alex Certify ಬೆತ್ತಲೆ ವಿಡಿಯೋ ಕಾಲ್ ಮಾಡಿ ನಿವೃತ್ತ ಪ್ರೊಫೆಸರ್ ಗೆ ಗಾಳ; 21 ಲಕ್ಷ ರೂಪಾಯಿ ವಸೂಲಿ ಮಾಡಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆತ್ತಲೆ ವಿಡಿಯೋ ಕಾಲ್ ಮಾಡಿ ನಿವೃತ್ತ ಪ್ರೊಫೆಸರ್ ಗೆ ಗಾಳ; 21 ಲಕ್ಷ ರೂಪಾಯಿ ವಸೂಲಿ ಮಾಡಿದ ಯುವತಿ

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಬ್ಯಾಂಕ್ ಖಾತೆ ಅಪ್ಡೇಟ್ ಮಾಡುವ ಹೆಸರಿನಲ್ಲಿ ಓಟಿಪಿ ಪಡೆದು ಹಣ ವಂಚಿಸುವ ವಿಧಾನ ಒಂದು ಕಡೆಯಾದರೆ ಮತ್ತೊಂದು ಕಡೆ ವಿಡಿಯೋ ಕಾಲ್ ಮಾಡುವ ಯುವತಿಯರು, ಅರೆನಗ್ನರಾಗಿ ತಾವು ಕಾಲ್ ಮಾಡಿದವರಿಗೂ ಇದೇ ರೀತಿ ಮಾಡಲು ಹೇಳುವ ಮೂಲಕ ಅದನ್ನು ರೆಕಾರ್ಡ್ ಮಾಡಿಕೊಂಡು ಬಳಿಕ ಬ್ಲಾಕ್ ಮೇಲ್ ಮಾಡುತ್ತಾರೆ.

ಇದೀಗ ಇಂಥವುದೇ ಮತ್ತೊಂದು ಘಟನೆ ಧಾರವಾಡದಲ್ಲಿ ನಡೆದಿದೆ. ನಿವೃತ್ತ ಪ್ರೊಫೆಸರ್ ಒಬ್ಬರಿಗೆ ವಿಡಿಯೋ ಕಾಲ್ ಮಾಡಿದ್ದ ಅಂಜಲಿ ಶರ್ಮಾ ಎಂದು ಹೇಳಿಕೊಂಡಿದ್ದ ಯುವತಿ, ತನ್ನ ಸಹಚರ ವಿಕ್ರಂ ಎಂಬಾತನೊಂದಿಗೆ ಸೇರಿಕೊಂಡು ಬರೋಬ್ಬರಿ 21 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದಾಳೆ. ಆರಂಭದಲ್ಲಿ ಮರ್ಯಾದೆಗೆ ಅಂಜಿದ್ದ ನಿವೃತ್ತ ಪ್ರೊಫೆಸರ್ ಆಕೆ ಕೇಳಿದಷ್ಟು ಹಣ ನೀಡಿದ್ದು, ಯಾವಾಗ ಅವರ ಡಿಮ್ಯಾಂಡ್ ದಿನೇ ದಿನೇ ಜಾಸ್ತಿ ಆಯಿತೋ ಅಂತಿಮವಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಅದೇಗೋ ನಿವೃತ್ತ ಪ್ರೊಫೆಸರ್ ಮೊಬೈಲ್ ನಂಬರ್ ಸಂಪಾದಿಸಿದ ಈ ಯುವತಿ ಅವರಿಗೆ ವಾಟ್ಸಾಪ್ ಮೂಲಕ ವಿಡಿಯೋ ಕಾಲ್ ಮಾಡಿದ್ದಾಳೆ. ಪ್ರಚೋದಕ ಮಾತುಗಳನ್ನ ಆಡುತ್ತಾ ಆಕೆ ಬೆತ್ತಲೆಯಾಗಿದ್ದು, ಇದೆಲ್ಲವನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಬಳಿಕ ದೆಹಲಿ ಕ್ರೈಂ ಬ್ರಾಂಚ್ ಪೊಲೀಸ್ ಎಂದು ಹೇಳಿಕೊಂಡು ವಿಕ್ರಂ ಎಂಬಾತ ಕರೆ ಮಾಡಿದ್ದು, ವಿಚಾರ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಮೊದಲಿಗೆ ಹೆದರಿದ ನಿವೃತ್ತ ಪ್ರೊಫೆಸರ್ ಅವರು ಕೇಳಿದಾಗೆಲ್ಲ ಹಣ ರವಾನಿಸಿದ್ದು, ಈ ಮೊತ್ತ ಬರೋಬ್ಬರಿ 21 ಲಕ್ಷ ರೂಪಾಯಿಗಳಾಗಿದೆ. ಯಾವಾಗ ಅವರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟರೋ ಆಗ ಹುಬ್ಬಳ್ಳಿ ಸೈಬರ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅಲ್ಲದೆ ತನಗೆ ಮೋಸ ಆದ ರೀತಿಯಲ್ಲಿ ಮತ್ಯಾರಿಗೂ ಆಗಬಾರದೆಂಬ ಕಾರಣಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...