alex Certify ಬೆವರಿನ ವಾಸನೆಗೆ ಮನೆ ಮದ್ದಿನಿಂದ ಹೇಳಿ ಗುಡ್ ಬೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆವರಿನ ವಾಸನೆಗೆ ಮನೆ ಮದ್ದಿನಿಂದ ಹೇಳಿ ಗುಡ್ ಬೈ

ಬೇಸಿಗೆಯಲ್ಲಿ ಬೆವರು ಸಾಮಾನ್ಯ. ಅತಿ ಬೆವರು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಂಕಳಿನಿಂದ ಬರುವ ಕೆಟ್ಟ ವಾಸನೆ ಅಕ್ಕ-ಪಕ್ಕದವರು ದೂರ ಓಡುವಂತೆ ಮಾಡುತ್ತದೆ. ಬೆವರಿನ ಕೆಟ್ಟ ವಾಸನೆ ಸೆಂಟ್ ವಾಸನೆಯನ್ನೂ ನುಂಗಿ ಹಾಕುತ್ತದೆ. ಇಂಥ ಬೆವರಿನ ಸಮಸ್ಯೆ ನಿಮಗೂ ಕಾಡ್ತಿದ್ದರೆ ಈ ಸುಲಭ ಟಿಪ್ಸ್ ಅನುಸರಿಸಿ.

ಬೇಕಿಂಗ್ ಸೋಡಾ ಕಂಕಳಿನ ವಾಸನೆಯನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಒಂದು ಚಮಚ ನಿಂಬೆ ರಸಕ್ಕೆ ಒಂದು ಚಮಚ ಬೇಕಿಂಗ್ ಸೋಡಾ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಕಂಕಳಿಗೆ ಹಚ್ಚಿ 15 ನಿಮಿಷ ಹಾಗೆ ಬಿಡಿ. ನಂತ್ರ ಸ್ವಚ್ಛ ನೀರಿನಲ್ಲಿ ತೊಳೆಯಿರಿ.

ಮನೆಯಲ್ಲಿ ಆಟವಾಡುವಾಗಲೇ ನಡೆದಿದೆ ನಡೆಯಬಾರದ ಘಟನೆ, ನೀರಿನ ಬಕೆಟ್ ಗೆ ಬಿದ್ದು ಮಗು ಸಾವು

ಗುಲಾಬಿ ರಸವನ್ನು ಕಂಕಳಿನ ವಾಸನೆ ಕಡಿಮೆ ಮಾಡಲು ಬಳಸಬಹುದು. ಸ್ನಾನದ ನೀರಿಗೆ ಗುಲಾಬಿ ರಸವನ್ನು ಬೆರೆಸಿ ಸ್ನಾನ ಮಾಡಬಹುದು. ಸೆಂಟ್ ರೂಪದಲ್ಲಿ ಕಂಕಳಿಗೆ ಗುಲಾಬಿ ರಸವನ್ನು ಹಾಕಿಕೊಳ್ಳಬಹುದು. ಇದು ಕಂಕಳಿನಲ್ಲಿ ಬರುವ ಬೆವರು ಹಾಗೂ ವಾಸನೆಯನ್ನು ಕಡಿಮೆ ಮಾಡುತ್ತದೆ.

ಆಪಲ್ ವಿನೆಗರ್ ಕಂಕಳಿನ ಬೆವರಿನಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾವನ್ನು ತಡೆಯುತ್ತದೆ. ಆಪಲ್ ವಿನೆಗರನ್ನು ಕಂಕಳಿಗೆ ಹಚ್ಚುವುದ್ರಿಂದ ಬೆವರಿನ ಪ್ರಮಾಣ ಕೂಡ ಕಡಿಮೆಯಾಗುತ್ತದೆ.

BIG NEWS: ಫಸ್ಟ್ ಡೋಸ್ ಪಡೆದು 84 ದಿನವಾದ್ರೂ 2 ನೇ ಡೋಸ್ ಲಸಿಕೆ ಪಡೆದಿಲ್ಲ 11 ಕೋಟಿ ಜನ, ಕೇಂದ್ರದಿಂದ ನಾಳೆ ಮಹತ್ವದ ಸಭೆ

ನಿಂಬೆ, ಆಮ್ಲದ ಗುಣವನ್ನು ಹೊಂದಿದೆ. ಇದು ಬೆವರಿನಿಂದ ಬರುವ ವಾಸನೆಯನ್ನು ತಡೆಯುತ್ತದೆ. ನಿಂಬೆ ಹಣ್ಣನ್ನು ಕತ್ತರಿಸಿ ಕಂಕಳಿಗೆ ಹಚ್ಚಿ ಮಸಾಜ್ ಮಾಡಬೇಕು. 10 ನಿಮಿಷ ಬಿಟ್ಟು ಕಂಕಳನ್ನು ಸ್ವಚ್ಛ ಮಾಡಿಕೊಳ್ಳಿ.

ಟೊಮೊಟೊ ರಸವನ್ನು ಕಂಕಳಿಗೆ ಹಾಕಿ 15 ನಿಮಿಷ ಮಸಾಜ್ ಮಾಡಬೇಕು. ಎರಡು ಅಥವಾ ಮೂರು ದಿನ ಟೊಮೊಟೊ ಮಸಾಜ್ ಮಾಡುತ್ತ ಬಂದಲ್ಲಿ ಕಂಕಳಿನಿಂದ ಬರುವ ವಾಸನೆ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...