alex Certify ಬಿಹಾರದಲ್ಲೊಬ್ಬ ಡಿಜಿಟಲ್ ಭಿಕ್ಷುಕ….! ಚಿಲ್ಲರೆ ಇಲ್ದಿದ್ರೆ ಏನಂತೆ ಕ್ಯೂಆರ್ ಕೋಡ್ ಇದೆಯಲ್ಲಾ…!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಹಾರದಲ್ಲೊಬ್ಬ ಡಿಜಿಟಲ್ ಭಿಕ್ಷುಕ….! ಚಿಲ್ಲರೆ ಇಲ್ದಿದ್ರೆ ಏನಂತೆ ಕ್ಯೂಆರ್ ಕೋಡ್ ಇದೆಯಲ್ಲಾ…!!

ನಾವೀಗ ಆನ್ ಲೈನ್ ಯುಗದಲ್ಲಿದ್ದೀವಿ. ಪ್ರತಿಯೊಂದು ಆನ್ಲೈನ್ ನಲ್ಲೇ ಆಗುತ್ತಿದೆ. ಸಣ್ಣ ಸಣ್ಣ ಅಂಗಡಿಗಳಲ್ಲೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡುವ ವ್ಯವಸ್ಥೆ ಇದೆ. ಇಷ್ಟು ದಿನ ಇಲ್ಲದೆ ಇದ್ದದ್ದು ಡಿಜಿಟಲ್ ಭಿಕ್ಷಾಟನೆ. ಈಗ ಇದು ಸಹ ಶುರುವಾಗಿದ್ದು ಬಿಹಾರದಲ್ಲೊಬ್ಬ ಭಿಕ್ಷುಕ ದೇಶದ ಮೊತ್ತ ಮೊದಲ ಡಿಜಿಟಲ್ ಭಿಕ್ಷುಕ ಎಂದು ಕರೆಸಿಕೊಂಡಿದ್ದಾನೆ.

40 ವರ್ಷದ ರಾಜು ಪ್ರಸಾದ್, ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ, ಬೆಟ್ಟಿಯಾ ಪಟ್ಟಣದ ನಿವಾಸಿ. ಈತ ನಗರದಲ್ಲಿ ಭಿಕ್ಷೆ ಬೇಡುತ್ತಿದ್ದು, ಚೆಲ್ಲರೆ ನಾಣ್ಯಗಳಿಲ್ಲದಿದ್ದರೆ ಫೋನ್‌ ಪೇ ಮಾಡಿ ಅಥವಾ ಡಿಜಿಟಲ್‌ ರೂಪದಲ್ಲಿ ಪಾವತಿಸಿ ಎಂದು ಜನರಲ್ಲಿ ಮನವಿ ಮಾಡುತ್ತಿದ್ದಾನೆ.

ನಿಮ್ಮಲ್ಲಿ ನಾಣ್ಯಗಳಿಲ್ಲದಿದ್ದರೆ, ಚಿಂತಿಸಬೇಡಿ. ನೀವು ಇ-ವಾಲೆಟ್ ಮೂಲಕ ನನಗೆ ಹಣ ಪಾವತಿಸಬಹುದು. ಈಗ ನಾನು ಡಿಜಿಟಲ್ ಪಾವತಿಯ ಸೌಲಭ್ಯವನ್ನು ಹೊಂದಿದ್ದೇನೆ ಎಂದು ಪ್ರಸಾದ್ ಅವರು ಚಿಲ್ಲರೆ ಇಲ್ಲ ಎಂದು ಹೇಳಿ ಭಿಕ್ಷೆ ಕೊಡಲು ಹಿಂಜರಿಯುವ ದಾರಿಹೋಕರಿಗೆ ಹೇಳುವುದನ್ನು ಕೇಳಬಹುದು.

ಹಿಜಾಬ್, ಕೇಸರಿ ಶಾಲು ವಿವಾದ; ರಸ್ತೆ ದಾಟುತ್ತಿದ್ದ ಶಿಕ್ಷಕನ ಮೇಲೆ ರಾಡ್ ನಿಂದ ಹಲ್ಲೆ; ನಾಲ್ವರು ವಿದ್ಯಾರ್ಥಿಗಳಿಗೂ ಗಾಯ

ಕಳೆದ ಶುಕ್ರವಾರದಿಂದ ಅವರು ಆನ್‌ಲೈನ್‌ ಪಾವತಿ ವ್ಯವಸ್ಥೆ ಮಾಡಿಕೊಂಡಿದ್ದು, ಮೊದಲ ದಿನ ಅವರು ತಮ್ಮ ಇ ವ್ಯಾಲೆಟ್‌ ಭಿಕ್ಷಾಟನೆಯಲ್ಲಿ 40 ರೂಪಾಯಿ ನಾಣ್ಯಗಳ ಹೊರತುಪಡಿಸಿ 57 ರೂಪಾಯಿಗಳನ್ನು ಪಡೆದರು. ಪ್ರಸಾದ್ ಅವರು ತಮ್ಮ 10ನೇ ವಯಸ್ಸಿನಿಂದಲೂ ಬೆಟ್ಟಿಯಾ ರೈಲು ನಿಲ್ದಾಣದ ಸುತ್ತಮುತ್ತ ಭಿಕ್ಷೆ ಬೇಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಡಿಜಿಟಲ್ ಇಂಡಿಯಾ’ ಅಭಿಯಾನದ ಕಟ್ಟಾ ಬೆಂಬಲಿಗರಾಗಿದ್ದ ಪ್ರಸಾದ್ ಅವರು ಡಿಜಿಟಲ್ ಪಾವತಿ ಸೌಲಭ್ಯವನ್ನು ಪಡೆಯಲು ಇತ್ತೀಚೆಗೆ ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ.

ನನ್ನ ಬಳಿ  ಆಧಾರ್ ಕಾರ್ಡ್ ಇದ್ದರೂ, ಪ್ಯಾನ್ ಕಾರ್ಡ್ ಇರಲಿಲ್ಲ, ಇದು ಬ್ಯಾಂಕ್ ಖಾತೆ ತೆರೆಯುವ ಪ್ರಕ್ರಿಯೆಯನ್ನು ವಿಳಂಬಗೊಳಿಸಿತು. ಈಗ ನಾನು ಭಿಕ್ಷುಕನಾಗಿದ್ದರೂ ಡಿಜಿಟಲ್ ಪಾವತಿಯ ಸೌಲಭ್ಯವನ್ನು ಪಡೆಯುತ್ತಿದ್ದೇನೆ ಎಂದು ಅವರು ಹೆಮ್ಮೆಪಡುತ್ತಾರೆ.

ರಾಜ್ಯದ ಮಾಜಿ‌ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್ ಅವರ ಅಭಿಮಾನಿಯಾಗಿದ್ದ ಪಟೇಲ್, ಈಗ ನರೇಂದ್ರ ಮೋದಿಯವರ ಕಟ್ಟಾಭಿಮಾನಿಯಾಗಿದ್ದಾರೆ. ನರೇಂದ್ರ ಮೋದಿಯವರ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ ಕೇಳುವುದನ್ನು ಎಂದು ಮರೆಯದ ಇವರು, ಅವರ ಡಿಜಿಟಲೀಕರಣದ ಭಾಷಣದಿಂದ ಪ್ರೇರಣೆಗೊಂಡಿದ್ದಾರೆ. ಇಂಟರ್ನೆಟ್ ನಲ್ಲಿ ಹಲವರು ಈತನ ಬುದ್ಧಿವಂತಿಕೆಯನ್ನ ಹೊಗಳಿದರು, ಆದಷ್ಟು ಬೇಗ ಭಾರತದಿಂದ ಭಿಕ್ಷಾಟನೆಯನ್ನ ಇಲ್ಲಗೊಳಿಸಿ ಎಂದು ಮನವಿ‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...