alex Certify ಬುಲೆಟ್‌ಗೆ ಪ್ರತಿಸ್ಪರ್ಧಿಯಾಗಿದ್ದ ಯೆಜ್ಡಿ ಬೈಕ್‌ ಮರೆಯಾಗಿದ್ದು ಹೇಗೆ ಗೊತ್ತಾ ? ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುಲೆಟ್‌ಗೆ ಪ್ರತಿಸ್ಪರ್ಧಿಯಾಗಿದ್ದ ಯೆಜ್ಡಿ ಬೈಕ್‌ ಮರೆಯಾಗಿದ್ದು ಹೇಗೆ ಗೊತ್ತಾ ? ಇಲ್ಲಿದೆ ಡಿಟೇಲ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಆಫ್-ರೋಡಿಂಗ್ ಮತ್ತು ಪವರ್‌ ಫುಲ್‌ ಮೋಟಾರ್‌ ಸೈಕಲ್‌ಗಳಲ್ಲಿ ನಂಬರ್‌‌ ಒನ್ ಅಂದ್ರೆ ರಾಯಲ್ ಎನ್‌ಫೀಲ್ಡ್ ಅಂತಾನೇ ಹೇಳಲಾಗುತ್ತದೆ. ರೆಟ್ರೋ ಲುಕ್‌ನೊಂದಿಗೆ ಬಂದಿರುವ ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಬೈಕ್ ಎಲ್ಲಾ ವಯೋಮಾನದವರಿಗೂ ಇಷ್ಟವಾಗಿದೆ. ಆದರೆ ರಾಯಲ್‌ ಎನ್‌ಫೀಲ್ಡ್‌ಗೂ ಮೊದಲು ಭಾರತದಲ್ಲಿ ರಾಜ್ಯಭಾರ ಮಾಡಿದ್ದು ಯೆಜ್ಡಿ ಬೈಕ್‌ಗಳು.

ಯೆಜ್ಡಿ ಮೋಟಾರ್‌ಸೈಕಲ್‌ಗಳನ್ನು ಅನೇಕ ಚಲನಚಿತ್ರಗಳಲ್ಲಿಯೂ ಬಳಸುತ್ತಿದ್ದ ಕಾಲವೊಂದಿತ್ತು. 1981ರ ‘ಚಶ್ಮೆ ಬದ್ದೂರ್’ ಚಿತ್ರದಲ್ಲಿ ಈ ಬೈಕ್‌ಗೆ ‘ಕಾಲಿ ಘೋಡಿ’ ಎಂದು ಕರೆಯಲಾಗಿತ್ತು. ಇಷ್ಟೆಲ್ಲಾ ಜನಪ್ರಿಯತೆಯಿದ್ದರೂ ಯೆಜ್ಡಿ ಕಾಲಾನಂತರ ಭಾರತೀಯ ಮಾರುಕಟ್ಟೆಗೆ ವಿದಾಯ ಹೇಳಬೇಕಾಯಿತು. ಈ ಬೈಕಿನ ಸಂಪೂರ್ಣ ಇತಿಹಾಸವನ್ನು ನೋಡೋಣ.

ಭಾರತಕ್ಕೆ ಯೆಜ್ಡಿ ಪ್ರವೇಶ…… ಯೆಜ್ಡಿ ಬೈಕ್ ಅನ್ನು 1960ರ ದಶಕದಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಯಿತು. ಇದನ್ನು ಜಾವಾ ಕಂಪನಿ ತಯಾರಿಸಿದೆ. ಮೈಸೂರಿನ ರಾಜ ಜಯಚಾಮರಾಜೇಂದ್ರ ಒಡೆಯರ್ ಮತ್ತು ಪಾರ್ಸಿ ಉದ್ಯಮಿ ರುಸ್ತಮ್ ಇರಾನಿ, ಭಾರತಕ್ಕೆ ಜಾವಾ ಕಂಪನಿ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದರು. ಮೈಸೂರಿನಲ್ಲಿ ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್ ಎಂಬ ಮೋಟಾರ್‌ಸೈಕಲ್ ಕಂಪನಿಯನ್ನು ರಚಿಸಲಾಯಿತು. ಇದು ನಡೆದಿದ್ದು 1960ರಲ್ಲಿ. 1973 ರಿಂದ ಯೆಜ್ಡಿ ಎಂಬ ಬ್ರಾಂಡ್ ಹೆಸರಿನಲ್ಲಿ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಲಾರಂಭಿಸಿತು.

ಕಂಪನಿಯು ‘ಜಾವಾ 250- ಟೈಪ್ 353’ ಹೆಸರಿನಲ್ಲಿ ಮೊದಲ ಬೈಕ್ ಅನ್ನು ಬಿಡುಗಡೆ ಮಾಡಿತು. ಈ ಬೈಕ್‌ ಮಾರುಕಟ್ಟೆಯಲ್ಲಿ ಭಾರೀ ಕ್ರೇಝ್‌ ಸೃಷ್ಟಿಸಿತ್ತು. ಇದರ ನಂತರ ಜಾವಾ 50, ಜಾವಾ 50 ಟೈಪ್ 555 ಎಂಬ ಎರಡು ಬೈಕ್‌ಗಳನ್ನು ಬಿಡುಗಡೆ ಮಾಡಲಾಯಿತು. ನಂತರ ಜಾವಾ ಯೆಜ್ಡಿ ಹೆಸರಿನ ಮೊದಲ ಬೈಕ್ ಅನ್ನು ಬಿಡುಗಡೆ ಮಾಡಿತು, ‘ಯೆಜ್ಡಿ ಜೆಇಟಿ 60’. ಸುಮಾರು ಮೂರು ದಶಕಗಳಿಂದ ಕಂಪನಿಯ ಈ ಬೈಕ್‌ಗಳಿಗೆ ಸ್ಪರ್ಧಿಸಲು ಯಾರೂ ಇರಲಿಲ್ಲ.‌ 1973 ರಲ್ಲಿ, ಜಾವಾ ಕಂಪನಿಯ ಪರವಾನಗಿ ಅವಧಿ ಮುಗಿದಿದೆ.

ಆಗ ರುಸ್ತಮ್ ಇರಾನಿ, ಯೆಜ್ಡಿ ಹೆಸರಿನಲ್ಲಿ ಕಂಪನಿಯನ್ನು ನೋಂದಾಯಿಸಿಕೊಂಡರು. ಆದರೆ 1990ರ ನಂತರ ಅನೇಕ ಹೊಸ ಮಾದರಿಯ ಬೈಕ್‌ಗಳು ಮಾರುಕಟ್ಟೆಗೆ ಬಂದವು ಪರಿಣಾಮ ಯೆಜ್ಡಿ ಮಾರಾಟ ಕಡಿಮೆಯಾಯಿತು. ಕಂಪನಿಯ ಕೊನೆಯ ಬೈಕ್ ಬಿಡುಗಡೆಯಾಗಿದ್ದು 1996 ರಲ್ಲಿ. ಅದೇ ವರ್ಷ ಕಂಪನಿಯನ್ನೂ ಮುಚ್ಚಬೇಕಾಯಿತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...