alex Certify ಬೀದಿಬದಿ ಫುಡ್​ ಸ್ಟಾಲ್​ ಗೆ ಸೋನು ಸೂದ್​ ಹೆಸರು….! ನಟ ಹೇಳಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿಬದಿ ಫುಡ್​ ಸ್ಟಾಲ್​ ಗೆ ಸೋನು ಸೂದ್​ ಹೆಸರು….! ನಟ ಹೇಳಿದ್ದೇನು ಗೊತ್ತಾ….?

ಕೋವಿಡ್​ ಸಂದರ್ಭದಲ್ಲಿ ಜನ ಸೇವೆಯ ಮೂಲಕ ತನ್ನ ಇನ್ನೊಂದು ಮುಖವನ್ನು ದೇಶಕ್ಕೆ ಪರಿಚಯಿಸಿದ ಬಹುಭಾಷಾ ತಾರೆ ಸೋನುಸೂದ್​ ಅನೇಕರ ಪಾಲಿಗೆ ನಿಜವಾದ ಹೀರೋ. ಸೋನು ಯಾವ ರೀತಿ ಜನರ ಮನ ಗೆದ್ದಿದ್ದಾರೆ ಎಂಬುದಕ್ಕೆ ತಾಜಾ ಉದಾಹರಣೆ ಎಂದರೆ, ಪೂರ್ವ ದೆಹಲಿಯ ವ್ಯಕ್ತಿಯೊಬ್ಬರು ಸೋನು ಸೂದ್​ ಹೆಸರನ್ನೇ ತಮ್ಮ ಫುಡ್​ ಸ್ಟಾಲ್​ಗೆ ಇಟ್ಟಿದ್ದಾರೆ.

ಆರಾಧನಾ ರಾಥೋಡ್​ ಎಂಬುವರು ಟ್ವಿಟರ್​ನಲ್ಲಿ ಹಂಚಿಕೊಂಡ ಪೋಸ್ಟ್​ನಲ್ಲಿರುವಂತೆ ಸೋನು ಸೂದ್​ ಹೆಸರಿನ ಫುಡ್​ ಸ್ಟಾಲ್​ ಕಾಣಿಸುತ್ತದೆ. ಚಿಕ್ಕ ಚೊಕ್ಕವಾಗಿ ಇರಿಸಲಾದ ಸ್ಟಾಲ್ ಗೆ​ ಸೂದ್​ ಹೆಸರಿಡಲು ಕಾರಣವೂ ಇದೆ. ಈ ಫುಡ್​ ಸ್ಟಾಲ್​ ಆರಂಭಿಸಿ ತನ್ನ ಕಾಲಮೇಲೆ ಆತ ನಿಂತುಕೊಳ್ಳಲು ಸಹಾಯ ಮಾಡಿದ್ದು ಸೋನ್​ ಸೂದ್​ ಅವರಂತೆ.

ಈ ವ್ಯಕ್ತಿಯ ಸಣ್ಣ ವ್ಯಾಪಾರ ಚೆನ್ನಾಗಿ ನಡೆಯುತ್ತಿರುವುದು ಕಂಡು ಖುಷಿಯಾಯಿತು. ನಿಮ್ಮ ಸಹಾಯದ ಹಸ್ತವು ಇಂದು ಅವರನ್ನು ಉದ್ಯೋಗದಲ್ಲಿ ಸಶಕ್ತರನ್ನಾಗಿಸಿದೆ ಎಂದು ಆರಾಧನಾ ಎಂಬವರು ಟ್ವೀಟ್​ ಮಾಡಿದ್ದಾರೆ.

ಈ ಪೋಸ್ಟ್​ಗೆ ಉತ್ತರ ನೀಡಿರುವ ಸೋನುಸೂದ್​, “ಭಾಯ್​ ಸೆ ಕಹೋ ಕಭಿ ಹುಮೇ ಭೀ ನಾನ್​ ಖಿಲಾಯೇ (ಅಣ್ಣನಿಗೆ ಹೇಳಿ, ನನಗೂ ಒಂದು ಪ್ಲೇಟ್​…..) ಎಂದು ಲವ್​ ಸಿಂಬಲ್​ನೊಂದಿಗೆ ಹಾಕಿದ್ದಾರೆ. ನೆಟ್ಟಿಗರು ಈ ಪೋಸ್ಟ್​ ಹಾಗೂ ಸೋನು ಸೂದ್​ ಉತ್ತರವನ್ನು ಮೆಚ್ಚಿದ್ದಾರೆ. ನೂರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

— Aradhana Rathore (Filmmaker) (@RathoreAradhana) June 25, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...