alex Certify ಬೆಂಗಳೂರಲ್ಲಿ ಹೆಚ್ಚಾಯ್ತು ಬೈಕ್ ಕಳ್ಳರ ಹಾವಳಿ, ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ಹೆಚ್ಚಾಯ್ತು ಬೈಕ್ ಕಳ್ಳರ ಹಾವಳಿ, ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ

ಬೆಂಗಳೂರಿನಲ್ಲಿ ಬೈಕ್ ಕಳ್ಳತನ ಅನ್ನೋದು ಸಾಮಾನ್ಯ ಅನ್ನವಷ್ಟು ಹೆಚ್ಚಾಗಿ ಹೋಗಿದೆ‌. ಆದರೆ ಕೊರೋನಾ ಹಾಗೂ ಲಾಕ್ ಡೌನ್ ನಿಂದ ಕಮ್ಮಿಯಾಗಿದ್ದ ಬೈಕ್ ಕಳ್ಳರ ಹಾವಳಿ ಮತ್ತೆ ಶುರುವಾಗಿದೆ. ನಗರದ ಪೊಲೀಸ್ ಠಾಣೆಗಳಲ್ಲಿ ಈಗಾಗ್ಲೇ ಸಾವಿರಾರು ಬೈಕ್ ಕಳ್ಳತನದ ಕೇಸ್ ಗಳು ಪೆಂಡಿಂಗ್ ಆಗಿರುವಾಗ, ಪ್ರತಿದಿನ ನೂರಾರು ದೂರುಗಳು ವರದಿಯಾಗುತ್ತಿವೆ.

ನಗರದ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತದ್ದೆ ಬೈಕ್ ಕಳ್ಳತನದ ಪ್ರಕರಣವೊಂದು ದಾಖಲಾಗಿದೆ. ಡಿ 30ರಂದು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ರಾತ್ರೋ ರಾತ್ರಿ ಕಳ್ಳರ ಗ್ಯಾಂಗ್ ಒಂದು ಎತ್ತೊಯ್ದಿದೆ. ಸ್ಕೂಟಿಯಲ್ಲಿ ಬಂದ ಇಬ್ಬರು ಮನೆಯ ಹೊರಗಡೆ ನಿಲ್ಲಿಸಿದ್ದ ಪಲ್ಸರ್ 200ಎನ್ಎಸ್ ಬೈಕ್‌ ಅನ್ನು ಕದ್ದೊಯ್ದಿದ್ದಾರೆ. ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ.

ಮನೆ ಮುಂದೆ ನಿಲ್ಲಿಸಿದ್ದ ಗಾಡಿಯನ್ನ ಕದ್ದಿರುವ ಕಳ್ಳರಲ್ಲಿ ಒಬ್ಬ ತಾವು ಬಂದ ಸ್ಕೂಟಿಯನ್ನ ಚಲಾಯಿಸಿಕೊಂಡು ಹೋಗುತ್ತಿದ್ದರೆ, ಮತ್ತೊಬ್ಬ ಕದ್ದ ಪಲ್ಸರ್ ಗಾಡಿಯನ್ನೇರಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಡಿಯೋ ಆಧಾರವಾಗಿಟ್ಟುಕೊಂಡು, ಹನುಮಂತನಗರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...