾಸನೆ ಬರುತ್ತದೆ. ಒತ್ತಡವಿದ್ದಾಗ ಅತಿಯಾದ ಬೆವರುವಿಕೆ ಉಂಟಾಗುತ್ತದೆ. ನೀವು ಬೆವರಿನ ವಾಸನೆಯನ್ನು ನಿಯಂತ್ರಿಸಲು ಬಯಸಿದರೆ ಒತ್ತಡದಿಂದ ದೂರವಿರುವುದು ಅವಶ್ಯಕ.

ಔಷಧಿಗಳು : ಅನೇಕರು ಪ್ರತಿ ಸಣ್ಣ ಸಮಸ್ಯೆಗೂ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಔಷಧಿಗಳನ್ನು ಅತಿಯಾಗಿ ಸೇವನೆ ಮಾಡಿದಾಗ ಬೆವರು ವಾಸನೆ ಬರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅನವಶ್ಯಕವಾಗಿ ಹೆಚ್ಚು ಔಷಧಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.

ತಪ್ಪಾದ ಆಹಾರ ಸೇವನೆ: ತಪ್ಪಾದ ಆಹಾರವನ್ನು ಸೇವಿಸುವುದರಿಂದ ಬೆವರು ವಾಸನೆ ಬರಲಾರಂಭಿಸುತ್ತದೆ. ಹಸಿ ಬೆಳ್ಳುಳ್ಳಿ, ಹಸಿ ಈರುಳ್ಳಿ ತಿನ್ನುವುದರಿಂದ ಕೆಲವರ ದೇಹ ದುರ್ವಾಸನೆ ಬೀರುತ್ತದೆ. ದಿಢೀರನೆ ನೀವು ಅತಿಯಾದ ಮಸಾಲೆಯುಕ್ತ ಆಹಾರವನ್ನು ತಿನ್ನಲು ಪ್ರಾರಂಭಿಸಿದರೆ ಅದು ಕೂಡ ಬೆವರಿನಿಂದ ಕೆಟ್ಟ ವಾಸನೆಗೆ ಕಾರಣವಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...